ETV Bharat / bharat

ಟ್ರಕ್‌ಗೆ ಡಿಕ್ಕಿ ಹೊಡೆದ ಶಾರ್ಜಾ - ಸೂರತ್ ಫ್ಲೈಟ್; ಪ್ರಯಾಣಿಕರು ಸೇಫ್ - Sharjah Surat flight

ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ನಂತರ ಶಾರ್ಜಾ - ಸೂರತ್ ಫ್ಲೈಟ್ ವಿಂಗ್​ಗೆ ಹಾನಿಯಾಗಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಶಾರ್ಜಾ- ಸೂರತ್ ವಿಮಾನವು ಲ್ಯಾಂಡಿಂಗ್ ನಂತರ ರನ್‌ವೇಯಿಂದ ಏಪ್ರನ್ ಕಡೆಗೆ ಚಲಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

Surat International Airport
ಸೂರತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
author img

By ETV Bharat Karnataka Team

Published : Mar 15, 2024, 6:16 PM IST

ಸೂರತ್ (ಗುಜರಾತ್​) : ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಶಾರ್ಜಾ - ಸೂರತ್ ವಿಮಾನ ಬುಧವಾರ ರಾತ್ರಿ 11:15 ರ ಸುಮಾರಿಗೆ ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ವಿಮಾನವು 180 ಸೀಟುಗಳನ್ನು ಹೊಂದಿತ್ತು. ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಂದ ಬಂದ ಮಾಹಿತಿ ಪ್ರಕಾರ, ವಿಮಾನದಲ್ಲಿ 160 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಲ್ಯಾಂಡಿಂಗ್ ನಂತರ, ವಿಮಾನವು ಏಪ್ರನ್ ಪ್ರದೇಶಕ್ಕೆ ಹೋಗುತ್ತಿದ್ದಾಗ ರನ್‌ವೇ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಆದರೆ, ವಿಮಾನದ ರೆಕ್ಕೆಗೆ ಹಾನಿಯಾಗಿದೆ. ಇದೀಗ ನಾಳೆ ಅಂದರೆ ಶನಿವಾರದಿಂದ ಮತ್ತೆ ಪ್ರಯಾಣಿಕರಿಗೆ ವಿಮಾನ ಹಾರಾಟ ಆರಂಭವಾಗಲಿದೆ ಎಂಬುದು ತಿಳಿದು ಬಂದಿದೆ.

ಅಪಘಾತದ ಸಂಪೂರ್ಣ ವರದಿ ಸಿದ್ಧಪಡಿಸಿ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರಿಗೆ ಸಲ್ಲಿಸಲಾಗಿದೆ. ಈಗ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ತನಿಖೆಯ ನಂತರ ವಿಮಾನ ಕಾರ್ಯಾಚರಣೆಗೆ ಅನುಮತಿ ನೀಡಲಾಗುವುದು. ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಮಾನಾಂತರ ಟ್ಯಾಕ್ಸಿ ಟ್ರ್ಯಾಕ್ ನಿರ್ಮಿಸುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕೃತ ಮೂಲಗಳು ಬಹಿರಂಗಪಡಿಸಿವೆ. ಈ ಕೆಲಸಕ್ಕೆ ಮಣ್ಣು ಸಾಗಿಸಲು ಲಾರಿಗಳನ್ನು ಬಳಸಲಾಗುತ್ತಿದೆ. ಈ ಮಧ್ಯೆ ನಿನ್ನೆ ರಾತ್ರಿ ಚಾಲಕ ಟ್ರಕ್ ಅನ್ನು ರನ್‌ವೇ ಬದಿಯಲ್ಲಿ ಬಿಟ್ಟಿದ್ದರು. ಅದಕ್ಕೆ ವಿಮಾನ ಡಿಕ್ಕಿ ಹೊಡೆದಿದೆ ಎಂಬುದಾಗಿ ತಿಳಿದು ಬಂದಿದೆ.

ಸೂರತ್ ವಿಮಾನ ನಿಲ್ದಾಣದಲ್ಲಿ ಮುಖ್ಯ ರನ್‌ವೇಗೆ ಸಮಾನಾಂತರವಾಗಿ ಟ್ಯಾಕ್ಸಿ ಟ್ರ್ಯಾಕ್ ಸಿದ್ಧವಾಗುತ್ತಿದೆ. ಇದರಿಂದಾಗಿ ಫೆಬ್ರವರಿ 27 ರಂದು ವಿಮಾನವು ರನ್‌ವೇ ತಲುಪಲು ಸಾಧ್ಯವಾಗಲಿಲ್ಲ. ವಿಮಾನವು ಗಾಳಿಯಲ್ಲಿ ಸುತ್ತಾಡಬೇಕಾಯಿತು. ಅದೇ ರೀತಿ ಫೆ. 28ರಂದು ರನ್ ವೇಯಲ್ಲಿ ವಿಮಾನವೊಂದು ಸಿಲುಕಿಕೊಂಡಿದ್ದು, ಇನ್ನೆರಡು ವಿಮಾನಗಳಿಗೆ ಇಳಿಯಲು ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಎರಡೂ ವಿಮಾನಗಳು ಗಾಳಿಯಲ್ಲಿ ಸುತ್ತಾಡಬೇಕಾಯಿತು. ಇಂತಹ ಸಮಸ್ಯೆಗಳು ಪ್ರತಿದಿನ ಬರುತ್ತಲೇ ಇರುತ್ತವೆ ಎಂದು ಮೂಲಗಳು ತಿಳಿಸಿವೆ.

5 ವರ್ಷಗಳಿಂದ ಆಮೆ ಗತಿಯಲ್ಲಿ ಸಾಗಿದ ಪಿಟಿಟಿ ಕಾಮಗಾರಿ : ಪ್ಯಾರಲಲ್ ಟ್ಯಾಕ್ಸಿ ಟ್ರ್ಯಾಕ್ ಕಾಮಗಾರಿ ಸುಮಾರು ಐದು ವರ್ಷಗಳಿಂದ ನಡೆಯುತ್ತಿದೆ. ವೆಸು ಕಡೆಗೆ ಸಮಾನಾಂತರ ಟ್ಯಾಕ್ಸಿ ಟ್ರ್ಯಾಕ್ ನಿರ್ಮಿಸಲಾಗಿದೆ. ಆದರೆ, ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದಿಂದ ಅದರ ಬಳಕೆಗೆ ಅನುಮತಿ ನೀಡಲಾಗಿಲ್ಲ. ಡುಮಾಸ್ ಕಡೆಗೆ ಸಮಾನಾಂತರ ಟ್ಯಾಕ್ಸಿ ಟ್ರ್ಯಾಕ್ ಕೆಲಸ ನಡೆಯುತ್ತಿದೆ. ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಮೇ 2021 ರಲ್ಲಿ ಸೂರತ್ ವಿಮಾನ ನಿಲ್ದಾಣದ ನಿರ್ದೇಶಕರು ನಿರ್ಮಾಣ ಕಂಪನಿಗೆ ಟ್ರ್ಯಾಕ್​ ನಿರ್ಮಾಣಕ್ಕೆ ಸೂಚನೆ ನೀಡಿದ್ದರು. ಆದರೆ ಪಿಟಿಟಿ ಕೆಲಸ ಇನ್ನೂ ಪೂರ್ಣಗೊಂಡಿಲ್ಲ.

ಇದನ್ನೂ ಓದಿ : ವಿಮಾನ ಹಾರಾಟದ ವೇಳೆ ಪಬ್ರಲ ಚಲನೆ, 50 ಪ್ರಯಾಣಿಕರಿಗೆ ಗಾಯ, ಒಬ್ಬನ ಸ್ಥಿತಿ ಚಿಂತಾಜನಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.