ETV Bharat / bharat

ತಾಜ್​ಮಹಲ್​ನಲ್ಲಿ ಶಿವರಾತ್ರಿಯಂದು ಜಲಾಭಿಷೇಕಕ್ಕೆ ಅವಕಾಶ ನೀಡಿ: ಆಗ್ರಾ ಕೋರ್ಟ್​ಗೆ ಅರ್ಜಿ - Yogi Youth Brigade

ಈಗಿನ ತಾಜ್​ಮಹಲ್​ ಪುರಾತನ ಕಾಲದಲ್ಲಿ 'ತೇಜೋ ಮಹಾಲಯ'​ ಆಗಿತ್ತು. ಮಹಾ ಶಿವರಾತ್ರಿಗೆ ಅಲ್ಲಿ ಜಲಾಭೀಷೇಕ ಮಾಡಲು ಕೋರಿ ಯೋಗಿ ಯುವ ಬ್ರಿಗೇಡ್​ ಆಗ್ರಾದ ಸ್ಥಳೀಯ ಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ.

ತಾಜ್​ಮಹಲ್
ತಾಜ್​ಮಹಲ್
author img

By ETV Bharat Karnataka Team

Published : Mar 5, 2024, 2:16 PM IST

ಆಗ್ರಾ(ಉತ್ತರಪ್ರದೇಶ): ತಾಜ್​ಮಹಲ್ 'ಪ್ರಾಚೀನ ಶಿವ ದೇವಾಲಯ'ವಾಗಿದೆ. ಅಲ್ಲಿ ಮಹಾಶಿವರಾತ್ರಿಯಂದು ಹಿಂದುಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಆಗ್ರಾದ ಸ್ಥಳೀಯ ನ್ಯಾಯಾಲಯದಲ್ಲಿ ಯೋಗಿ ಯುವ ಬ್ರಿಗೇಡ್​ನಿಂದ ಅರ್ಜಿ ಸಲ್ಲಿಸಲಾಗಿದೆ.

ತಾಜ್​ಮಹಲ್​ ಶಿವ ದೇವಾಲಯ ಎಂಬುದು ಹಿಂದಿನಿಂದಲೂ ಇರುವ ವಾದ. ಹೀಗಾಗಿ ಅಲ್ಲಿ ಹಿಂದುಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ತಾಜ್‌ಮಹಲ್‌ಗೆ ಗಂಗಾಜಲ ಹಾಗೂ ಜಲಾಭಿಷೇಕ ಪ್ರೋಕ್ಷಣೆ ಮಾಡಬೇಕಿದೆ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಈಗಿನ ತಾಜ್​ಮಹಲ್​ ಪುರಾತನ ಕಾಲದಲ್ಲಿ ತೇಜೋ ಮಹಾಲಯ ಆಗಿತ್ತು. ಅಂದರೆ ಅದು ಶಿವನ ದೇವಾಲಯ. ಹೀಗಾಗಿ ಮಹಾ ಶಿವರಾತ್ರಿಯಂದು ಅಲ್ಲಿ ಜಲಾಭಿಷೇಕ ನಡೆಸಲು ಭಾರತೀಯ ಪುತಾತತ್ವ ಇಲಾಖೆಯಿಂದ (ಎಎಸ್ಐ​) ಅವಕಾಶ ಮಾಡಿಕೊಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಯೋಗಿ ಯುವ ಬ್ರಿಗೇಡ್‌ನ ರಾಜ್ಯಾಧ್ಯಕ್ಷ ಕುನ್ವರ್ ಅಜಯ್ ತೋಮರ್ ಅವರು, ವಕೀಲ ಶಿವ ಆಧಾರ್ ಸಿಂಗ್ ತೋಮರ್ ಮತ್ತು ವಕೀಲ ಜಮ್ಮನ್ ಸಿಂಗ್ ರಘುವಂಶಿ ಮೂಲಕ ಹೊಸ ಅರ್ಜಿ ಸಲ್ಲಿಸಿದ್ದಾರೆ.

ಗಂಗಾಭಿಷೇಕಕ್ಕೆ ಅವಕಾಶ ಕೊಡಿ: ತಾಜ್​ಮಹಲ್ ಅನ್ನು ತೇಜೋ ಮಹಾಲಯ ಶಿವ ಮಂದಿರ ಎಂದು ಘೋಷಿಸುವ ಮೂಲಕ ನಾಲ್ವರು ಅಧಿಕಾರಿಗಳೊಂದಿಗೆ ಶಿವರಾತ್ರಿಯಂದು ಗಂಗಾಜಲದಿಂದ ಅಭಿಷೇಕ ಮಾಡಲು ಎಎಸ್ಐಯಿಂದ ಅನುಮತಿ ಕೋರಿದ್ದಾರೆ.

ಮೊಘಲರ ಕಾಲದಲ್ಲಿ ಸಾವಿರಾರು ದೇವಾಲಯಗಳನ್ನು ಕೆಡವಿ ಅವುಗಳ ಮೇಲೆ ಗೋರಿಗಳು ಮತ್ತು ಮಸೀದಿಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಉದಾಹರಣೆ ಅಯೋಧ್ಯೆ, ಮಥುರಾ ಮತ್ತು ಕಾಶಿ. ಬೇರೆಯವರ ಮನೆಗೆ ನಿಮ್ಮ ಹೆಸರಿನ ನಾಮಫಲಕ ಹಾಕುವುದರಿಂದ ಅದು ಸ್ವಂತ ಮನೆಯಾಗುವುದಿಲ್ಲ. ಅದೇ ರೀತಿ ತಾಜ್‌ಮಹಲ್‌ಗೂ ಮುನ್ನ ತೇಜೋಮಹಾಲಯ ಶಿವನ ದೇವಸ್ಥಾನ ಇತ್ತು ಎಂದು ಅರ್ಜಿದಾರರು ಅಭಿಪ್ರಾಯಪಟ್ಟಿದ್ದಾರೆ.

ಇದು ತೇಜೋಮಹಾಲಯ: ಯೋಗಿ ಯುವ ಬ್ರಿಗೇಡ್ ಪ್ರತಿನಿಧಿಸುವ ವಕೀಲ ಶಿವ ಆಧಾರ್ ಸಿಂಗ್ ತೋಮರ್, 1212 ರಲ್ಲಿ ರಾಜ ಪರಮ ದೇವ್ ದ್ರಾವಿದೇವ್ ಆಗ್ರಾದಲ್ಲಿ ತೇಜೋಮಹಾಲಯ ತೇಜೋಮಹಲ್ ಎಂದು ಕರೆಯಲ್ಪಡುವ ಶಿವ ದೇವಾಲಯವನ್ನು ನಿರ್ಮಿಸಿದರು. ಇಲ್ಲಿಯೇ ಈಗಿನ ತಾಜ್​ಮಹಲ್ ಅನ್ನು 1653 ರಲ್ಲಿ ಕಟ್ಟಲಾಗಿದೆ. ಮುಖ್ಯ ಗುಮ್ಮಟದಲ್ಲಿರುವ ಕಲಶವು ಹಿಂದೂ ದೇವಾಲಯಗಳ ಮೇಲೆ ಇರುವಂತೆಯೇ ಇದೆ. ಕಲಶದ ಮೇಲೆ ಚಂದ್ರನಿದ್ದಾನೆ. ಚಂದ್ರ ಮತ್ತು ಕಲಶದ ತುದಿಯು ತ್ರಿಶೂಲದ ಆಕಾರವನ್ನು ರೂಪಿಸುತ್ತದೆ ಎಂದು ತೋಮರ್ ಹೇಳಿದ್ದಾರೆ.

ಕಲಶ, ತ್ರಿಶೂಲ, ಕಮಲ, ತೆಂಗಿನ ಮತ್ತು ಮಾವಿನ ಮರದ ಎಲೆಗಳ ಚಿಹ್ನೆಗಳನ್ನು ತಾಜ್​ಮಹಲ್‌ನ ಹೊರ ಗೋಡೆಗಳ ಮೇಲೆ ಕಾಣಬಹುದು. ಇದು ಹಿಂದೂ ದೇವಾಲಯಗಳಲ್ಲಿ ಬಳಸುವ ಸಂಕೇತಗಳಾಗಿವೆ. ಅದನ್ನು ಇಲ್ಲಿ ಕೆತ್ತಲಾಗಿದೆ ಎಂದರೆ ಇದು ಮೊದಲು ಹಿಂದು ದೇಗುಲವಾಗಿತ್ತು ಎಂದು ತೋಮರ್ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ತಾಜ್​ ಮಹಲ್​ ಸೌಂದರ್ಯ ಕುಂದಿಸುತ್ತಿರುವ ಕೀಟಗಳು; ಕ್ರಮಕ್ಕೆ ಮುಂದಾದ ಎಎಸ್​ಐ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.