ವಡೋದರ, ಗುಜರಾತ್: ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಝ್ ಇಂದು ಮುಂಜಾನೆ ಗುಜರಾತ್ನ ವಡೋದರ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅವರು ನಿಯೋಗದ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ವಿಮಾನ ನಿಲ್ದಾಣಕ್ಕೆ ಬಂದಿಳಿದ ಸ್ಯಾಂಚೆಝ್ಗೆ ಅಧಿಕಾರಿಗಳ ತಂಡ ಭವ್ಯ ಸ್ವಾಗತ ಕೋರಿದೆ. ಜೊತೆಗೆ ವಿದೇಶಾಂಗ ವ್ಯವಹಾರ ಇಲಾಖೆ ಕೂಡ ಸಾಮಾಜಿಕ ಜಾಲಜಾಣದಲ್ಲಿ ಸ್ಪ್ಯಾನಿಷ್ ನಾಯಕನಿಗೆ ಸ್ವಾಗತ ಕೋರಿದ್ದಾರೆ. ಸ್ಪೇನ್ ಅಧ್ಯಕ್ಷರು ಇಂದು ಭಾರತಕ್ಕೆ ಬಂದಿಳಿದ್ದಾರೆ. 18 ವರ್ಷಗಳ ಬಳಿಕ ಸ್ಪೇನ್ ಅಧ್ಯಕ್ಷರು ಭಾರತಕ್ಕೆ ಮೊದಲ ಭೇಟಿ ನಡೆಸುತ್ತಿದ್ದಾರೆ. ಭಾರತ- ಸ್ಪೇನ್ ಸಂಬಂಧಕ್ಕೆ ಹೊಸ ಎತ್ತರಕ್ಕೆ ಹೋಗಲಿದೆ ಎಂದು ವಿದೇಶಾಂಗ ವ್ಯವಹಾರ ಇಲಾಖೆ ರಣಧೀರ್ ಜೈ ಸ್ವಾಲ್ ತಿಳಿಸಿದ್ದಾರೆ.
ದ್ವಿಪಕ್ಷಿ ಸಂಬಂಧವನ್ನು ವೃದ್ದಿಸುವಲ್ಲಿ ಭಾರತಕ್ಕೆ ಮೊದಲ ಅಧಿಕೃತ ಪ್ರವಾಸ ಆರಂಭಿಸುತ್ತಿದ್ದೇನೆ. ಅಂತಾರಾಷ್ಟ್ರೀಯ ಸಮುದಾಯದಲ್ಲಿ ಭಾರತವೂ ಪ್ರಮುಖ ಪಾತ್ರ ಹೊಂದಿದೆ ಎಂದಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ಸ್ಪೇನ್ ಅಧ್ಯಕ್ಷ ಸ್ಯಾಂಚೆಝ್ ಅವರನ್ನು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಆತ್ಮೀಯವಾಗಿ ಬರಮಾಡಿಕೊಂಡರು.
ಭವ್ಯ ಮೆರವಣಿಗೆ: ಭಾರತಕ್ಕೆ ಬಂದಿಳಿದಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಜೊತೆ ಸೇರಿ ಟಾಟಾ ಏರ್ಬಸ್ ಏರ್ಕ್ರಾಫ್ಟ್ ಪ್ಲಾಂಟ್ ಉದ್ಗಾಟಿಸಲಿದ್ದಾರೆ. ಈ ಘಟಕವನ್ನು ಏರ್ಬಸ್ ಸ್ಪೇನ್ ಸಹಯೋಗದಿಂದ ಟಾಟಾ ಅಡ್ವಾನ್ಸ್ ಸಿಸ್ಟಂ ಅಭಿವೃದ್ಧಿಗೊಳಿಸಿದ್ದಾರೆ. ಈ ಉದ್ಘಾಟನೆಗೆ ಮುನ್ನ ವಡೋದರದ ರಸ್ತೆಗಳಲ್ಲಿ ಪ್ರಧಾನಿ ಮೋದಿ, ಸ್ಪೇನ್ ಅಧ್ಯಕ್ಷನ ಜೊತೆಗೆ ರೋಡ್ ಶೋ ನಡೆಸಿದರು.
ಈ ಉದ್ಘಾಟನೆ ಬಳಿಕ ದ್ವಿಪಕ್ಷೀಯ ಸಭೆಗಾಗಿ ಸ್ಯಾಂಚೆಜ್ ಮತ್ತು ಮೋದಿ ಐತಿಹಾಸಿಕ ಲಕ್ಷ್ಮಿ ವಿಲಾಸ್ ಅರಮನೆಗೆ ಭೇಟಿ ನೀಡಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಎರಡು ದೇಶದ ಸಹಕಾರದ ಕುರಿತು ಚರ್ಚಿಸುವ ನಿರೀಕ್ಷೆಯಿದೆ
ಇದರ ಹೊರತಾಗಿ ಸ್ಪೇನ್ ಅಧ್ಯಕ್ಷರು ಮುಂಬೈಗೆ ಭೇಟಿ ನೀಡಲಿದ್ದು, ಅಲ್ಲಿ ವಾಣಿಜ್ಯ ಮತ್ತು ಉದ್ಯಮಿ ನಾಯಕರೊಂದಿಗೆ ಭೇಟಿ ಮಾಡಲಿದ್ದಾರೆ. ಜೊತೆಗೆ ಚಿಂತಕರ ಟ್ಯಾಂಕ್‌ಗಳು ಮತ್ತು ಚಲನಚಿತ್ರೋದ್ಯಮದೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಭೇಟಿಯ ಸಮಯದಲ್ಲಿ ಹಲವಾರು ತಿಳಿವಳಿಕಾ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.
ಅವರು ಭಾರತೀಯ ಮತ್ತು ಸ್ಪ್ಯಾನಿಷ್ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ನಡುವೆ ಹೆಚ್ಚಿನ ಸಹಯೋಗವನ್ನು ಬೆಳೆಸಲು ಪ್ರಮುಖ ಚಲನಚಿತ್ರ ಸ್ಟುಡಿಯೋಗಳಿಗೆ ಭೇಟಿ ನೀಡಲಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಐರನ್ ಮ್ಯಾನ್ 70.3 ರೇಸ್‌ನಲ್ಲಿ ತೇಜಸ್ವಿ ಸೂರ್ಯಗೆ ಗೆಲುವು: ಈ ಸಾಧನೆ ಮಾಡಿದ ಮೊದಲ ಜನಪ್ರತಿನಿಧಿ!