ETV Bharat / bharat

ಈ ಊರಲ್ಲಿದೆ ಅತಿದೊಡ್ಡ ಕೋಟೆ: ಚೈನಾವಾಲ್‌ ನೆನಪಿಸುವ ರಚನೆಗಳು, ವಟಗುಟ್ಟುವ ಶಿಲ್ಪಗಳು

ನೀವು ಸೆಲ್ ಫೋನ್‌ನಿಂದ ಸ್ಕ್ಯಾನ್ ಮಾಡಿದರೆ ಇಲ್ಲಿನ ಚಿತ್ರಗಳು ಮತ್ತು ಶಿಲ್ಪಗಳು ಮಾತನಾಡುತ್ತವೆ.

special-story-on-kondapalli-fort-in-ntr-district-andhra-pradesh-
ಈ ಊರಲ್ಲಿದೆ ಅತಿದೊಡ್ಡ ಕೋಟೆ: ಚೈನಾವಾಲ್‌ನಂತಹ ರಚನೆಗಳು, ವಟಗುಟ್ಟುವ ಶಿಲ್ಪಗಳು; ಅತ್ಯದ್ಬುತ (ETV Bharat)
author img

By ETV Bharat Karnataka Team

Published : 4 hours ago

Special Story on Kondapalli Fort in NTR District : NRT ಜಿಲ್ಲೆ, ಆಂಧ್ರಪ್ರದೇಶ: ಇದು ಅತ್ಯದ್ಭುತ ಕೋಟೆಯಾಗಿದೆ. ಎತ್ತರದ ಕಟ್ಟಡಗಳು, ಕಲ್ಲಿನ ಬುರ್ಜ್​ಗಳು , ರಾಜಮನೆತನಗಳು, ದೊಡ್ಡ ಕೊಳಗಳು.. ಐತಿಹಾಸಿಕ ಕಟ್ಟಡಗಳು ಮತ್ತು ಅಂದಿನ ಕಲಾಕೃತಿಗಳು, ಅಲ್ಲಿಡುವ ಪ್ರತಿ ಹೆಜ್ಜೆಯೂ ರಾಜಮನೆತನದ ವೈಭವವನ್ನು ನೆನಪು ಮಾಡುತ್ತವೆ. ಈ ಕೋಟೆ ಇರುವುದು ಎನ್ಟಿಆರ್ ಜಿಲ್ಲೆಯ ಇಬ್ರಾಹಿಂಪಟ್ಟಣಂ ಬಳಿ.

ಕೊಂಡಪಲ್ಲಿ ಕೋಟೆಯು ತೆಲುಗು ನೆಲದಲ್ಲಿರುವ ಪ್ರಸಿದ್ಧ ಐತಿಹಾಸಿಕ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಪೂರ್ವ ಘಟ್ಟದಲ್ಲಿರುವ ಕೊಂಡಪಲ್ಲಿ ಕಿಲ್ಲಾ ಪ್ರವಾಸಿಗರ ಮನಸೆಳೆಯುತ್ತಿದೆ. ಕೊಂಡಪಲ್ಲಿ ಹತ್ತನೇ ಶತಮಾನದಿಂದಲೂ ಅನೇಕ ರಾಜರ ಆಕ್ರಮಣಗಳನ್ನು ಎದುರಿಸಿ ನಿಂತ ಕೋಟೆಯಾಗಿದೆ. ಅಲ್ಲಿನ ಶಿಲ್ಪಗಳು ಇಂದಿನ ಪೀಳಿಗೆಗೆ ಹಲವು ಇತಿಹಾಸಗಳನ್ನು ಹೇಳುತ್ತವೆ. ಶಿಥಿಲಗೊಂಡ ಗೋಡೆಗಳಿರುವ ದರ್ಬಾರ್, ರಾಣಿ ಮಹಲ್, ಜೈಲ್ಖಾನಾ, ನಾಟ್ಯಶಾಲಾಗಳನ್ನು ಕಾಣಬಹುದಾಗಿದೆ. ಅಂದಿನ ವಾಸ್ತುಶೈಲಿಯ ಬಗ್ಗೆಯೂ ಈ ಕೋಟೆಗೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು.

ಈ ಕೋಟೆಯ ಗ್ಯಾಲರಿಯಲ್ಲಿರುವ ಚಿತ್ರಗಳು ಮತ್ತು ಶಿಲ್ಪಗಳನ್ನು ನಿಮ್ಮ ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿದರೆ, ನೀವು ಅವುಗಳ ಟಿಪ್ಪಣಿಗಳನ್ನು ಆಲಿಸಬಹುದು. ಈ ವರ್ಧಿತ ರಿಯಾಲಿಟಿ ತಂತ್ರಜ್ಞಾನ (ಆಗ್ಮೆಂಟೆಡ್ ರಿಯಾಲಿಟಿ ಟೆಕ್ನಾಲಜಿ)ಯನ್ನು ಈ ಹಿಂದಿನ ಟಿಡಿಪಿ ಸರ್ಕಾರದ ಅವಧಿಯಲ್ಲಿ ಕಲ್ಪಿಸಲಾಗಿತ್ತು. ಆ ಸಂದರ್ಭದಲ್ಲಿ ಪ್ರವಾಸಿಗರನ್ನು ರಂಜಿಸಲು ಲೇಸರ್ ಶೋನೊಂದಿಗೆ ವಾರ್ಷಿಕ ಉತ್ಸವಗಳನ್ನು ಆಯೋಜಿಸಲಾಗುತ್ತಿತ್ತು. ವೈಎಸ್‌ಆರ್‌ಸಿಪಿ ಆಡಳಿತದ ಆಂಧ್ರದಲ್ಲಿ ಬಂದ ಬಳಿಕ ಈ ಆಚರಣೆ ಸ್ಥಗಿತಗೊಂಡಿತ್ತು.

ವಿಜಯವಾಡದಿಂದ 23 ಕಿಲೋಮೀಟರ್ ದೂರದಲ್ಲಿರುವ ಈ ಕೋಟೆಯನ್ನು ಅಭಿವೃದ್ಧಿಪಡಿಸಿದರೆ ಪ್ರವಾಸಿಗರನ್ನು ಸೆಳೆಯುತ್ತದೆ ಎನ್ನುತ್ತಾರೆ ಸ್ಥಳೀಯರು. ಮೊದಲಿಗೆ ಬೆಟ್ಟದ ತುದಿಗೆ ಹೋಗಲು ವಾಹನ ಸೌಲಭ್ಯ ಕಲ್ಪಿಸಿಕೊಡಬೇಕು ಎಂಬುದು ಇಲ್ಲಿಗೆ ಬರುವ ಪ್ರವಾಸಿಗರ ಆಗ್ರಹವಾಗಿದೆ.
ಇದನ್ನು ಓದಿ: ಶೇ 77ರಷ್ಟು ಮಹಿಳೆಯರಿಗೆ ಕತ್ತಲಾಗುತ್ತಿದ್ದಂತೆ ಬಸ್​ಗಳಲ್ಲಿ ಅಸುರಕ್ಷತೆ ಭಾವ: ವರದಿಯಲ್ಲಿ ಬಯಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.