ETV Bharat / bharat

2 ದಿನ ಅಲ್ಲ ಇನ್ಮುಂದೆ ಕೆಲವೇ ಗಂಟೆಗಳಲ್ಲಿ ಚೆಕ್ ಪಟಾಪಟ್ ಕ್ಲಿಯರೆನ್ಸ್​​​: ಆರ್​ಬಿಐ ಮಹತ್ವದ ಘೋಷಣೆ - CLEARING TIME FOR CHEQUES - CLEARING TIME FOR CHEQUES

ಚೆಕ್ ಕ್ಲಿಯರಿಂಗ್ ಅವಧಿಯನ್ನು ಎರಡು ದಿನಗಳಿಂದ ಕೆಲವೇ ಗಂಟೆಗಳಿಗೆ ಇಳಿಸಲಾಗುವುದು ಎಂದು ಆರ್​ಬಿಐ ಹೇಳಿದೆ.

Clearing time for cheques to be cut from 2 days to a few hours: RBI chief
2 ದಿನ ಅಲ್ಲ ಇನ್ಮುಂದೆ ಕೆಲವೇ ಗಂಟೆಗಳಲ್ಲಿ ಚೆಕ್ ಪಟಾಪಟ್​​​ ಚೆಕ್​ ಕ್ಲಿಯರೆನ್ಸ್​​​: ಆರ್​ಬಿಐ ಮಹತ್ವದ ಘೋಷಣೆ (IANS)
author img

By ETV Bharat Karnataka Team

Published : Aug 8, 2024, 1:18 PM IST

ಮುಂಬೈ : ದೇಶದಲ್ಲಿ ಹಣಕಾಸು ವಹಿವಾಟುಗಳನ್ನು ಮತ್ತಷ್ಟು ಸುಗಮ ಹಾಗೂ ತ್ವರಿತಗೊಳಿಸುವ ಉದ್ದೇಶದಿಂದ ಇನ್ನು ಮುಂದೆ ಬ್ಯಾಂಕ್ ಚೆಕ್​ಗಳನ್ನು ಕೆಲವೇ ಗಂಟೆಗಳಲ್ಲಿ ಕ್ಲಿಯರಿಂಗ್ ಮಾಡುವ ವ್ಯವಸ್ಥೆ ಜಾರಿಗೆ ತರುವುದಾಗಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಹೇಳಿದ್ದಾರೆ.

ಪ್ರಸ್ತುತ, ಚೆಕ್ ಟ್ರಂಕೇಶನ್ ಸಿಸ್ಟಮ್ (ಸಿಟಿಎಸ್) ಮೂಲಕ ಬ್ಯಾಚ್ ಪ್ರೊಸೆಸಿಂಗ್ ಮೋಡ್​ನಲ್ಲಿ ಚೆಕ್​ಗಳನ್ನು ಕ್ಲಿಯರಿಂಗ್ ಮಾಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಚೆಕ್ ಕ್ಲಿಯರಿಂಗ್​ಗೆ ಎರಡು ಕೆಲಸದ ದಿನ ಬೇಕಾಗುತ್ತದೆ. ಹೀಗಾಗಿ ಇನ್ನು ಮುಂದೆ ಸಿಟಿಎಸ್​ನಲ್ಲಿ 'ಆನ್-ರಿಯಲೈಸೇಶನ್-ಸೆಟ್ಲಮೆಂಟ್​' ವ್ಯವಸ್ಥೆಯನ್ನು ಅಳವಡಿಸಿ ನಿರಂತರವಾಗಿ ಚೆಕ್ ಕ್ಲಿಯರಿಂಗ್ ಅನ್ನು ಪರಿಚಯಿಸುವ ಮೂಲಕ ಕ್ಲಿಯರಿಂಗ್ ಸಮಯವನ್ನು ಮಾಡಲು ಪ್ರಸ್ತಾಪಿಸಲಾಗಿದೆ ಎಂದು ದಾಸ್ ವಿವರಿಸಿದರು.

"ಅಂದರೆ ಇನ್ನು ಮುಂದೆ ಚೆಕ್​ಗಳನ್ನು ಬ್ಯಾಂಕಿಗೆ ಹಾಕಿದ ಕೆಲವೇ ಗಂಟೆಗಳಲ್ಲಿ ಅವು ಕ್ಲಿಯರಿಂಗ್ ಆಗಲಿವೆ. ಇದು ಚೆಕ್ ಪಾವತಿಯನ್ನು ವೇಗಗೊಳಿಸುತ್ತದೆ ಮತ್ತು ಪಾವತಿದಾರ ಮತ್ತು ಪಾವತಿ ಪಡೆಯುವವ ಇಬ್ಬರಿಗೂ ಪ್ರಯೋಜನವನ್ನು ನೀಡುತ್ತದೆ" ಎಂದು ಆರ್​ಬಿಐ ಗವರ್ನರ್​ ಹೇಳಿದ್ದಾರೆ.

ಹೊಸ ಚೆಕ್ ಕ್ಲಿಯರಿಂಗ್​ ವ್ಯವಸ್ಥೆಯು ಪ್ರಸ್ತುತ ಬ್ಯಾಂಕಿನಿಂದ, ಪಾವತಿಸುವ ಬ್ಯಾಂಕ್ ಶಾಖೆಗೆ ಡ್ರಾಯರ್ ನೀಡಿದ ಭೌತಿಕ ಚೆಕ್ ನ ವರ್ಗಾವಣೆಯನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಭೌತಿಕ ಚೆಕ್ ಕಳುಹಿಸುವ ಬದಲು, ಚೆಕ್​ನ ಎಲೆಕ್ಟ್ರಾನಿಕ್ ಚಿತ್ರವನ್ನು ಕ್ಲಿಯರಿಂಗ್ ಹೌಸ್ ಮೂಲಕ ಪಾವತಿಸುವ ಶಾಖೆಗೆ ರವಾನಿಸಲಾಗುತ್ತದೆ. ಇದು ಎಂಐಸಿಆರ್ ಬ್ಯಾಂಡ್, ಪ್ರಸ್ತುತಿಯ ದಿನಾಂಕ ಮತ್ತು ಪ್ರಸ್ತುತ ಬ್ಯಾಂಕಿನಂತಹ ಸಂಬಂಧಿತ ಮಾಹಿತಿಯನ್ನು ಒಳಗೊಂಡಿರುತ್ತದೆ.

ಭೌತಿಕ ಚಲನೆಯನ್ನು ಒಳಗೊಂಡಿರುವ ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಸಿಟಿಎಸ್ ಗ್ರಾಹಕರಿಗೆ ತ್ವರಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಹಣ ಪಡೆಯಲು ಅನುವು ಮಾಡಿಕೊಡುತ್ತದೆ. ಗ್ರಿಡ್ ಆಧಾರಿತ ಸಿಟಿಎಸ್ ಕ್ಲಿಯರಿಂಗ್ ಅಡಿಯಲ್ಲಿ, ಗ್ರಿಡ್ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್ ಶಾಖೆಗಳಲ್ಲಿ ಪಡೆದ ಎಲ್ಲಾ ಚೆಕ್ ಗಳನ್ನು ಸ್ಥಳೀಯ ಚೆಕ್ ಗಳಾಗಿ ಪರಿಗಣಿಸಲಾಗುತ್ತದೆ ಮತ್ತು ಕ್ಲಿಯರಿಂಗ್ ಮಾಡಲಾಗುತ್ತದೆ. ಚೆಕ್ ಸಂಗ್ರಹಿಸುವ ಬ್ಯಾಂಕ್ ಮತ್ತು ಪಾವತಿಸುವ ಬ್ಯಾಂಕ್ ಒಂದೇ ಸಿಟಿಎಸ್ ಗ್ರಿಡ್ ವ್ಯಾಪ್ತಿಯಲ್ಲಿದ್ದರೆ ಯಾವುದೇ ಹೊರಗಿನ ಚೆಕ್ ಸಂಗ್ರಹ ಶುಲ್ಕವನ್ನು ವಿಧಿಸಲಾಗುವುದಿಲ್ಲ.

ಈ ಹೊಸ ವ್ಯವಸ್ಥೆಯೊಂದಿಗೆ, ಖಾತೆದಾರರು ಚೆಕ್ ಆಧಾರಿತ ವಹಿವಾಟುಗಳನ್ನು ತ್ವರಿತವಾಗಿ ಮಾಡಬಹುದು. ಈ ಬದಲಾವಣೆಯು ಹಣವನ್ನು ಹೆಚ್ಚು ತ್ವರಿತವಾಗಿ ಜಮಾ ಮಾಡಲು ಅನುವು ಮಾಡಿಕೊಡುತ್ತದೆ. ಇದು ತುರ್ತು ಪಾವತಿಗಳಿಗೆ ಪ್ರಯೋಜನಕಾರಿಯಾಗಿದ್ದು, ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಸುಲಭ ನಗದೀಕರಣ ಮತ್ತು ಹೆಚ್ಚು ಪರಿಣಾಮಕಾರಿ ಬ್ಯಾಂಕಿಂಗ್ ಅನುಭವವನ್ನು ನೀಡುತ್ತದೆ.

ಇದನ್ನೂ ಓದಿ : ಕ್ಯಾಶ್​ ಆನ್ ಡೆಲಿವರಿಗೆ ಚಿಲ್ಲರೆ ಸಮಸ್ಯೆಯೇ? ಜೊಮ್ಯಾಟೊ ತಂದಿದೆ ಹೊಸ ಪರಿಹಾರ! - Zomato Money

ETV Bharat Logo

Copyright © 2024 Ushodaya Enterprises Pvt. Ltd., All Rights Reserved.