ETV Bharat / bharat

ಗ್ಯಾಂಗ್​ಸ್ಟರ್​ ಗವಳಿ ಅವಧಿಪೂರ್ವ ಬಿಡುಗಡೆ: ಬಾಂಬೆ ಹೈಕೋರ್ಟ್​​ ಆದೇಶಕ್ಕೆ ಸುಪ್ರೀಂ ಕೋರ್ಟ್​ ತಡೆ​ - Gangster Arun Gawli

ಮಹಾರಾಷ್ಟ್ರ ರಾಜ್ಯ ಸರ್ಕಾರದ ಮನವಿಯ ಮೇರೆಗೆ ಕೊಲೆ ಪ್ರಕರಣದ ಆರೋಪಿ ಗ್ಯಾಂಗ್‌ಸ್ಟರ್‌ ಗವಳಿಗೆ ಸುಪ್ರೀಂ ಕೋರ್ಟ್‌ ನೋಟಿಸ್​ ಜಾರಿ ಮಾಡಿದೆ.

sc-stays-till-further-orders-premature-release-of-gangster-arun-gawli-in-murder-case
ಗ್ಯಾಂಗ್​ಸ್ಟರ್​ ಗವಳಿ ಪ್ರಕರಣ (IANS)
author img

By PTI

Published : Jun 3, 2024, 5:32 PM IST

ನವದೆಹಲಿ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಗ್ಯಾಂಗ್​ಸ್ಟರ್​​ ಅರುಣ್​ ಗವಳಿ ಎಂಬಾತನ ಬಿಡುಗಡೆ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಬಾಂಬೆ ಹೈಕೋರ್ಟ್‌ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದೆ. ಇದೇ ವೇಳೆ ರಾಜ್ಯ ಸರ್ಕಾರದ ಮನವಿ ಮೇರೆಗೆ ಗವಳಿಗೆ ನೋಟಿಸ್​ ಜಾರಿ ಮಾಡಿದೆ.

2006ರಲ್ಲಿ ಕ್ಷಮಾದಾನದ ಅಡಿಯಲ್ಲಿ ಬಾಂಬೆ ಹೈಕೋರ್ಟ್​ ಅರುಣ್​ ಗವಳಿಯನ್ನು ಅವಧಿಪೂರ್ವವಾಗಿ ಬಿಡುಗಡೆಗೊಳಿಸಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್​ ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅರವಿಂದ್​ ಕುಮಾರ್​ ಮತ್ತು ಡಾ.ಸಂದೋಪ್​ ಮೆಹ್ತಾ ಅವರನ್ನೊಳಗೊಂಡ ಪೀಠ ನಡೆಸಿತು.

ಮಹಾರಾಷ್ಟ್ರ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ, ಆರೋಪಿಯನ್ನು ಅವಧಿಪೂರ್ವ ಬಿಡುಗಡೆ ಮಾಡಿದ್ದ ಹೈಕೋರ್ಟ್​ ಆದೇಶವನ್ನು​​ ತಡೆ ಹಿಡಿಯಬೇಕು ಎಂದು ಕೋರಿದರು. ಗವಳಿ 2006ರಲ್ಲಿ ರಾಜ್ಯದ ಕ್ಷಮದಾನದ ಅರ್ಜಿ ಅಡಿಯಲ್ಲಿ ಪ್ರಯೋಜನ ಕೇಳಿ ಅರ್ಜಿ ಸಲ್ಲಿಸಿದ್ದನು. ಅದರನುಸಾರ ಅವಧಿಗೆ ಮುನ್ನ ಬಿಡುಗಡೆ ಮಾಡಲಾಗಿದೆ. 2007ರಲ್ಲಿ ಮುಂಬೈನ ಶಿವ ಸೇನಾ ಕಾರ್ಪೋರೇಟರ್​ ಕಮಲಕರ್​ ಜಮ್ಸಂದೆಕರ್​ ಕೊಲೆ ಪ್ರಕರಣದಲ್ಲಿ ಗವಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮಾಕೋಕಾ ನಿಬಂಧನೆ ಅಡಿಯಲ್ಲಿ ಗವಳಿ ಕೊಲೆ ಪ್ರಕರಣದಡಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದನು. ಈ ವೇಳೆ 17 ಲಕ್ಷ ರೂ ದಂಡ ಕೂಡ ವಿಧಿಸಲಾಗಿತ್ತು. ಗವಳಿ ಅವಧಿಪೂರ್ವ ಬಿಡುಗಡೆಯನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ರಾಜ್ಯ ಸರ್ಕಾರ, ಸಂಘಟಿತ ಅಪರಾಧದ ಅಪರಾಧಿಯು 40 ವರ್ಷಗಳ ನಿಜವಾದ ಜೈಲು ಶಿಕ್ಷೆಗೊಳಗಾಗದ ಹೊರತು ಅವಧಿಪೂರ್ವ ಬಿಡುಗಡೆ ಮಾಡಬಾರದು ಎಂದು ವಾದಿಸಿತ್ತು.

ಇದನ್ನೂ ಓದಿ: ಗ್ಯಾಂಗ್​ಸ್ಟರ್​ ಗವಳಿ ಬಿಡುಗಡೆಗೆ ಹೈಕೋರ್ಟ್ ಆದೇಶ: ಸುಪ್ರೀಂ ಮೊರೆ ಹೋದ ಮಹಾರಾಷ್ಟ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.