ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ವೈದ್ಯಕೀಯ ಮತ್ತು ವೈದ್ಯಕಿಯೇತರ ಸಿಬ್ಬಂದಿಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ವಿವರ: ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿರುವ ಇರುವ ಒಟ್ಟು 20 ಹುದ್ದೆಗಳ ಮಾಹಿತಿ ಇಲ್ಲಿದೆ.
- ಆರ್ಬಿಎಸ್ಕೆ ಆಯುಷ್ ಎಂಒ - 2
- ನೇತ್ರ ತಜ್ಞ ಸಹಾಯಕರು - 1
- ಜಿಲ್ಲಾ ಎಪಿಡೆಮೊಲಾಜಿಸ್ಟ್ - 1
- ತಾಲೂಕು ಜನರಲ್ ಹಾಸ್ಪಿಟಲ್ ಎಪಿಡೆಮಿಯಲೋಜಿಸ್ಟ್- 4
- ಸ್ಟಾಫ್ ನರ್ಸ್ - 12
ವಿದ್ಯಾರ್ಹತೆ:
- ಆರ್ಬಿಎಸ್ಕೆ ಆಯುಷ್ ಎಂಒ - ಅಭ್ಯರ್ಥಿಗಳು ಬಿಎಎಂಎಸ್ ಪೂರ್ಣಗೊಳಿಸಿರಬೇಕು
- ನೇತ್ರ ಸಹಾಯಕರು- ಅಭ್ಯರ್ಥಿಗಳು ಎರಡು ವರ್ಷಡಿಪ್ಲೊಮಾ ಹುದ್ದೆಗಳ ಭರ್ತಿ ಮಾಡಬೇಕಿದೆ.
- ಜಿಲ್ಲಾ ಎಪಿಡೆಮೊಲಾಜಿಸ್ಟ್ : ಎಂಡಿ, ಎಂಪಿಎಚ್, ಡಿಪಿಎಚ್, ಎಂಎಇ ಪೂರ್ಣಗೊಳಿಸಿರಬೇಕು.
- ತಾಲೂಕು ಜನರಲ್ ಹಾಸ್ಪಿಟಲ್ ಎಪಿಡೆಮಿಯಲೋಜಿಸ್ಟ್ : ವೈದ್ಯಕೀಯದಲ್ಲಿ ಪದವಿ, ಸೋಷಿಯಲ್ ಮೆಡಿಸಿನ್ನಲ್ಲಿ ಸ್ನಾತಕೋತ್ತರ ಪದವಿ, ಸಾರ್ವಜನಿಕ ಆರೋಗ್ಯದಲ್ಲಿ ಪದವಿಯನ್ನು ಹೊಂದಿರಬೇಕು.
- ಸ್ಟಾಫ್ ನರ್ಸ್: ಕರ್ನಾಟಕ ನರ್ಸಿಂಗ್ ಮಂಡಳಿಯಿಂದ ನರ್ಸಿಂಗ್ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.
ವಯೋಮಿತಿ:
- ಆರ್ಬಿಎಸ್ಕೆ ಆಯುಷ್ ಎಂಒ - 45
- ನೇತ್ರ ತಜ್ಞ ಸಹಾಯಕರು 45
- ಜಿಲ್ಲಾ ಎಪಿಡೆಮೊಲಾಜಿಸ್ಟ್ 40
- ತಾಲೂಕು ಜನರಲ್ ಹಾಸ್ಪಿಟಲ್ ಎಪಿಡೆಮಿಯೊಲೋಜಿಸ್ಟ್ 40
- ಸ್ಟಾಫ್ ನರ್ಸ್ 45
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ವೈದ್ಯರ ಹೊರತುಪಡಿಸಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ. ಕಿಯೋನಿಕ್ಸ್ ಸಂಸ್ಥೆ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳನ್ನು ಮೆರಿಟ್ ಕಂ ರೋಸ್ಟರ್ ಹಾಗೂ ದಾಖಲಾತಿ ಪರಿಶೀಲನೆ ಮೇಲೆ ಆಯ್ಕೆ ಮಾಡಲಾಗುವುದು.
ಈ ಹುದ್ದೆಗೆ ಜನವರಿ 19 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜನವರಿ 29 ಆಗಿದೆ.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆ ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು chikkaballapur.nic.in ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: ಮಂಡ್ಯ ಡಿಸಿಸಿ ಬ್ಯಾಂಕ್ನಲ್ಲಿ ನೇಮಕಾತಿ; ಇಲ್ಲಿದೆ ವಿವರ