ನವದೆಹಲಿ: 75ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಐತಿಹಾಸಿಕ ಪರೇಡ್ ನಡೆಯಿತು. ಇಂದು ನಡೆದ ಪಥ ಸಂಚಲನದಲ್ಲಿ ಮಹಿಳೆಯರದ್ದೇ ಪ್ರಾಬಲ್ಯವಿತ್ತು. ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಆಕರ್ಷಕ ಪರೇಡ್ನಲ್ಲಿ ಗಡಿ ಭದ್ರತಾ ಪಡೆಯ (BSF) ಒಂಟೆ ತುಕಡಿಯ ಪರೇಡ್ ವಿಶೇಷವಾಗಿ ಅತಿಥಿಗಳ ಗಮನ ಸೆಳೆಯಿತು. ಬಹುವರ್ಣದ ಸ್ಯಾಡಲ್ಗಳನ್ನು ಧರಿಸಿ, ಅಲಂಕೃತಗೊಂಡಿದ್ದ ಒಂಟೆಗಳ ಮೇಲೆ ಮಹಿಳಾ ಹಾಗೂ ಪುರುಷ ಸವಾರರು ಪರೇಡ್ನಲ್ಲಿ ಸಾಗಿದರು.
ಬಿಎಸ್ಎಫ್ ಮಹಿಳಾ ತುಕಡಿಯ ಡೆಪ್ಯುಟಿ ಕಮಾಂಡೆಂಟ್ ಮನೋಹರ್ ಸಿಂಗ್ ಖೀಚೀ ಈ ಪರೇಡ್ನ ನೇತೃತ್ವ ವಹಿಸಿದ್ದರು. ಇನ್ಸ್ಪೆಕ್ಟರ್ ಶೈತಾನ್ ಸಿಂಗ್ ಹಾಗೂ ಇಬ್ಬರು ಸಬ್ ಇನ್ಸ್ಪೆಕ್ಟರ್ ಶ್ರೇಣಿಯ ಅಧಿಕಾರಿಗಳು ಸಹಕರಿಸಿದರು. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್) ಮತ್ತು ದೆಹಲಿ ಪೊಲೀಸರ ತುಕಡಿಗಳನ್ನು ಮಹಿಳಾ ಸಿಬ್ಬಂದಿ ಮುನ್ನಡೆಸಿದರೆ, ಬಿಎಸ್ಎಫ್ ಕವಾಯತು ತಂಡವನ್ನು ಅಸಿಸ್ಟೆಂಟ್ ಕಮಾಂಡೆಂಟ್ ಮೋನಿಕಾ ಲಾಕ್ರಾ ಮುನ್ನಡೆಸಿದರು. ಈ ತುಕಡಿಯು ಮಹಿಳಾ ಒಂಟೆ ಸವಾರರನ್ನು ಹೆಚ್ಚು ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪರಾಕ್ರಮವನ್ನು ಪ್ರತಿನಿಧಿಸಿತು.
-
#WATCH | BSF camel contingent participates in the #RepublicDay2024 parade. It is being led by Deputy Commander Manohar Singh Kheechee. pic.twitter.com/DNEHHnV6dX
— ANI (@ANI) January 26, 2024 " class="align-text-top noRightClick twitterSection" data="
">#WATCH | BSF camel contingent participates in the #RepublicDay2024 parade. It is being led by Deputy Commander Manohar Singh Kheechee. pic.twitter.com/DNEHHnV6dX
— ANI (@ANI) January 26, 2024#WATCH | BSF camel contingent participates in the #RepublicDay2024 parade. It is being led by Deputy Commander Manohar Singh Kheechee. pic.twitter.com/DNEHHnV6dX
— ANI (@ANI) January 26, 2024
ಒಂಟೆ ಪಡೆಗಳ ಮಹತ್ವ ಏನು?: ಈ ಶಿಪ್ಸ್ ಆಫ್ ದಿ ಡೆಸರ್ಟ್ (ಒಂಟೆಗಳು) ರಾಜಸ್ಥಾನದ ಥಾರ್ ಮರುಭೂಮಿ ಹಾಗೂ ರಾನ್ ಆಫ್ ಕಚ್ನ ನಿರಾಶ್ರಿತ ಭೂಪ್ರದೇಶದಲ್ಲಿರುವ ಗಡಿ ಪಡೆಗಳ ಸಿಬ್ಬಂದಿಯ ವಿಶ್ವಾಸಾರ್ಹ ಸಹಚರರಾಗಿದ್ದಾರೆ. ರಾಜಸ್ಥಾನ ಹಾಗೂ ಗುಜರಾತ್ ಗಡಿಗಳಲ್ಲಿ ಕಳ್ಳಸಾಗಣೆದಾರರು ಹಾಗೂ ಉಗ್ರಗಾಮಿಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚುವಲ್ಲಿ ಒಂಟೆ ಸವಾರಿ ಪಡೆಗಳು ಪ್ರಮುಖ ಪಾತ್ರವಹಿಸಿವೆ. ಭಾರತದಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಬಿಎಸ್ಎಫ್ ಒಂಟೆ ತುಕಡಿಯ ಕಾರ್ಯಕ್ಷಮತೆಯನ್ನು ವಿದೇಶಿ ಪ್ರತಿನಿಧಿಗಳು ಸಹ ಶ್ಲಾಘಿಸಿದ್ದರು. ಪ್ರಪಂಚದಲ್ಲಿ ಈ ರೀತಿಯ ಏಕೈಕ ಬ್ಯಾಂಡ್ ಆಗಿರುವ ಬಿಎಸ್ಎಫ್ ಒಂಟೆ ದಳ ಪರೇಡ್ನಲ್ಲಿ "ಹಮ್ ಹೈ ಸೀಮಾ ಸುರಕ್ಷಾ ಬಲ್, ಬಹದುರೊ ಕಾ ದಳ್" ಹಾಡನ್ನು ಮೊಳಗಿಸಿದವು. ಬಿಎಸ್ಎಫ್ ಒಂಟೆ ದಳ 1990ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಮೊದಲ ಬಾರಿಗೆ ಭಾಗವಹಿಸಿತ್ತು.
ಉಳಿದಂತೆ ಭಾರತೀಯ ಸೇನಾ ಪ್ರದರ್ಶನದ ಜೊತೆಗೆ ವಿವಿಧ ರಾಜ್ಯಗಳ ವಿಶೇಷ ಥೀಮ್ಗಳನ್ನು ಹೊಂದಿದ್ದ ಟ್ಯಾಬ್ಲೋಗಳ ಪ್ರದರ್ಶನ ನಡೆಯಿತು. ಅದರಲ್ಲಿ DRDO ಟ್ಯಾಬ್ಲೋದಲ್ಲಿ ವಿಭಿನ್ನ ಥೀಮ್ಗಳನ್ನು ಪ್ರದರ್ಶಿಸಲಾಯಿತು. ಟ್ಯಾಬ್ಲೋಗಳಲ್ಲಿ ಮ್ಯಾನ್ ಪೋರ್ಟಬಲ್ ಆಂಟಿ - ಟ್ಯಾಂಕ್ ಗೈಡೆಡ್ ಮಿಸೈಲ್ (MPATGM), ಆ್ಯಂಟಿ ಸ್ಯಾಟಲೈಟ್ (ASAT) ಕ್ಷಿಪಣಿ, ಅಗ್ನಿ-5, ಮೇಲ್ಮೈಯಿಂದ ಮೇಲ್ಮೈಗೆ ಬ್ಯಾಲಿಸ್ಟಿಕ್ ಕ್ಷಿಪಣಿ, ಅತಿ ಕಡಿಮೆ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆ (VSHORADS), ನೌಕಾ ವಿರೋಧಿ ಹಡಗು ಕ್ಷಿಪಣಿ, ಸಣ್ಣ ಶ್ರೇಣಿ (NASM-SR), ಆ್ಯಂಟಿ ಟ್ಯಾಂಕ್ ಮಾರ್ಗದರ್ಶಿ ಕ್ಷಿಪಣಿ 'ಹೆಲಿನಾ', ತ್ವರಿತ ಪ್ರತಿಕ್ರಿಯೆ ಸರ್ಫೇಸ್ ಟು ಏರ್ ಕ್ಷಿಪಣಿ (QRSAM), ಅಸ್ಟ್ರಾ, ಲಘು ಯುದ್ಧ ವಿಮಾನ 'ತೇಜಸ್', 'ಉತ್ತಮ್' ಸಕ್ರಿಯ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಅರೇ ರಾಡಾರ್ (AESAR) , ಸುಧಾರಿತ ಎಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಮ್ 'ಶಕ್ತಿ', ಸೈಬರ್ ಸೆಕ್ಯುರಿಟಿ ಸಿಸ್ಟಮ್ಸ್, ಕಮಾಂಡ್ ಕಂಟ್ರೋಲ್ ಸಿಸ್ಟಮ್ಸ್ ಮತ್ತು ಸೆಮಿ ಕಂಡಕ್ಟರ್ ಫ್ಯಾಬ್ರಿಕೇಶನ್ ಫೆಸಿಲಿಟಿ ಕುರಿತ ಮಾದರಿಗಳನ್ನು ಪ್ರದರ್ಶಿಸಲಾಯಿತು.
ಈ ಬಾರಿಯ ಪರೇಡ್ನಲ್ಲಿ ನಾರೀ ಶಕ್ತಿ ಪ್ರದರ್ಶನ ಹೆಚ್ಚು ಗಮನ ಸೆಳೆದಿದ್ದು, ರಕ್ಷಣಾ ಸಂಶೋಧನೆಯ ಪ್ರಮುಖ ಕ್ಷೇತ್ರಗಳಲ್ಲಿ ಡಿಆರ್ಡಿಒದ ಮಹಿಳಾ ವಿಜ್ಞಾನಿಗಳ ಅಮೂಲ್ಯ ಕೊಡುಗೆಯನ್ನು ಸಹ ಪ್ರದರ್ಶಿಸಲಾಯಿತು. ಇದರೊಂದಿಗೆ, ಎನ್‌ಸಿಸಿಯ ವಿವಿಧ ತುಕಡಿಗಳು ಸಹ ಮಹಿಳಾ ಪ್ರಾತಿನಿಧ್ಯಕ್ಕೆ ಸಾಕ್ಷಿಯಾದವು.
ಗಮನ ಸೆಳೆದ ಕನ್ನಡತಿ ಪುಣ್ಯ ಪೊನ್ನಮ್ಮ ನೇತೃತ್ವದ ತಂಡ: ಮೊದಲ ಬಾರಿಗೆ, ಉತ್ತರ ಪ್ರದೇಶ ನಿರ್ದೇಶನಾಲಯದ ಹಿರಿಯ ಅಧೀನ ಅಧಿಕಾರಿ ತನು ತೆವಾಟಿಯಾ ನೇತೃತ್ವದ ಎಲ್ಲ ಹುಡುಗಿಯರ ತ್ರಿ - ಸೇವಾ ಮಾರ್ಚಿಂಗ್ ತಂಡ ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿತ್ತು. ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಹಿರಿಯ ಅಧೀನ ಅಧಿಕಾರಿ ಪುಣ್ಯ ಪೊನ್ನಮ್ಮ ನೇತೃತ್ವದ 148 ಕೆಡೆಟ್ಗಳ ಗರ್ಲ್ಸ್ ಮಾರ್ಚಿಂಗ್ ಕಾಂಟಿಜೆಂಟ್ (ಸೇನೆ)ಯ ಪಥಸಂಚಲನ ಗಮನ ಸೆಳೆಯಿತು. ಎನ್ಸಿಸಿ ಬ್ಯಾಂಡ್ನಲ್ಲೂ ಹುಡುಗಿಯರದೇ ಪಾತಿನಿಧ್ಯವಿತ್ತು. ಹಿರಿಯ ಅಂಡರ್ ಆಫೀಸರ್ ಯಶಸ್ವಿಕಾ ಗೌರ್ ಹಾಗೂ ಅಂಕಿತಾ ನೇತೃತ್ವದಲ್ಲಿ ಬಿರ್ಲಾ ಬಾಲಿಕಾ ವಿದ್ಯಾ ಪೀಠ ಪಿಲಾನಿ, ರಾಜಸ್ಥಾನ ಹಾಗೂ ಈಶಾನ್ಯ ಪ್ರದೇಶದ ಹುಡುಗಿಯರ ಸಂಯೋಜಿತ ಬ್ಯಾಂಡ್ ಪರೇಡ್ನಲ್ಲಿ ಪಾಲ್ಗೊಂಡಿತ್ತು.
ರಾಷ್ಟ್ರೀಯ ಸೇವಾ ಯೋಜನೆ (NSS) ತುಕಡಿಯಿಂದ 200 ಮಹಿಳಾ ಸ್ವಯಂ ಸೇವಕರು ಪಥಸಂಚಲನ ಮಾಡಿದರು. ಗುವಾಹಟಿಯ ಎನ್ಎಸ್ಎಸ್ನ ಪ್ರಾದೇಶಿಕ ನಿರ್ದೇಶನಾಲಯದ ಸಿಕ್ಕಿಂನ ರಾಗಿನಾ ತಮಾಂಗ್ ಇದರ ನೇತೃತ್ವ ವಹಿಸಿದ್ದರು.
ಇದನ್ನೂ ಓದಿ: 75ನೇ ಗಣರಾಜ್ಯೋತ್ಸವ: ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಸಚಿವ ಮಧು ಬಂಗಾರಪ್ಪ