ETV Bharat / bharat

ಶ್ರೀಕೃಷ್ಣದೇವರಾಯರ ಕಾಲದ ಖಾದ್ಯ 'ಪೊಡಿಕೂರ'ದ ವಿಶೇಷವೇನು ಗೊತ್ತಾ?: ಅಂದಿನ ಸೈನಿಕರ ಬಲಕ್ಕೆ ಇದೇ ಕಾರಣವಂತೆ! - PODIKOORA IN TIRUPATI

ತಿರುಪತಿಯ ಅಣ್ಣ ಮತ್ತು ತಂಗಿ ಶ್ರೀಕೃಷ್ಣದೇವರಾಯ ಕಾಲದ ವಿಶೇಷ ಖಾದ್ಯವಾದ ಪೊಡಿಕೂರವನ್ನು ಜನರಿಗೆ ಪರಿಚಯಿಸುತ್ತಿದ್ದಾರೆ. ಒಮ್ಮೆ ಮಾಡಿ 6 ತಿಂಗಳ ಕಾಲ ಸಂಗ್ರಹಿಸಿಟ್ಟಿಕೊಂಡು ತಿನ್ನಬಹುದಾದ ಈ ಖಾದ್ಯದ ವಿಶೇಷತೆ ಕುರಿತ ಮಾಹಿತಿ ಇಲ್ಲಿದೆ.

ಪೊಡಿಕೂರ
ಪೊಡಿಕೂರ (ETV Bharat)
author img

By ETV Bharat Karnataka Team

Published : Nov 11, 2024, 8:07 PM IST

ತಿರುಪತಿ(ಆಂಧ್ರಪ್ರದೇಶ): ಶ್ರೀಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಅರಸರಲ್ಲೊಬ್ಬರು. ಅವರ ಕಾಲದಲ್ಲಿ ರಾಜ್ಯವನ್ನು ಉಳಿಸಿಕೊಳ್ಳಲು ಅನೇಕ ಯುದ್ದಗಳು ನಡೆದಿರುವ ಬಗ್ಗೆ ನಾವು ಇತಿಹಾಸದಲ್ಲಿ ಓದಿದ್ದೇವೆ. ಯುದ್ದದ ಸಮಯದಲ್ಲಿ ಸೈನಿಕರು ತಿಂಗಳುಗಳ ಕಾಲ ಶತ್ರು ಸೇನೆ ಜೊತೆ ಹೋರಾಡುತ್ತಿದ್ದರು. ಈ ವೇಳೆ ಸೈನಿಕರು ಯಾವ ಆಹಾರವನ್ನು ಸೇವಿಸುತ್ತಿದ್ದರು ಎಂಬ ಬಗ್ಗೆ ನಾವು ಎಲ್ಲೂ ಕೇಳಿಲ್ಲ ಮತ್ತು ಓದಿಲ್ಲ.

ಆ ಕಾಲದ ರಾಯರ(ರಾಯಲುವಾರಿ) ಅಡುಗೆಯನ್ನು ಈಗ ತಿರುಪತಿಯ ಅಣ್ಣ - ತಂಗಿಯರಾದ ಬಂಡಾರು ದೀಪಕ್ ಮತ್ತು ಬಂಡಾರು ಸಾಯಿ ಶ್ರಾವಣಿ ಪರಿಚಯಿಸುತ್ತಿದ್ದಾರೆ. ಬನ್ನಿ ಈ ಅಡುಗೆಯ ವಿಶೇಷತೆ ಏನೆಂದು ತಿಳಿದುಕೊಳ್ಳೋಣ.

ಶ್ರೀಕೃಷ್ಣದೇವರಾಯರ ಸೈನ್ಯ ಯುದ್ದಕ್ಕೆ ತೆರಳುವಾಗ ಜೊತೆಯಲ್ಲಿ ಜಿಂಕೆ, ಮೇಕೆ ಮತ್ತು ನಾಟಿ ಕೋಳಿಗಳಿಂದ ತಯಾರಿಸಿದ ‘ಪೊಡಿಕೂರ’ ಎಂಬ ಖಾದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದರು. ಇದನ್ನು ತುಂಬಾ ರುಚಿಕರವಾಗಿ ಮತ್ತು ಹಳಸದೇ ದೀರ್ಘಕಾಲ ಬಳಕೆ ಬರುವಂತೆ ವಿಶೇಷವಾಗಿ ತಯಾರಿಸಲಾಗುತ್ತಿತ್ತು. ಇದನ್ನು ತಿಂದ ಪಾಳೇಗಾರರೊಬ್ಬರು ಆ ರುಚಿಗೆ ಕಾರಣವೇನೆಂದು ತಿಳಿದುಕೊಂಡು ತಮ್ಮ ಕುಟುಂಬಸ್ಥರಿಗೆ ಪೊಡಿಕೂರ ಪರಿಚಯಿಸಿದರು.

ರಾಯಲಸೀಮೆಯಲ್ಲಿ ಪೊಡಿಕೂರವೂ ಫೇಮಸ್​: ನಾಟಿ ಕೋಳಿಯ ಎದೆ ಭಾಗದ ಮಾಂಸವನ್ನು ಒಂದು ಗಂಟೆವರೆಗೆ ಬೇಯಿಸುತ್ತಾರೆ. ನಂತರ ಎಲುಬುಗಳನ್ನು ತೆಗೆದು ಎಣ್ಣೆ ಬಳಸದೇ ಫ್ರೈ ಮಾಡುತ್ತಾರೆ. ಇದೇ ರೀತಿ ಮೇಕೆ ಮಾಂಸದಿಂದಲೂ ಕೂಡ ಪೊಡಿಕೂರ ಮಾಡುತ್ತಾರೆ. ಸುಮಾರು 6 ತಿಂಗಳ ಕಾಲ ಸಂಗ್ರಹಿಸಿಟ್ಟುಕೊಂಡು ತಿನ್ನಬಹುದಾದ ಈ ಪೂಡಿಕೂರವನ್ನು ಅಮೆರಿಕ ಮತ್ತು ನಮ್ಮ ದೇಶದ ದಕ್ಷಿಣ ರಾಜ್ಯಗಳ ಆಹಾರ ಪ್ರಿಯರು ತುಂಬಾ ಇಷ್ಟಪಡುತ್ತಾರೆ. ರಾಯಲಸೀಮೆ ಎಂದರೆ ರಾಗಿ ಮುದ್ದೆ ಮಾತ್ರವಲ್ಲ, ರಾಯರ ಕಾಲದ ಪೊಡಿಕೂರ ಕೂಡ ಪ್ರಸಿದ್ಧಿ ಎಂದು ಈ ಅಣ್ಣ - ತಂಗಿ ಸಾರುತ್ತಿದ್ದಾರೆ.

ಬಂಡಾರು ದೀಪಕ್ ಬಿ.ಟೆಕ್ ಓದಿದ್ದು, ಕೆಲ ವರ್ಷ ಹೈದರಾಬಾದ್​ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ತಂದೆ ನಿಧನದ ನಂತರ, ದೀಪಕ್ ತಿರುಪತಿಗೆ ಬಂದು ಅಡುಗೆ ತಯಾರಿ ಮೇಲಿನ ಇಷ್ಟದಿಂದ ಸಾಫ್ಟ್‌ವೇರ್ ಉದ್ಯೋಗವನ್ನು ತೊರೆದರು. ನಂತರ ದೀಪಕ್, ಹಿರಿಯರು ಮಾಡುತ್ತಿದ್ದ ಪೊಡಿಕೂರವನ್ನು ಹೇಗೆ ತಯಾರಿಸಬೇಕು ಎಂದು ತಮ್ಮ ತಾಯಿ ಬಳಿ ಕೇಳಿ ತಿಳಿದುಕೊಂಡರು. ಬಳಿಕ ಬಿಕಾಂ ಮುಗಿಸಿದ ತಂಗಿ ಸಾಯಿ ಶ್ರಾವಣಿ ಜೊತೆಗೂಡಿ ರಾಯರ ಕಾಲದ ಪೊಡಿಕೂರ ರುಚಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ನಿರ್ಧರಿಸಿದರು. ಈಗ ಮನೆಯಲ್ಲೇ ಪೊಡಿಕೂರ ತಯಾರಿಸಿ ಎಲ್ಲರಿಗೂ ಉಣಬಡಿಸುತ್ತಿದ್ದಾರೆ.

ಇದನ್ನೂ ಓದಿ: ಮತ್ತೆ ಮತ್ತೆ ತಿನ್ನಬೇಕೆನಿಸುವ ಆಂಧ್ರ ಸ್ಪೆಷಲ್​ 'ದಿಬ್ಬರೊಟ್ಟಿ': ಇದು ಆರೋಗ್ಯಕರ ಮತ್ತು ಟೇಸ್ಟಿ ಬ್ರೇಕ್​ಫಾಸ್ಟ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.