ETV Bharat / bharat

'ನ್ಯಾಯಾಲಯ ಕುರುಡಲ್ಲ': ರಾಮದೇವ್ ಬಾಬಾಗೆ ಶಾಕ್​ ನೀಡಿದ ಸುಪ್ರೀಂ ಕೋರ್ಟ್ - Ramdev Baba Misleading Ads Case - RAMDEV BABA MISLEADING ADS CASE

Ramdev Baba Misleading Ads Case : ಪತಂಜಲಿ ಆಯುರ್ವೇದಿಕ್ ಔಷಧಿ ಜಾಹೀರಾತು ಪ್ರಕರಣದಲ್ಲಿ ಯೋಗ ಗುರು ರಾಮ್ ದೇವ್ ಮತ್ತು ಕಂಪನಿಯ ಎಂಡಿ ಆಚಾರ್ಯ ಬಾಲಕೃಷ್ಣ ಸಲ್ಲಿಸಿದ ಅಫಿಡವಿಟ್ ಅನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

SUPREME COURT  DECLINES TO ACCEPT AFFIDAVITS  SC IT DOES NOT WANT TO BE GENEROUS
ರಾಮದೇವ್ ಬಾಬಾಗೆ ಶಾಕ್​ ನೀಡಿದ ಸುಪ್ರೀಂ ಕೋರ್ಟ್
author img

By PTI

Published : Apr 10, 2024, 2:15 PM IST

Updated : Apr 10, 2024, 2:40 PM IST

ನವದೆಹಲಿ: ಪತಂಜಲಿಯ ವಿವಾದಾತ್ಮಕ ಜಾಹೀರಾತು ಪ್ರಕರಣದಲ್ಲಿ ಬಾಬಾ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರ ಕ್ಷಮೆಯಾಚನೆಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ. ನೀವು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದೀರಿ, ನ್ಯಾಯಾಲಯ ಕುರುಡಲ್ಲ, ಕ್ರಮಕ್ಕೆ ಸಿದ್ಧರಾಗಿರಿ ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಮಾನತುಲ್ಲಾ ಅವರ ಪೀಠವು ಪತಂಜಲಿ ವಕೀಲರಾದ ವಿಪಿನ್ ಸಂಘಿ ಮತ್ತು ಮುಕುಲ್ ರೋಹಟಗಿ ಅವರಿಗೆ ಹೇಳಿತು.

ಉತ್ತರಾಖಂಡ ಸರ್ಕಾರದ ಪರವಾಗಿ ಧ್ರುವ ಮೆಹ್ತಾ ಮತ್ತು ವಂಶಜಾ ಶುಕ್ಲಾ ಅವರು ಅಫಿಡವಿಟ್ ಓದಿದರು. ಸುಪ್ರಿಂ ಕೋರ್ಟ್ ಹೇಳಿಕೆ ಪ್ರಕಾರ, ನಿಮ್ಮ ಕೇಸ್ ಇದೆ ಎಂದು ಕೇಂದ್ರದಿಂದ ಪತ್ರ ಬರುತ್ತದೆ. ಕಾನೂನನ್ನು ಅನುಸರಿಸಿ, ಇದು ಆರು ಬಾರಿ ಸಂಭವಿಸಿದೆ. ಮತ್ತೆ ಮತ್ತೆ ಲೈಸೆನ್ಸ್ ಇನ್ಸ್​ಪೆಕ್ಟರ್ ಮೌನವಾಗಿದ್ದಾರೆ. ಕೂಡಲೇ ಮೂವರು ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಹೇಳಿ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 16ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ ನಡೆದಿದ್ದೇನು?: ನವೆಂಬರ್ 21, 2023ರ ಈ ನ್ಯಾಯಾಲಯದ ಆದೇಶದ ಪ್ಯಾರಾ 3ರಲ್ಲಿ ದಾಖಲಿಸಲಾದ ಹೇಳಿಕೆಯ ಉಲ್ಲಂಘನೆಗಾಗಿ ನಾನು ಈ ಮೂಲಕ ಬೇಷರತ್ ಕ್ಷಮೆಯಾಚಿಸುತ್ತೇನೆ. ಭವಿಷ್ಯದಲ್ಲಿ ಅಂತಹ ಯಾವುದೇ ರೀತಿಯ ಜಾಹೀರಾತುಗಳನ್ನು ನೀಡಲಾಗುವುದಿಲ್ಲ. ನವೆಂಬರ್ 22, 2023 ರಂದು ನಡೆದ ಪತ್ರಿಕಾಗೋಷ್ಠಿಗಾಗಿ ನಾನು ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ. ಈ ಲೋಪಕ್ಕೆ ನಾನು ವಿಷಾದಿಸುತ್ತೇನೆ ಮತ್ತು ಭವಿಷ್ಯದಲ್ಲಿ ಇಂತಹುದ್ದು ಮತ್ತೆ ಪುನರಾವರ್ತನೆಯಾಗದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡುತ್ತೇನೆ. ಈ ಹೇಳಿಕೆಯ ಮೇಲಿನ ಉಲ್ಲಂಘನೆಗಾಗಿ ನಾನು ಕ್ಷಮೆಯಾಚಿಸುತ್ತೇನೆ. ನಾನು ಯಾವಾಗಲೂ ಕಾನೂನಿನ ಘನತೆ ಮತ್ತು ನ್ಯಾಯದ ಮಹಿಮೆಯನ್ನು ಎತ್ತಿಹಿಡಿಯುತ್ತೇನೆ ಎಂದು ಇಬ್ಬರೂ ತಮ್ಮ ಅಫಿಡವಿಟ್​ನಲ್ಲಿ ಬೇಷರತ್​​ ಕ್ಷಮೆಯಾಚಿಸಿದ್ದಾರೆ.

ಏಪ್ರಿಲ್ 2 ರಂದು, ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ತಮ್ಮ ಅಫಿಡವಿಟ್‌ನಲ್ಲಿ ಬಳಸಿರುವ ಭಾಷೆಗೆ ಸಂಬಂಧಿಸಿದಂತೆ ಅವರನ್ನು ಟೀಕಿಸಲು ಯಾವುದೇ ಪದಗಳಿಲ್ಲದ ಸುಪ್ರೀಂ ಕೋರ್ಟ್, ಕೋರ್ಟ್​ಗೆ ಸೂಕ್ತ ರೀತಿಯ ಅಫಿಡವಿಟ್ ಸಲ್ಲಿಸಲು ಸಾಧ್ಯವಾಗಿಲ್ಲ. ಅದರಲ್ಲಿ ಬಳಸಲಾದ ಭಾಷೆ ಮತ್ತು ಪದಗಳು ಸರಿಯಿಲ್ಲ. ನೀವು ನಿಯಮಗಳನ್ನು ಉಲ್ಲಂಘಿಸಿದ್ದೀರಿ. ನಿಮ್ಮ ವಿರುದ್ಧ ಯಾಕೆ ಕೇಸ್​ ದಾಖಲಿಸಿ ವಿಚಾರಣೆ ನಡೆಸಬಾರದು ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠವು ರಾಮ್‌ದೇವ್ ಮತ್ತು ಬಾಲಕೃಷ್ಣ ಪರ ವಕೀಲರಿಗೆ ಕೇಳಿತ್ತು.

ಅಫಿಡವಿಟ್​ನಲ್ಲಿ ಏನೂ ಬೇಕಾದರೂ ಬರೆದು ಕೋರ್ಟ್​ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೂಕ್ತವಲ್ಲದ ಅಫಿಡವಿಟ್ ಸಲ್ಲಿಸಿದ್ದಕ್ಕೆ ಆರೋಪಿಗಳು ಮೊದಲು ಕೋರ್ಟ್​ ಮುಂದೆ ಕ್ಷಮೆ ಯಾಚಿಸಬೇಕಿತ್ತು ಎಂದಾಗ ಪತಂಜಲಿ ಪರ ವಕೀಲರು, ಬೇಷರತ್​ ಕ್ಷಮೆಯಾಚಿಸಲು ರಾಮ್​ದೇವ್​ ಮತ್ತು ಬಾಲಕೃಷ್ಣ ಸಿದ್ಧರಿದ್ದಾರೆ ಎಂದು ತಿಳಿಸಿದ್ದರು. ಬಳಿಕ ಬಾಬಾ ರಾಮ್​​ದೇವ್​ ಬೇಷರತ್​​ ಕ್ಷಮೆಯಾಚಿಸಿದ್ದರು. ಆದರೆ, ಕ್ಷಮೆಯನ್ನು ಸ್ವೀಕರಿಸಲು ಪೀಠವು ನಿರಾಕರಿಸಿತ್ತು. ನಿಮ್ಮ ಕ್ಷಮೆಯಾಚನೆ ತುಟಿಯಂಚಿನ ನಡೆಯಾಗಿದೆ. ನಿಮ್ಮ ನಡೆ ಮತ್ತು ಕಾರ್ಯ ಒಂದೇ ಆಗಿರಬೇಕು. ಇದನ್ನು ನೀವು ಪಾಲಿಸದಿದ್ದಕ್ಕಾಗಿ ಕೋರ್ಟ್​ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್​ ದಾಖಲಿಸಲಾಗುತ್ತದೆ. ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ಧಿಕ್ಕರಿಸಿದ್ದಕ್ಕಾಗಿ ಇಡೀ ರಾಷ್ಟ್ರಕ್ಕೆ ಕ್ಷಮೆಯಾಚಿಸಬೇಕಾಗಿದೆ ಎಂದು ತಿಳಿಸಿತ್ತು.

ಇನ್ನು ದಾರಿತಪ್ಪಿಸುವ ಜಾಹೀರಾತುಗಳಿಗಾಗಿ ಬಾಬಾ ರಾಮ್‌ದೇವ್ ಮತ್ತು ಪತಂಜಲಿ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಉತ್ತರಾಖಂಡ ಸರ್ಕಾರದಿಂದ ವಿವರಣೆ ಸಹ ಕೇಳಿದೆ. ರಾಜ್ಯವು ತನ್ನ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಸಹ ಛೀಮಾರಿ ಹಾಕಿದೆ. ಆಧುನಿಕ ವೈದ್ಯ ಪದ್ಧತಿಯನ್ನು ಟೀಕಿಸಿದ್ದಕ್ಕಾಗಿ ರಾಮದೇವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ಓದಿ: ದಾರಿ ತಪ್ಪಿಸುವ ಜಾಹೀರಾತು ಪ್ರಕರಣ: ಬೇಷರತ್ ಕ್ಷಮೆಯಾಚಿಸಿದ ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ - Misleading ads case

Last Updated : Apr 10, 2024, 2:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.