ETV Bharat / bharat

ತಮಿಳುನಾಡು ಮೀನುಗಾರರ ಮೇಲೆ ಶ್ರೀಲಂಕಾ ಕಡಲ್ಗಳ್ಳರ ದಾಳಿ: ವಾಕಿ ಟಾಕಿ, ಜಿಪಿಎಸ್​ ದೋಚಿ ಪರಾರಿ - FISHERMEN ATTACKED

author img

By ETV Bharat Karnataka Team

Published : Apr 30, 2024, 1:18 PM IST

ನಾಗಪಟ್ಟಿಣಂನ ಮೀನುಗಾರರ ಮೇಲೆ ಶ್ರೀಲಂಕಾ ಕಡಲ್ಗಳ್ಳರಿಂದ ದಾಳಿ ನಡೆದಿದೆ.

TN fishermen attacked mid-sea, robbed by pirates

ಚೆನ್ನೈ : ತಮಿಳುನಾಡಿನ ನಾಗಪಟ್ಟಿಣಂನ ಮೀನುಗಾರರ ಗುಂಪಿನ ಮೇಲೆ ಶ್ರೀಲಂಕಾದ ಕಡಲ್ಗಳ್ಳರು ದಾಳಿ ನಡೆಸಿ ದರೋಡೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ. ದಾಳಿಯಲ್ಲಿ ಮುರುಗನ್ ಎಂಬ ಮೀನುಗಾರ ಗಾಯಗೊಂಡಿದ್ದು, ಅವರನ್ನು ನಾಗಪಟ್ಟಿಣಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಗಪಟ್ಟಿಣಂ ಕರಾವಳಿಯಿಂದ 15 ನಾಟಿಕಲ್ ಮೈಲಿ ದೂರದಲ್ಲಿ ಅಂತಾರಾಷ್ಟ್ರೀಯ ಕಡಲ ಗಡಿಯ ಬಳಿ ಈ ದಾಳಿ ನಡೆದಿದೆ. ಕಡಲ್ಗಳ್ಳರು ದೋಣಿಯಿಂದ ವಾಕಿ - ಟಾಕಿ ಮತ್ತು ಜಿಪಿಎಸ್ ಅನ್ನು ದೋಚಿಕೊಂಡು ಹೋಗಿದ್ದಾರೆ ಎಂದು ತಮಿಳುನಾಡು ಕರಾವಳಿ ಪೊಲೀಸರು ತಿಳಿಸಿದ್ದಾರೆ.

ಕಡಲ್ಗಳ್ಳರು ಶ್ರೀಲಂಕಾ ಮೂಲದವರು ಎಂದು ನಾಗಪಟ್ಟಿಣಂ ಮೀನುಗಾರರ ಸಂಘದ ಮುಖಂಡ ಆರ್. ಆಂಟನಿ ಜಾನ್ಸನ್ ಹೇಳಿದ್ದಾರೆ. "ಸಮುದ್ರದಲ್ಲಿ ನಮ್ಮ ಮೇಲೆ ನಿರಂತರವಾಗಿ ದಾಳಿಗಳಾಗುತ್ತಿವೆ. ಕಡಲ್ಗಳ್ಳರ ದಾಳಿಗಳು, ಶ್ರೀಲಂಕಾ ನೌಕಾಪಡೆ ನಮ್ಮ ಯಾಂತ್ರೀಕೃತ ದೋಣಿಗಳನ್ನು ವಶಪಡಿಸಿಕೊಳ್ಳುವುದು, ಮೀನುಗಾರರನ್ನು ಬಂಧಿಸುವುದು ಇಂಥ ದೌರ್ಜನ್ಯಗಳು ಪದೇ ಪದೆ ನಡೆಯುತ್ತಿವೆ. ಕೇಂದ್ರ ಸರ್ಕಾರ ತಕ್ಷಣ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಈ ಗಂಭೀರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು" ಎಂದು ಜಾನ್ಸನ್ ಐಎಎನ್ಎಸ್​ಗೆ ತಿಳಿಸಿದರು.

ಕಡಲ್ಗಳ್ಳರ ದಾಳಿ ಮತ್ತು ಶ್ರೀಲಂಕಾ ನೌಕಾಪಡೆಗಳ ದೌರ್ಜನ್ಯಕ್ಕೆ ಬೆದರಿ ಅನೇಕ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಹಿಂಜರಿಯುವಂತಾಗಿದೆ. ಅಲ್ಲದೇ ಸಮುದ್ರಕ್ಕೆ ಇಳಿದ ಮೀನುಗಾರರು ಸುರಕ್ಷಿತವಾಗಿ ಮರಳಿ ಬರುವ ಬಗ್ಗೆ ಅವರ ಕುಟುಂಬಸ್ಥರು ಸದಾ ಆತಂಕದಲ್ಲಿಯೇ ಇರುವಂತಾಗಿದೆ ಎಂದು ಜಾನ್ಸನ್ ಹೇಳಿದರು. ನಾಗಪಟ್ಟಿಣಂನ ಮೀನುಗಾರರು ಇತ್ತೀಚಿನ ದಿನಗಳಲ್ಲಿ ಸಮುದ್ರಕ್ಕೆ ಇಳಿಯಲು ಹಿಂಜರಿಯುತ್ತಿದ್ದಾರೆ ಎಂದು ತಮಿಳುನಾಡು ಕರಾವಳಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೂವರು ಭಾರತೀಯ ಮೀನುಗಾರರ ಬಿಡುಗಡೆ: ಶ್ರೀಲಂಕಾದ ಜೈಲಿನಲ್ಲಿದ್ದ ಮತ್ತು ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಿದ್ದ ಮೂವರು ತಮಿಳುನಾಡಿನ ಮೀನುಗಾರರನ್ನು ಶ್ರೀಲಂಕಾದ ನ್ಯಾಯಾಲಯವು ಬಿಡುಗಡೆ ಮಾಡಿದೆ ಎಂದು ಮೀನುಗಾರರ ಸಂಘದ ಮುಖಂಡ ಪಿ. ಯೇಸು ರಾಜಾ ಏ.26 ರಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ, ಭಾರತೀಯ ಹೈಕಮಿಷನ್ ಅಧಿಕಾರಿಗಳು, ಶ್ರೀಲಂಕಾದ ನ್ಯಾಯಾಂಗ ಮತ್ತು ತಮಿಳುನಾಡು ಸರ್ಕಾರದ ಪ್ರಯತ್ನಗಳಿಗೆ ಧನ್ಯವಾದ ಅರ್ಪಿಸಿದ ಜೇಸು ರಾಜಾ, ಇನ್ನೂ ಎಂಟು ಮೀನುಗಾರರು ಶ್ರೀಲಂಕಾ ಜೈಲುಗಳಲ್ಲಿದ್ದಾರೆ ಮತ್ತು ಅವರನ್ನು ಕೂಡ ತ್ವರಿತವಾಗಿ ಬಿಡುಗಡೆ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು. ಸುಮಾರು ಒಂದು ತಿಂಗಳ ಹಿಂದೆ, ಶ್ರೀಲಂಕಾದ ನ್ಯಾಯಾಲಯವು 11 ಮೀನುಗಾರರಿಗೆ ಆರು ತಿಂಗಳಿನಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿತ್ತು.

ಇದನ್ನೂ ಓದಿ : ವಾರಾಣಸಿ ಸೇರಿ ದೇಶದ 30 ವಿಮಾನ ನಿಲ್ದಾಣಗಳ ಮೇಲೆ ಬಾಂಬ್ ಬೆದರಿಕೆ: ಭದ್ರತಾ ಸಂಸ್ಥೆಗಳಿಂದ ಹೈ ಅಲರ್ಟ್​ ಘೋಷಣೆ - BOMB THREAT AIRPORT

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.