ETV Bharat / bharat

ಮಲಯಾಳಂ ನಟಿಯರ ಮೇಲೆ ದೌರ್ಜನ್ಯ ಆರೋಪ: ತನಿಖೆಗೆ ವಿಶೇಷ ತಂಡ ರಚಿಸಿದ ಕೇರಳ ಸರ್ಕಾರ - Sexual Assault Allegations

author img

By ETV Bharat Karnataka Team

Published : Aug 25, 2024, 10:40 PM IST

ಮಲಯಾಳಂ ಸಿನಿಮಾ ರಂಗದಲ್ಲಿ ಕೇಳಿಬಂದ ನಟಿಯರ ಮೇಲಿನ ದೌರ್ಜನ್ಯ ಆರೋಪ ಭಾರೀ ಸಂಚಲನ ಮೂಡಿಸಿದೆ. ಕೇರಳ ಸರ್ಕಾರ ಈ ಬಗ್ಗೆ ತನಿಖೆಗೆ ತಂಡವನ್ನು ರಚಿಸಿ ಆದೇಶಿಸಿದೆ.

sexual assault case
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (ETV Bharat)

ಕೊಚ್ಚಿ(ಕೇರಳ): ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಆರೋಪದ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿ ಸಿದ್ಧಪಡಿಸಿರುವ ವರದಿಯು ಮಾಲಿವುಡ್​ ಸಿನಿರಂಗವನ್ನೇ ಅಲುಗಾಡಿಸಿದೆ. ಅನೇಕ ಗಣ್ಯರಿಂದ ತಾವು ಕೆಟ್ಟ ಸನ್ನಿವೇಶಗಳನ್ನು ಎದುರಿಸಿದ್ದೇವೆ ಎಂದು ನಟಿಯರು ಆರೋಪಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೇರಳ ಸರ್ಕಾರ 7 ಹಿರಿಯ ಪೊಲೀಸ್ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಹೊರಡಿಸಿದೆ.

ಮಲಯಾಳಿ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಿಖಿ ಅವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಟಿ ರೇವತಿ ಸಂಪತ್ ಹೇಳಿದ್ದರೆ, ಇತ್ತ ಖ್ಯಾತ ನಿರ್ದೇಶಕ ಮತ್ತು ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದ ರಂಜಿತ್ ಬಾಲಕೃಷ್ಣನ್ ತನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಬಂಗಾಳಿ ನಟಿ ಶ್ರೀಲೇಖಾ ಆರೋಪಿಸಿದ್ದಾರೆ.

ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಿದ್ದಿಕಿ ಮತ್ತು ರಂಜಿತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಗಳ ಕುರಿತಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ಈ ಎಲ್ಲಾ ಆರೋಪಗಳು ಮತ್ತು ನ್ಯಾಯಮೂರ್ತಿ ಹೇಮಾ ಅವರ ವರದಿಯನ್ನು ಆಧರಿಸಿ ತನಿಖೆ ನಡೆಸಲು ಐಜಿ ಸ್ಪರ್ಜನ್ ಕುಮಾರ್ ನೇತೃತ್ವದಲ್ಲಿ 7 ಸದಸ್ಯರ ತಂಡವನ್ನು ರಚಿಸಲು ಆದೇಶಿಸಿದ್ದಾರೆ.

ಆರೋಪವೇನು?: 2019ರಲ್ಲಿ ಕೇರಳ ಸರ್ಕಾರವು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಲು ನ್ಯಾಯಮೂರ್ತಿ ಹೇಮಾ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಸಮಿತಿಯು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದರೂ, ಅದರಲ್ಲಿನ ಅಂಶಗಳು ಹೊರಬಿದ್ದಿರಲಿಲ್ಲ. ಇತ್ತೀಚೆಗೆ ಮಾಹಿತಿ ಹಕ್ಕು ಕಾಯಿದೆಯಡಿ ಬಿಡುಗಡೆಯಾದ ವರದಿ ಹಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಮಾಲಿವುಡ್‌ನಲ್ಲಿ ಮಹಿಳಾ ನಟಿಯರ ಮೇಲೆ ಸಿನಿಮಾ ರಂಗದ ಗಣ್ಯರು ದೌರ್ಜನ್ಯ ಎಸಗಿದ ಬಗ್ಗೆ ಮಾಹಿತಿ ಸಿಕ್ಕಿದೆ. ಕೆಲವರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆಯೂ ಆರೋಪವಿದೆ. ಸಿನಿಮಾ ರಂಗದಲ್ಲಿ ಅವಕಾಶ ವಂಚಿತರಾಗುವ ಭಯದಲ್ಲಿ ನಟಿಯರು ದೂರು ನೀಡಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ನಿರ್ದೇಶಕನ ತಲೆದಂಡ: ನಿರ್ದೇಶಕ ಮತ್ತು ನಟರ ವಿರುದ್ಧ ನಟಿಯರು ಮಾಡಿರುವ ಆರೋಪ ಕೇಳಿ ಬಂದ ಕಾರಣ, ಮಲಯಾಳಂನ ಖ್ಯಾತ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಅವರು ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೊಂದೆಡೆ, ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನಟ ಸಿದ್ದಿಕ್ ಕೆಳಗಿಳಿದಿದ್ದಾರೆ.

ಇದನ್ನೂ ಓದಿ: ನಟಿಯರ ದೌರ್ಜನ್ಯ ಆರೋಪ: ಮಲಯಾಳಂ ನಿರ್ದೇಶಕ ರಂಜಿತ್, ನಟ ಸಿದ್ದಿಕ್ ರಾಜೀನಾಮೆ - sexual assault allegations

ETV Bharat Logo

Copyright © 2024 Ushodaya Enterprises Pvt. Ltd., All Rights Reserved.