ಸಿವಾನ್ (ಬಿಹಾರ) : ಗೋಧಿ ಕೊಯ್ಲು ಮುಗಿಸಿಕೊಂಡು ಹಿಂದಿರುಗುತ್ತಿದ್ದ ಒಂದೇ ಕುಟುಂಬದ ನಾಲ್ವರು ರೈಲಿಗೆ ಸಿಲುಕಿ ಸಾವನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಸಿವಾನ್-ಗೋರಖ್‌ಪುರ ರೈಲ್ವೆ ವಿಭಾಗದ ಮೈರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮೀಪುರ ರೈಲ್ವೆ ಕ್ರಾಸಿಂಗ್ ಬಳಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಮೃತರೆಲ್ಲರೂ ತಮ್ಮ ಗದ್ದೆಯಲ್ಲಿ ಗೋಧಿ ಕಟಾವು ಮಾಡಲು ಹೋಗಿದ್ದರು. ಬಳಿಕ ಕಟಾವು ಮಾಡಿದ ಗೋಧಿಯನ್ನು ತೆಗೆದುಕೊಂಡು ರೈಲ್ವೆ ಹಳಿಯ ಪಕ್ಕದಲ್ಲೇ ಇರುವ ತಮ್ಮ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ, ರೈಲಿಗೆ ಸಿಲುಕಿ ಸ್ಥಳದಲ್ಲೇ ಸುನೀತಾ ದೇವಿ ಮತ್ತು ಶ್ರೀಮತಿ ದೇವಿ ಹಾಗೂ ಇಬ್ಬರು ಮಕ್ಕಳು ಅಸುನೀಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿದೆ.
ಅಪಫಾತದ ಬಳಿಕ ಸ್ಥಳೀಯರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ನಡುರಸ್ತೆಯಲ್ಲಿ ಮೃತದೇಹಗಳನ್ನು ಇಟ್ಟು ಪರಿಹಾರ ಸಿಗುವ ವರೆಗೆ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸುವುದಕ್ಕೆ ಬಿಡುವುದಿಲ್ಲ. ಸ್ಥಳದಲ್ಲೇ ಪರಿಹಾರ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜನರ ಮನವೊಲಿಸುವ ಪ್ರಯತ್ನ ಮಾಡಿದರು.
ಇನ್ನೊಂದೆಡೆ ಮುಡಿಯಾರಿ ಪಂಚಾಯತ್ ಮುಖ್ಯಸ್ಥ ಅಜಯ್ ಭಾಸ್ಕರ್ ಚೌಹಾಣ್ ಕೂಡ ಸ್ಥಳಕ್ಕೆ ಆಗಮಿಸಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೃತರ ಮನೆ ರೈಲು ಮಾರ್ಗದ ದಡದಲ್ಲಿದೆ. ಹೀಗಾಗಿ ಗದ್ದೆಗೆ ಹೋಗಿ ಬರುವುದಕ್ಕೆ ಹಳಿ ದಾಟುವ ಅನಿವಾರ್ಯತೆ ಇದೆ. ಇಂದು ಕೂಡ ಗೋಧಿ ಕೊಯ್ಲು ಮುಗಿಸಿ ಹಿಂತಿರುಗುವಾಗ ಈ ಅಪಘಾತ ಸಂಭವಿಸಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಹೈದರಾಬಾದ್ ಕಾರು ಅಪಘಾತ ಪ್ರಕರಣ: ಬಿಆರ್ಎಸ್ ಮಾಜಿ ಶಾಸಕನ ಪುತ್ರ ಬಂಧನ - Car Accident Case