ETV Bharat / bharat

ಆರ್​ಬಿಐಗೆ ರಷ್ಯಾ ಭಾಷೆಯಲ್ಲಿ ಬಾಂಬ್​ ಬೆದರಿಕೆ ಸಂದೇಶ - RESERVE BANK OF INDIA

ಮುಂಬೈನಲ್ಲಿರುವ ರಿಸರ್ವ್‌ ಬ್ಯಾಂಕ್‌ ಇಂಡಿಯಾ ಪ್ರಧಾನ ಕಚೇರಿಗೆ ರಷ್ಯಾ ಭಾಷೆಯಲ್ಲಿ ಬಾಂಬ್‌ ಬೆದರಿಕೆ ಇಮೇಲ್ ಬಂದಿದೆ.

reserve-bank-of-india-has-received-a-bomb-threat-via-email
ಆರ್​ಬಿಐ (IANS)
author img

By ETV Bharat Karnataka Team

Published : Dec 13, 2024, 4:06 PM IST

ಮುಂಬೈ(ಮಹಾರಾಷ್ಟ್ರ): ದೇಶದಲ್ಲಿ ಆನ್​ಲೈನ್​ ಮೂಲಕ ಬಾಂಬ್​ ಬೆದರಿಕೆ ಕರೆಗಳು ಹೆಚ್ಚುತ್ತಿವೆ. ಇದೀಗ ಭಾರತೀಯ ರಿಸರ್ವ್​ ಬ್ಯಾಂಕ್​ಗೆ(ಆರ್‌ಬಿಐ) ಇಮೇಲ್​ ಮೂಲಕ ಬೆದರಿಕೆ ಹಾಕಲಾಗಿದೆ. ಒಂದೇ ತಿಂಗಳಲ್ಲೇ ಬಂದ ಎರಡನೇ ಬೆದರಿಕೆ ಇದಾಗಿದೆ.

ದುಷ್ಕರ್ಮಿಗಳು ಗುರುವಾರ ಆರ್​ಬಿಐ ಅಧಿಕೃತ ವೆಬ್​ ಜಾಲತಾಣಕ್ಕೆ ಬೆದರಿಕೆ ಇಮೇಲ್ ಕಳುಹಿಸಿದ್ದು, ಕಟ್ಟಡ ಸ್ಪೋಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಮೇಲ್​ ಸಂದೇಶವನ್ನು ರಷ್ಯಾನ್​ ಭಾಷೆಯಲ್ಲಿ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನ ಮಠ ರಾಮಬಾಯಿ ಮಾರ್ಗ್​​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಇಮೇಲ್​ ಸಂದೇಶ ಕಳುಹಿಸಿದವರ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

ನವೆಂಬರ್​ 16ರಂದು ಕೂಡ ಇದೇ ರೀತಿ ಆರ್​ಬಿಐ ಕಸ್ಟಮರ್​ ಕೇರ್​​ಗೆ ಬಾಂಬ್​ ಬೆದರಿಕೆ ಬಂದಿತ್ತು. (ಐಎಎನ್​ಎಸ್​)

ಇದನ್ನೂ ಓದಿ: ರಾಷ್ಟ್ರ ರಾಜಧಾನಿ ದೆಹಲಿಯ ನಾಲ್ಕು ಶಾಲೆಗಳಿಗೆ ಮತ್ತೆ ಬಾಂಬ್​​ ಬೆದರಿಕೆ ಸಂದೇಶ; ಎಲ್ಲೆಡೆ ತೀವ್ರ ಕಟ್ಟೆಚ್ಚರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.