ETV Bharat / bharat

ಸಮತಾ ದಿವಸ್ 2024: ಇಂದು ಬಾಬು ಜಗಜೀವನ್​ ರಾಮ್​ ಜಯಂತ್ಯುತ್ಸವ - Samata Diwas 2024

ಏಪ್ರಿಲ್ 5 ರಂದು ಪ್ರತಿ ವರ್ಷ ಸಮತಾ ದಿವಸ್ ಆಚರಣೆ ಮಾಡಲಾಗುತ್ತದೆ. ಸಾಮಾಜಿಕ ನ್ಯಾಯದ ಹರಿಕಾರ ಬಾಬು ಜಗಜೀವನ್ ರಾಮ್ ಅವರ ಜನ್ಮದಿನವನ್ನ ಸಮತಾ ದಿವಸ್​ ಎಂದು ಆಚರಿಸುತ್ತಾ ಗೌರವ ಸಲ್ಲಿಸಲಾಗುತ್ತಿದೆ.

author img

By ETV Bharat Karnataka Team

Published : Apr 5, 2024, 6:59 AM IST

Samata Diwas 2024 Celebrating Birth Anniversary of Babu Jagjivan Ram
ಸಮತಾ ದಿವಸ್ 2024: ಇಂದು ಬಾಬು ಜಗಜೀವನ್​ ರಾಮ್​ ಜಯಂತ್ಯುತ್ಸವ

ಹೈದರಾಬಾದ್: ಏಪ್ರಿಲ್ 5.. ಇಂದು ಸಮತಾ ದಿವಸ್, ಸಾಮಾಜಿಕ ನ್ಯಾಯದ ಪ್ರತಿಪಾದಕ ಜಗಜೀವನ್​ ರಾಮ್​​ ಅವರ ಜನ್ಮದಿನದ ಪ್ರಯುಕ್ತ ಈ ಜಯಂತ್ಯುತ್ಸವ ಆಚರಿಸುತ್ತಾ ಬರಲಾಗುತ್ತಿದೆ. ಪ್ರೀತಿಯಿಂದ 'ಬಾಬೂಜಿ' ಎಂದು ಕರೆಯಲ್ಪಡುವ ಅವರ ಜೀವನ ಮತ್ತು ಕೊಡುಗೆಗಳು ಇಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತವೆ. ಅವು ಇಂದಿಗೂ ಎಂದೆಂದಿಗೂ ಪ್ರಸ್ತುತ.

ಜಗಜೀವನ್​​​​​​ ರಾಮ್​​ ಆರಂಭಿಕ ಜೀವನ ಮತ್ತು ಶಿಕ್ಷಣ: ಬಿಹಾರದ ಚಂದ್ವಾದ ದಲಿತ ಕುಟುಂಬದಲ್ಲಿ ಜನಿಸಿದ ಜಗಜೀವನ್ ರಾಮ್, ಕಷ್ಟದಲ್ಲಿ ಬೆಳೆದು ಬಂದವರು. ತಾರತಮ್ಯ ಎಂಬ ಸಾಮಾಜಿಕ ಅನಿಷ್ಠದ ನಡುವೆ ಮೇರು ಸಾಧನೆ ಮಾಡಿ, ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಡಿ ಸಾಧನೆ ಮಾಡಿದರು. ಸಾಮಾಜಿಕ ಅಸಮಾನತೆಯ ನಡುವೆ ಶಿಕ್ಷಣವನ್ನು ಪಡೆದುಕೊಂಡವರು ಬಾಬು ಜಗಜೀವನ್​ ರಾಮ್​, ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಮತ್ತು ನಂತರ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಸಾಧನೆ ಮಾಡಿದರು. ವಿದ್ಯಾರ್ಥಿ ಜೀವನದಿಂದಲೇ ತಾರತಮ್ಯದ ವಿರುದ್ಧ ಹೋರಾಡುತ್ತ ಬೆಳೆದು ಬಂದ ಜಗಜೀವನ್​ ಅವರಿಗೆ, ಸಾಮಾಜಿಕ ನ್ಯಾಯ ಹಾಗೂ ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟಕ್ಕೆ ಬಲ ನೀಡಿದರು.

ಬಾಬು ಜಗಜೀವನ್ ರಾಮ್ ಕಾರ್ಯ ಮತ್ತು ಕೊಡುಗೆ: ಬಾಬು ಜಗಜೀವನ್ ರಾಮ್ ಅವರು ವಿಮೋಚನಾ ಹೋರಾಟಗಾರ ಮತ್ತು ವಿದ್ಯಾರ್ಥಿ ಕಾರ್ಯಕರ್ತನಾಗಿ ತಮ್ಮ ಸಾರ್ವಜನಿಕ ವೃತ್ತಿಜೀವನವನ್ನು ಪ್ರಾರಂಭಿಸಿದರು. 28ನೇ ವಯಸ್ಸಿನಲ್ಲೇ ಅವರು ಬಿಹಾರ ಲೆಜಿಸ್ಲೇಟಿವ್ ಕೌನ್ಸಿಲ್​ಗೆ ನಾಮನಿರ್ದೇಶನಗೊಳ್ಳುವ ಮೂಲಕ ತಮ್ಮ ಶಾಸಕಾಂಗದ ಪ್ರಯಾಣವನ್ನು ಆರಂಭಿಸಿದರು.

ಆಲ್-ಇಂಡಿಯಾ ಡಿಪ್ರೆಸ್ಡ್ ಕ್ಲಾಸಸ್ ಲೀಗ್ ಸ್ಥಾಪನೆ: ಅವರು 1935 ರಲ್ಲಿ ಅಖಿಲ ಭಾರತ ಅಸಮಾನತೆಗೆ ಒಳಗಾದ ವರ್ಗಗಳ ಲೀಗ್ ಸ್ಥಾಪಿಸುವಲ್ಲಿ ಜಗಜೀವನ್ ರಾಂ ಅವರು ಪ್ರಮುಖ ಪಾತ್ರ ವಹಿಸಿದರು, ಅಸ್ಪೃಶ್ಯರಿಗೆ ಸಮಾನತೆ ಮತ್ತು ಹಕ್ಕುಗಳಿಗಾಗಿ ಪ್ರತಿಪಾದಿಸಿದರು. ಜಗಜೀವನ್ ರಾಮ್ ಅವರು ಕಾರ್ಮಿಕ, ಸಂವಹನ ಮತ್ತು ರಕ್ಷಣಾ ಸಚಿವ ಸೇರಿದಂತೆ ಭಾರತ ಸರ್ಕಾರದಲ್ಲಿ ಮಹತ್ವದ ಸ್ಥಾನಗಳನ್ನು ನಿಭಾಯಿಸಿದ್ದಾರೆ.

ಕಾಂಗ್ರೆಸ್ ಗೆ ರಾಜೀನಾಮೆ: ಪ್ರಧಾನಿ ಇಂದಿರಾಗಾಂಧಿ ಅವರ ತುರ್ತು ಪರಿಸ್ಥಿತಿ ವಿರೋಧಿಸಿ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಜನತಾ ಪಕ್ಷದ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡರು. 1977 ರಿಂದ 1979 ರವರೆಗೆ ಭಾರತದ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. 30 ವರ್ಷಗಳ ಕಾಲ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವವನ್ನು ಕೂಡಾ ಹೊಂದಿದ್ದಾರೆ. ಸುದೀರ್ಘ ಆಡಳಿತದಲ್ಲಿ ಇರುವ ಮೂಲಕ ಇತಿಹಾಸವನ್ನೇ ಬರೆದಿದ್ದಾರೆ.

ಜುಲೈ 6, 1986 ರಂದು ಅವರು ನಿಧನರಾದರು. ಅವರ ಗೌರವಾರ್ಥವಾಗಿ ನಿರ್ಮಿಸಲಾದ ಸಮತಾ ಸ್ಥಳ ಸ್ಮಾರಕವು ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರ ಬದ್ಧತೆಯನ್ನು ಸಂಕೇತಿಸುತ್ತಿದೆ.

ಇದನ್ನು ಓದಿ: ಲೋಕಸಭೆ ಮೊದಲ ಹಂತದ ಚುನಾವಣೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಕಣದಲ್ಲಿ 358 ಅಭ್ಯರ್ಥಿಗಳು - Nomination

ETV Bharat Logo

Copyright © 2024 Ushodaya Enterprises Pvt. Ltd., All Rights Reserved.