ETV Bharat / bharat

ಉಗ್ರವಾದ ಹತ್ತಿಕ್ಕಲು ವರ್ಷಕ್ಕೆ 1,000 ಕೋಟಿ ಖರ್ಚು: ಬೃಹತ್ ಅನುದಾನದ ಹಿಂದಿನ ಕಾರ್ಯತಂತ್ರದ ಬಗ್ಗೆ ನಿಮಗೆಷ್ಟು ಗೊತ್ತು? - central funds

author img

By ETV Bharat Karnataka Team

Published : Apr 27, 2024, 1:44 PM IST

ಯುವ ಪೀಳಿಗೆ ಭಯೋತ್ಪಾದನಾ ಚಟುವಟಿಕೆಯತ್ತ ಆಕರ್ಷಿತರಾಗದಂತೆ ತಡೆಯಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಉಗ್ರವಾದ ಹತ್ತಿಕ್ಕಲು ಅಂತಾನೇ ಸರ್ಕಾರ ವರ್ಷಕ್ಕೆ 1,000 ಕೋಟಿ ಹಣ ವ್ಯಯಿಸುತ್ತಿದೆ. ಆದರೂ, ಅಲ್ಲಲ್ಲಿ ಮಾವೋವಾದಿಗಳ ಉಪಟಳ ಎದ್ದು ಕಾಣಿಸುತ್ತಿದ್ದು ಕೆಲವು ಪ್ರದೇಶಗಳು ಅವರ ಕಪಿಮುಷ್ಠಿಯಲ್ಲಿ ಸಿಲುಕಿರುವುದು ದುರಂತ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: ಸುಶಿಕ್ಷಿತ ಯುವಕರು ಉಗ್ರವಾದಿಗಳ ಕೈಗೊಂಬೆಯಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಉಗ್ರವಾದ ನಿಗ್ರಹಿಸುವ ಹಾಗೂ ಈಗಾಗಲೇ ಭಯೋತ್ಪಾದನೆ ಕೃತ್ಯಗಳತ್ತ ಆಕರ್ಷಿತರಾಗಿರುವವರನ್ನು ಮುಖ್ಯವಾಹಿನಿಗೆ ತರುವುದು ಸೇರಿದಂತೆ ದೇಶದಲ್ಲಿ ವಿಷ ಬೀಜದಂತೆ ಹಬ್ಬುತ್ತಿರುವ ಎಡಪಂಥೀಯ ಭಯೋತ್ಪಾದನೆಗೆ ಕಡಿವಾಣ ಹಾಕಲು ಪಣತೊಟ್ಟಿರುವ ಕೇಂದ್ರ ಸರ್ಕಾರ, ಇದಕ್ಕಾಗಿ ಅಪಾರ ಪ್ರಮಾಣದ ಹಣ ವ್ಯಯಿಸುತ್ತಿದೆ.

ಕಳೆದ ಐದು ವರ್ಷಗಳಲ್ಲಿ ಮಾಡಲಾದ ಖರ್ಚುಗಳ ಲೆಕ್ಕಾಚಾರ ಗಮನಿಸುವುದಾರೆ ವರ್ಷವೊಂದಕ್ಕೆ ಸರಿಸುಮಾರು ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ದೇಶದಲ್ಲಿ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಆಗಾಗ ಹೇಳಿಕೆ ನೀಡುತ್ತಿರುವುದು ಗೊತ್ತಿರುವ ವಿಚಾರ. ಇದರ ಭಾಗವಾಗಿ ಮಾರಕವಾಗಿರುವ ಉಗ್ರವಾದ ಹತ್ತಿಕ್ಕಲು ಕೇಂದ್ರ ಈ ಹಣ ವ್ಯಯಿಸುತ್ತಿದೆ.

ನಕ್ಸಲ್‌ ಪೀಡಿತ ರಾಜ್ಯಗಳಲ್ಲಿ ಮಾವೋವಾದಿಗಳ ನಿರ್ಮೂಲನೆಗೆ ಕೇಂದ್ರ ಪಡೆಗಳನ್ನು ಕಳುಹಿಸುವುದು ಮೊದಲ ಹೆಜ್ಜೆ ಆದರೂ ಅದರ ಜೊತೆಗೆ, ದೂರದ ಪ್ರದೇಶಗಳಲ್ಲಿ ಜನರು ಎಡಪಂಥೀಯ ಉಗ್ರವಾದದತ್ತ ಮುಖ ಮಾಡದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

ಒಂದು ಕಾಲದಲ್ಲಿ ಆರು ರಾಜ್ಯಗಳಲ್ಲಿ ಮಾವೋವಾದಿಗಳ ಪ್ರಭಾವ ಪ್ರಬಲವಾಗಿತ್ತು. ರಾಜ್ಯಗಳ ಸಂಖ್ಯೆ ಕಡಿಮೆ ಆಗಿದೆಯಾದರೂ, ಇತ್ತೀಚೆಗೆ ಛತ್ತೀಸ್‌ಗಢ, ಮಹಾರಾಷ್ಟ್ರ, ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ತೀವ್ರ ಪರಿಣಾಮ ಬೀರುತ್ತಿದೆ. ಇದನ್ನು ನಿಯಂತ್ರಣ ಮಾಡಲು ಎಂದೇ ಬುಡಕಟ್ಟು ಜನರನ್ನು ಉಗ್ರವಾದದಿಂದ ದೂರ ಇಡಲು ಅನೇಕ ಅಭಿವೃದ್ಧಿ ಯೋಜನೆ ಹಮ್ಮಿಕೊಂಡಿದೆ. ಮಾದಕ ವಸ್ತು ಸೇವಿಸುವ ಚಟ ಹೊಂದಿರುವವರನ್ನು ವ್ಯಸನ ಮುಕ್ತರಾಗಲು ನೆರವಾಗುವಂತೆ, ಉಗ್ರವಾದದ ಬಗ್ಗೆ ಒಲವು ಹೊಂದಿರುವ ಯುವಕರು ಆ ಆಕರ್ಷಣೆಯಿಂದ ವಿಮುಖರಾಗುವಂತೆ, ಅವರಲ್ಲಿ ಮನೆ ಮಾಡಿರುವ ತಾರತಮ್ಯ ಭಾವನೆಯನ್ನು ಹೋಗಲಾಡಿಸಲು ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಆದರೂ, ಅಲ್ಲಲ್ಲಿ ಮಾವೋವಾದಿಗಳ ಉಪಟಳ ಎದ್ದು ಕಾಣಿಸುತ್ತಿದ್ದು ಕೆಲವು ಪ್ರದೇಶಗಳು ಅವರ ಕಪಿಮುಷ್ಠಿಯಲ್ಲಿ ಸಿಲುಕಿರುವುದು ದುರಂತ.

ಕಳೆದ ನಾಲ್ಕು ತಿಂಗಳಲ್ಲಿ ಛತ್ತೀಸ್‌ಗಢದಲ್ಲಿ ಸುಮಾರು 80 ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದರೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಹುದು. ಭಯೋತ್ಪಾದನಾ ಪ್ರಕರಣಗಳಲ್ಲಿ ಭಾಗಿಯಾಗುವ ಯುವಕರ ಮನವೊಲಿಸುವ ಸಲುವಾಗಿ ಕೇವಲ ಪಡೆಗಳನ್ನಷ್ಟೇ ಕಳುಹಿಸುವ ಬದಲು ಕೇಂದ್ರ ವಿವಿಧ ಯೋಜನೆಗಳ ಅಡಿ ಮಾವೋವಾದಿ ಪೀಡಿತ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಹಣವನ್ನು ಸಹ ನೀಡುತ್ತಿದೆ. 2018-19 ರಿಂದ 2022-23 ರವರೆಗೆ ಅಂದರೆ ಕೇಂದ್ರವು ಐದು ವರ್ಷಗಳಲ್ಲಿ ನಕ್ಸಲ್‌ ಪೀಡಿತ ರಾಜ್ಯಗಳಿಗೆ 4,931 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂಬ ಮಾಹಿತಿ ಇದೆ. ಇದರೊಂದಿಗೆ ಪಡೆಗಳನ್ನು ಕ್ಷೇತ್ರ ಮಟ್ಟಕ್ಕೆ ಸಾಗಿಸಲು ಮತ್ತು ಗಾಯಾಳುಗಳನ್ನು ಚಿಕಿತ್ಸೆಗೆ ಕರೆದೊಯ್ಯಲು ಹೆಲಿಕಾಪ್ಟರ್‌ಗಳ ವೆಚ್ಚದಲ್ಲಿ ಇನ್ನೂ 765 ಕೋಟಿ ರೂ. ಕೇಂದ್ರ ಗೃಹ ಸಚಿವಾಲಯ ಇತ್ತೀಚಿನ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದೆ. ಈ ಹಣದಲ್ಲಿ ಸಿಂಹಪಾಲು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗುತ್ತಿದೆ ಅನ್ನೋದನ್ನು ಹೆಚ್ಚು ಮಹತ್ವ ನೀಡಿ ಹೇಳಬೇಕಿಲ್ಲ.

ಕೇಂದ್ರ ಸರ್ಕಾರವು 'ವಿಶೇಷ ಮೂಲಸೌಕರ್ಯ ಯೋಜನೆ', 'ಸಮಗ್ರ ಕ್ರಿಯಾ ಯೋಜನೆ', 'ಭದ್ರತಾ ಸಂಬಂಧಿತ ವೆಚ್ಚ' ಮತ್ತು 'ವಿಶೇಷ ಕೇಂದ್ರ ಸಹಾಯ'ದಂತಹ ಅನೇಕ ಯೋಜನೆಗಳ ಅಡಿ ಈ ಹಣವನ್ನು ಮಂಜೂರು ಮಾಡಲಾಗುತ್ತದೆ. ಈ ಹಣವನ್ನು ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ, ಪೊಲೀಸ್ ವಾಹನಗಳ ಖರೀದಿ, ಅಗತ್ಯ ಶಸ್ತ್ರಾಸ್ತ್ರಗಳು, ಸಶಸ್ತ್ರ ಪಡೆಗಳ ಆಧುನೀಕರಣ ಮತ್ತು ತಂತ್ರಜ್ಞಾನದಂತಹ ದೂರದ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೂ ಇದನ್ನು ಖರ್ಚು ಮಾಡಬಹುದು.

ಈ ಐದು ವರ್ಷಗಳಲ್ಲಿ, ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ 13,630 ಕಿಲೋಮೀಟರ್ ರಸ್ತೆಗಳು ಮತ್ತು 13,823 ಸೆಲ್ ಫೋನ್ ಟವರ್‌ಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಶಿಕ್ಷಣ, ಉದ್ಯೋಗ, ರಸ್ತೆಗಳ ನಿರ್ಮಾಣ, ಮೂಲ ಸೌಕರ್ಯ ಸೇರಿದಂತೆ ಅವರಿಗೆ ಬೇಕಾದ ಕನಿಷ್ಠ ವ್ಯವಸ್ಥೆ ಒದಗಿಸಿದ್ದೇ ಆದಲ್ಲಿ ನಕ್ಸಲ್‌ ಪೀಡಿತ ಜನರು ಮಾವೋವಾದಿಗಳ ಕಪಿಮುಷ್ಠಿಯಲ್ಲಿ ಸಿಲುಕದಂತೆ ತಡೆಯಬಹುದು ಎಂಬುದು ಸರ್ಕಾರದ ಮುಖ್ಯ ಉದ್ದೇಶ. ಭಾಗಶಃ ಕೇಂದ್ರ ಸರ್ಕಾರದ ಕೆಲವು ಪ್ರಯತ್ನಗಳು ಫಲ ನೀಡುತ್ತಿರುವಂತೆ ತೋರುತ್ತಿದೆ.

2010 ರಲ್ಲಿ, 96 ಜಿಲ್ಲೆಗಳ 465 ಪೊಲೀಸ್ ಠಾಣೆಗಳಲ್ಲಿ ಮಾವೋವಾದಿ ಚಟುವಟಿಕೆಗಳು ಕಂಡು ಬಂದಿದ್ದವು. 2023ರ ವೇಳೆಗೆ 42 ಜಿಲ್ಲೆಗಳ, 171 ಪೊಲೀಸ್ ಠಾಣೆಗಳಿಗೆ ಸೀಮಿತವಾಗಿವೆ. ಈ ಮಟ್ಟಿಗೆ, ಒಂದು ಕಡೆ ಭದ್ರತಾ ಪಡೆಗಳ ಮೇಲೆ ಒತ್ತಡ ಹೆಚ್ಚಿಸುವ ಮೂಲಕ ಎಡಪಂಥೀಯ ಉಗ್ರವಾದದ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರವು ಒಂದು ಹೆಜ್ಜೆ ಮುಂದಿಟ್ಟಿದೆ. ಮತ್ತೊಂದೆಡೆ ಅಭಿವೃದ್ಧಿಯೊಂದಿಗೆ ನಕ್ಸಲ್‌ ಪೀಡಿತ ಜನರಿಗೂ ಹತ್ತಿರವಾಗುತ್ತಿದೆ. ಬರುವ ದಿನಗಳಲ್ಲಿ ಈ ಯೋಜನೆಗೆ ಮತ್ತಷ್ಟು ಪೂರ್ಣ ರೂಪ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಭೀಕರ ಗುಂಡಿನ ಕಾಳಗ; 29 ನಕ್ಸಲರ ಹತ್ಯೆಗೈದ ಭದ್ರತಾ ಪಡೆ - Naxal Encounter

ETV Bharat Logo

Copyright © 2024 Ushodaya Enterprises Pvt. Ltd., All Rights Reserved.