ಹೈದರಾಬಾದ್: ಮನೆಗೆಲಸ, ಕಟ್ಟಡಗಳಿಗೆ ಭದ್ರತೆ ಸೇರಿದಂತೆ ಹಲವು ಕೆಲಸಗಳಿಗೆ ಕಡಿಮೆ ವೇತನಕ್ಕೆ ನೇಮಕಗೊಳ್ಳುವ ಕಾರ್ಮಿಕರು ಕಳ್ಳತನ, ವಂಚನೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಘಟನೆಗಳು ನಗರದಲ್ಲಿ ಹೆಚ್ಚಾಗಿದೆ. ಕಳೆದ ಐದು ತಿಂಗಳಿನಲ್ಲಿ ಈ ರೀತಿಯ 40ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ನೇಪಾಳ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ವಿವಿಧೆಡೆಯ ಜನರು ಇಂತಹ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದಲ್ಲಿ ಇತ್ತೀಚಿಗೆ ದಾಖಲಾಗಿರುವ ಪ್ರಮುಖ ಗಂಭೀರ ಸ್ವರೂಪದ ಪ್ರಕರಣಗಳು ಹೀಗಿವೆ.
- ಸಿಕಂದರಾಬಾದ್ನಲ್ಲಿ ಉದ್ಯೋಗಕ್ಕೆ ನೇಮಕಗೊಂಡ ನೇಪಾಳಿ ದಂಪತಿ 25-30 ಲಕ್ಷ ರೂ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ.
- ಜುಬ್ಲಿ ಹಿಲ್ನಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ಮನೆಗೆಲಸಕ್ಕಿದ್ದ ವ್ಯಕ್ತಿ 70 ಲಕ್ಷ ಮೌಲ್ಯದ ಸ್ವತ್ತು ಕಳವು ಮಾಡಿದ್ದಾರೆ.
- ಗಗನ್ಮಹಲ್ನಲ್ಲಿ ನಿವೃತ್ತ ಹಿರಿಯ ಉದ್ಯೋಗಿಯ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ, ಅವರ ಎಟಿಎಂ ಕಾರ್ಡ್ನಿಂದ 30 ಲಕ್ಷ ರೂ ದುರ್ಬಳಕೆ ಮಾಡಿಕೊಂಡಿದ್ದಾನೆ.
ಇಂಥ ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ಬಹುತೇಕರು ಹೊಸದಾಗಿ ಕೆಲಸಕ್ಕೆ ನೇಮಕವಾಗಿದ್ದು, ಅಪರಾಧಕ್ಕಾಗಿ ಯೋಜನೆ ರೂಪಿಸುತ್ತಾರೆ. ಮೊದಲಿಗೆ ಮನೆ ಮಾಲೀಕರ ವಿಶ್ವಾಸ ಗಳಿಸುತ್ತಾರೆ. ನಂತರ ಅವಕಾಶವನ್ನು ಉಪಯೋಗಿಸಿಕೊಂಡು, ಕಳ್ಳತನ ಮಾಡಿ ಪರಾರಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೆಲವು ಸಲಹೆಗಳನ್ನು ನೀಡಿದ್ದಾರೆ.
- ಉದ್ಯೋಗಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ವೈಯಕ್ತಿಕ ಮಾಹಿತಿ, ಅಪರಾಧ ದಾಖಲೆ, ಆಧಾರ್ ಮಾಹಿತಿ ಮತ್ತು ಸಂಪರ್ಕದ ವಿವರ ಪಡೆಯಿರಿ.
- Hawk-Eye ಆ್ಯಪ್ ಬಳಸಿಕೊಂಡು ಉದ್ಯೋಗಿಯ ಹಿನ್ನೆಲೆಯನ್ನು ಪರಿಶೀಲನೆ ನಡೆಸಬಹುದು.
ಇದನ್ನೂ ಓದಿ: ₹20,000 ಕೋಟಿ ಬ್ಯಾಂಕ್ ವಂಚನೆ ಪ್ರಕರಣ: ಅಮ್ಟೇಕ್ ಗ್ರೂಪ್ಗೆ ಸೇರಿದ 35 ಕಡೆ ಇಡಿ ದಾಳಿ - Bank Fraud Case