ETV Bharat / bharat

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಆ್ಯಂಟಿ ಡ್ರೋನ್​, ಭದ್ರತಾ ಸಿಬ್ಬಂದಿ ಹೆಚ್ಚಿಸಿದ ರಾಜ್ಯ ಸರ್ಕಾರ - Manipur Violence

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ರಾಜ್ಯ ಸರ್ಕಾರ ಭದ್ರತಾ ವ್ಯವಸ್ಥೆ ಹೆಚ್ಚಿಸಿದೆ. ಈ ಮಧ್ಯೆ ಸಿಎಂ ಬಿರೇನ್​ ಸಿಂಗ್​ ಅವರು ಮಹತ್ವದ ಸಭೆ ನಡೆಸಿ, ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ
ಮಣಿಪುರದಲ್ಲಿ ಮತ್ತೆ ಹಿಂಸಾಚಾರ (ETV Bharat)
author img

By PTI

Published : Sep 8, 2024, 4:30 PM IST

ಇಂಫಾಲ(ಮಣಿಪುರ): ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿ ಹೊತ್ತಿ ಉರಿದಿದ್ದ ಮಣಿಪುರ ಕೆಲವು ದಿನಗಳಿಂದ ಶಾಂತವಾಗಿತ್ತು. ಆದರೆ ಇದೀಗ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಹೀಗಾಗಿ ರಾಜ್ಯದಲ್ಲಿ ಸಾವು-ನೋವುಗಳನ್ನು ತಡೆಯಲು ಸರ್ಕಾರ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿದೆ. ಡ್ರೋನ್​​ ವಿರೋಧಿ ಅಸ್ಸಾಂ ರೈಫಲ್ಸ್​ ಪಡೆಯನ್ನು ವಿವಿಧೆಡೆ ನಿಯೋಜಿಸಲಾಗಿದೆ.

ಸೆಪ್ಟೆಂಬರ್​ 1ರಿಂದ ಮತ್ತೆ ಹಿಂಸಾಚಾರ ಕೃತ್ಯಗಳು ನಡೆಯುತ್ತಿವೆ. ಜಿರಿಬಾಮ್ ಎಂಬಲ್ಲಿ ಶನಿವಾರ ರಾತ್ರಿ ನಡೆದ ಒಂದು ಗುಂಪಿನ ದಾಳಿಯಲ್ಲಿ ಐವರು ಸಾವಿಗೀಡಾಗಿದ್ದಾರೆ. ನಿದ್ರೆಯಲ್ಲಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ದಾಳಿಕೋರರು ಮೃತಪಟ್ಟಿದ್ದಾರೆ.

ಕುಕಿ ಸಮುದಾಯದ ವಿರುದ್ಧ ಮುಖ್ಯಮಂತ್ರಿ ಎನ್​​.ಬಿರೇನ್​ ಸಿಂಗ್​ ಮಾತನಾಡಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಆಡಿಯೋ ವೈರಲ್​ ಆದ ಬಳಿಕ ಹಿಂಸಾಚಾರ ಮತ್ತೆ ಶುರುವಾಗಿದೆ. ಆದರೆ, ಸರ್ಕಾರ ಇದನ್ನು ನಿರಾಕರಿಸಿದೆ. ಸಿಎಂ ಸಿಂಗ್​ ಅವರು ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದೆ.

ದಾಳಿಗೆ ಡ್ರೋನ್​ ಬಳಕೆ: ಜಿರಿಬಾಮ್​​ನಲ್ಲಿ ದಾಳಿಕೋರರು ಡ್ರೋನ್​ಗಳನ್ನು ಬಳಸಿದ್ದಾರೆ. ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಗುಂಪು ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಮಲಗಿದ್ದಾಗಲೇ ಗುಂಡಿಕ್ಕಿ ಹತ್ಯೆ ಮಾಡಿದೆ. ಮಾಹಿತಿ ತಿಳಿದ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದಾಗ, ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಎನ್​​ಕೌಂಟರ್​ನಲ್ಲಿ ನಾಲ್ವರು ಹತ್ಯೆಯಾಗಿದ್ದಾರೆ. ಮೂವರ ಶವಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಾಳಿಕೋರರು ಹಿಂಸಾಚಾರಕ್ಕೆ ಡ್ರೋನ್​ಗಳನ್ನು ಬಳಸುತ್ತಿರುವ ಕಾರಣ, ಆ್ಯಂಟಿ ಡ್ರೋನ್​ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಸಿಆರ್‌ಪಿಎಫ್​ನ ಆ್ಯಂಟಿ ಡ್ರೋನ್ ವ್ಯವಸ್ಥೆಯನ್ನು ರಾಜ್ಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹತ್ವದ ಸಭೆ, ರಾಜ್ಯಪಾಲರ ಭೇಟಿ: ರಾಜ್ಯದಲ್ಲಿ ಮತ್ತೆ ಅಶಾಂತಿ ತಲೆದೋರಿದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಆಡಳಿತಾರೂಢ ಮೈತ್ರಿಪಕ್ಷಗಳಾದ ಬಿಜೆಪಿ, ನಾಗಾ ಪೀಪಲ್ಸ್​ ಫ್ರಂಟ್​ ಮತ್ತು ನ್ಯಾಷನಲ್​ ಪೀಪಲ್ಸ್​ ಪಕ್ಷದ ಶಾಸಕರ ಜೊತೆ ಸಿಎಂ ಬಿರೇನ್​ ಸಿಂಗ್​ ಸಭೆ ನಡೆಸಿದ್ದಾರೆ. ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲ ಎಲ್.ಆಚಾರ್ಯ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.

ಮಣಿಪುರದಲ್ಲಿ 2023ರ ಮೇ ತಿಂಗಳಿನಿಂದ ಆರಂಭವಾಗಿರುವ ಜನಾಂಗೀಯ ಸಂಘರ್ಷದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ : ಉಗ್ರರು-ಶಸ್ತ್ರಸಜ್ಜಿತ ಪುರುಷರ ನಡುವೆ ಗುಂಡಿನ ಚಕಮಕಿ, ಐವರು ಸಾವು - MANIPUR VIOLENCE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.