ETV Bharat / bharat

ಜಾತಿ ಗಣತಿ ನಡೆಸುವಂತೆ ಕೇಂದ್ರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​ - Caste Census plea

author img

By ETV Bharat Karnataka Team

Published : Sep 2, 2024, 10:56 PM IST

ಭಾರತದಲ್ಲಿ ಸಾಮಾಜಿಕ- ಆರ್ಥಿಕ ಜಾತಿಗಣತಿ ನಡೆಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿದೆ.

ಸುಪ್ರೀಂಕೋರ್ಟ್​
ಸುಪ್ರೀಂಕೋರ್ಟ್​ (ETV Bharat)

ನವದೆಹಲಿ: ಹಿಂದುಳಿದ ಮತ್ತು ಇತರ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸಾಮಾಜಿಕ - ಆರ್ಥಿಕ ಜಾತಿಗಣತಿ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಇದು ನೀತಿ, ಆಡಳಿತದ ವಿಷಯವಾಗಿದ್ದು, ಕಾರ್ಯಾಂಗದ ವ್ಯಾಪ್ತಿಗೆ ಬರುತ್ತದೆ. ಇದರ ಬಗ್ಗೆ ಏನು ಮಾಡಬೇಕು ಎಂಬುದನ್ನು ಸರ್ಕಾರವೇ ತೀರ್ಮಾನಿಸಬೇಕು. ಈ ಬಗ್ಗೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ. ಇಂತಹ ಅರ್ಜಿಯನ್ನು ವಿಚಾರಣೆ ನಡೆಸಲು ಬರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರಿದ್ದ ಪೀಠ ಹೇಳಿದೆ.

ಪಿ.ಪ್ರಸಾದ್ ನಾಯ್ಡು ಎಂಬುವರು ಜಾತಿಗಣತಿ ನಡೆಸಲು ಸರ್ಕಾರಕ್ಕೆ ಸೂಚನೆ ನೀಡಲು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ರವಿಶಂಕರ್ ಜಂಡ್ಯಾಳ ಮತ್ತು ವಕೀಲ ಶ್ರವಣಕುಮಾರ್ ಕರಣಂ ಅವರು, ಹಲವು ರಾಷ್ಟ್ರಗಳು ಜಾತಿಗಣತಿಯನ್ನು ನಡೆಸಿವೆ. ಭಾರತದಲ್ಲಿ ಇದು ಜರುಗಬೇಕಿದೆ. 1992 ರ ಇಂದ್ರ ಸಾಹ್ನಿ ತೀರ್ಪಿನಲ್ಲಿ (ಮಂಡಲ್ ಆಯೋಗದ ತೀರ್ಪು) ಗಣತಿಯು ನಿಯಮಿತವಾಗಿ ನಡೆಯಬೇಕು ಎಂದು ವಿವರಿಸಲಾಗಿದೆ ಎಂದರು. ಆದರೂ ಕೋರ್ಟ್​ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು.

ಅರ್ಜಿಯ ಆಗ್ರಹವೇನು?: ಕೇಂದ್ರ ಸರ್ಕಾರ ಮತ್ತು ಅದರ ಸಂಸ್ಥೆಗಳು 2021 ರಲ್ಲಿ ನಡೆಸಬೇಕಾಗಿದ್ದ ಜನಗಣತಿಯನ್ನು ಇನ್ನೂ ಮಾಡಿಲ್ಲ. 2019 ರಲ್ಲಿ ಜನಗಣತಿ ಬಗ್ಗೆ ಮೊದಲ ಸಭೆಯನ್ನು ನಡೆಸಲಾಗಿತ್ತು. ಇದಾದ ಬಳಿಕ ಯಾವುದೇ ಪ್ರಗತಿ ಕಂಡಿಲ್ಲ. ಭಾರತೀಯ ಜನಗಣತಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, 2021 ರ ಜನಗಣತಿಯನ್ನು ನಡೆಸಲು ಮೊದಲ ಪೂರ್ವಸಿದ್ಧತಾ ಸಭೆಯನ್ನು ಏಪ್ರಿಲ್ 9, 2019 ರಂದು ನಡೆಸಲಾಗಿದೆ.

ಜನಗಣತಿಯು ಕೇವಲ ಜನಸಂಖ್ಯೆಯ ಬೆಳವಣಿಗೆಯನ್ನು ತೋರಿಸುವುದಿಲ್ಲ. ಇದು ದೇಶದ ಜನರ ಸಮಗ್ರ ಸಾಮಾಜಿಕ-ಆರ್ಥಿಕ ದತ್ತಾಂಶವನ್ನು ಒದಗಿಸುತ್ತದೆ. ನೀತಿ ನಿರೂಪಣೆ, ಆರ್ಥಿಕ ಯೋಜನೆ ಮತ್ತು ವಿವಿಧ ಆಡಳಿತಾತ್ಮಕ ಉದ್ದೇಶಗಳಿಗಾಗಿ ಬಳಸಬಹುದು. ಹೀಗಾಗಿ ಜಾತಿಗಣತಿಯನ್ನು ನಡೆಸಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.

ಈ ವರ್ಷ ಜಾತಿಗಣತಿ ಸಾಧ್ಯತೆ: ಕಳೆದ 15 ವರ್ಷಗಳಿಂದ ನಡೆಯದ ಜನಗಣತಿಯು ಈ ವರ್ಷದ ಸೆಪ್ಟೆಂಬರ್​ನಲ್ಲಿ ನಡೆಯುವ ಸಾಧ್ಯತೆ ಇದೆ. ಸಮೀಕ್ಷೆಯು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾದರೆ ಪೂರ್ಣಗೊಳ್ಳಲು ಸುಮಾರು 18 ತಿಂಗಳು ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯದಿಂದ ಅಂತಿಮ ಒಪ್ಪಿಗೆ ಬರಬೇಕಿದೆ. ಜನಗಣತಿ ನಡೆಸುವ ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಸಾಂಖ್ಯಿಕ ಇಲಾಖೆ ಕಾಲಮಿತಿ ನಿಗದಿಪಡಿಸಿಕೊಂಡಿದ್ದು, 2026ರ ಮಾರ್ಚ್ ವೇಳೆಗೆ 15 ವರ್ಷಗಳ ದತ್ತಾಂಶ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿ ವರ್ಗ ತಿಳಿಸಿದೆ.

ಇದನ್ನೂ ಓದಿ: ಸೆಪ್ಟೆಂಬರ್​ನಿಂದಲೇ ಜನಗಣತಿ ಆರಂಭ: 18 ತಿಂಗಳು ಸಮೀಕ್ಷೆ ನಡೆಸುವ ಸಾಧ್ಯತೆ - India Census 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.