ETV Bharat / bharat

ಬಡ ಬುಡಕಟ್ಟು ಕಾರ್ಮಿಕನಿಂದ ಕುಗ್ರಾಮದಲ್ಲಿ ನಿರ್ಮಾಣವಾಯಿತು ಹೈಟೆಕ್ ರೆಕಾರ್ಡಿಂಗ್​​ ಸ್ಟುಡಿಯೋ: ಹೇಗಿದೆ ಗೊತ್ತಾ? - LABORER BUILT A RECORDING STUDIO

ಕಂಗ್ಸಿ ಗ್ರಾಮದ ಬುಡಕಟ್ಟು ಯುವಕ ದೀಪಕ್​ ಚರ್ಪೊಟ್ ಈ ಸ್ಟುಡಿಯೋವನ್ನು ನಿರ್ಮಾಣ ಮಾಡಿದ್ದಾನೆ. ಜಾನಪದ ಕಲಾವಿದನಾಗಿರುವ ಈತ ಇದನ್ನು ಕಟ್ಟಲು ಕಾರ್ಮಿಕನಾಗಿ ಕೆಲಸ ಮಾಡುತ್ತಿರುವುದು ವಿಶೇಷ.

ratlam-tribal-youth-deepak-charpota-built-tambura-studio-in-kangsi-village
ದೀಪಕ್​ ಚರ್ಪೊಟ (ಈಟಿವಿ ಭಾರತ್​)
author img

By ETV Bharat Karnataka Team

Published : Nov 26, 2024, 3:45 PM IST

ರತ್ಲಾಂ, ಮಧ್ಯಪ್ರದೇಶ: ಈ ಹಿಂದೆ ರೆಕಾರ್ಡಿಂಗ್​ ಸ್ಟುಡಿಯೋ ಅಂದರೆ ಮಹಾನಗರಿ ಮುಂಬೈ ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಕಂಡು ಬರುತ್ತಿದ್ದವು. ಆದರೆ, ಇದೀಗ ಮಧ್ಯಪ್ರದೇಶದ ಬುಡಕಟ್ಟು ಪ್ರದೇಶದಂತಹ ಅದು ಕುಗ್ರಾಮದಲ್ಲಿ ಕಾಣಸಿಗುತ್ತಿದೆ. ಈ ರತ್ಲಾಂನಲ್ಲಿ ಕೂಡ ಈ ರೀತಿಯ ಒಂದು ಸ್ಟುಡಿಯೋ ಇದೆ. ಗುಡುಸಿಲಿನ ರೀತಿ ನಿರ್ಮಾಣವಾಗಿರುವ ಈ ಸ್ಟುಡಿಯೋದಲ್ಲಿ ಎಲ್ಲ ರೀತಿಯ ಸಾಧನಗಳನ್ನೂ ನೀವು ಕಾಣಬಹುದು. ತಂಬೂರ್​​​ ಸ್ಟುಡಿಯೋ ಎಂದೇ ಇದು ಹೆಸರಾಗಿದ್ದು, ಮಧ್ಯಪ್ರದೇಶದ ಮತ್ತು ರಾಜಸ್ಥಾನದ ಕಲಾವಿದರು ಇಲ್ಲಿಗೆ ರೆಕಾರ್ಡಿಂಗ್​​ಗಾಗಿ ಆಗಮಿಸುತ್ತಾರೆ.

ಇಲ್ಲಿನ ಕಂಗ್ಸಿ ಗ್ರಾಮದ ಬುಡಕಟ್ಟು ಯುವಕ ದೀಪಕ್​ ಚರ್ಪೊಟ್​ ಈ ಸ್ಟುಡಿಯೋವನ್ನು ನಿರ್ಮಾಣ ಮಾಡಿದ್ದಾನೆ. ಜಾನಪದ ಕಲಾವಿದನಾಗಿರುವ ಈತ ಇದನ್ನು ಕಟ್ಟಲು ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂಬುದು ಗಮನಾರ್ಹ.

6 ವರ್ಷದಲ್ಲಿ ನಿರ್ಮಾಣವಾದ ಸ್ಟುಡಿಯೋ: ಬುಡಕಟ್ಟು ಕುಟುಂಬದ ದೀಪಕ್​ ಈ ತಂಬೂರ್​​ ಸ್ಟುಡಿಯೋ ನಿರ್ಮಾಣ ಮಾಡಲು 6 ವರ್ಷ ಕಠಿಣ ಶ್ರಮ ವಹಿಸಿದ್ದಾನೆ. ತಾವು ಸಂಪಾದಿಸಿದ ಹಣವನ್ನು ಇಲ್ಲಿನ ಸಾಧನಗಳ ಖರೀದಿಗೆ ವ್ಯಯ ಮಾಡಿದ್ದಾರೆ. ಅವರ ಈ ಕಠಿಣ ಪರಿಶ್ರಮದಿಂದಾಗಿ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸೇರಿದಂತೆ ಮಾಳ್ವ- ನಿಮರ್​ ಈ ಸ್ಟುಡಿಯೋ ಬಲು ಖ್ಯಾತಿ ಪಡೆದಿದೆ. ಇಲ್ಲಿನ ಸುತ್ತಮುತ್ತಲಿನ ಜಾನಪದ ಕಲಾವಿದರು ಹಾಡು ಮತ್ತು ಆಲ್ಬಾಂ ರೆಕಾರ್ಡ್​​ ಮಾಡಲು ಇಲ್ಲಿಗೆ ಆಗಮಿಸುತ್ತಾರೆ. ಇದರಿಂದಾಗಿ ದೀಪಕ್​ ಉತ್ತಮ ಗಳಿಕೆಯನ್ನೂ ಮಾಡುತ್ತಿದ್ದಾರೆ.

ತಂಬೂರ್​​ ಸ್ಟುಡಿಯೋ ಹುಟ್ಟಿದ ಕಥೆಯೇ ರೋಚಕ: ಅನೇಕ ಜನರು ಈ ಕುಗ್ರಾಮದಲ್ಲಿ ನಿರ್ಮಾಣವಾಗಿರುವ ಈ ಅತ್ಯಾಧುನಿಕ ಸ್ಟುಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅನೇಕ ಬುಡಕಟ್ಟು ಕಲಾವಿದರು ಈ ಸ್ಟುಡಿಯೋದಲ್ಲಿ ಹಾಡುಗಳನ್ನು ಮುದ್ರಿಸಿಕೊಂಡು ಹೋಗುತ್ತಿದ್ದಾರೆ.

ಬಡ ಕುಟುಂಬದಿಂದ ಬಂದ ದೀಪಕ್​ ಅವರಿಗೆ ಸ್ಟುಡಿಯೋ ನಿರ್ಮಾಣ ಕಾರ್ಯ ಸುಲಭದ ಕೆಲಸವಾಗಿರಲಿಲ್ಲ. ಜಾನಪದ ಕಲಾವಿದರಾದ ಕಾರಣ ದೀಪಕ್​ ಇಂದೂರ್​ಗೆ ತೆರಳಿ ಅಲ್ಲಿ ತಮ್ಮ ಜಾನಪದ ಹಾಡನ್ನು ರೆಕಾರ್ಡ್​ ಮಾಡುತಿದ್ದರು. ಆದರೆ ಅಲ್ಲಿನ ದರ ಕೇಳಿ ಸುಸ್ತಾಗುತ್ತಿದ್ದರು. ಇದಾದ ಬಳಿಕ, ತಮ್ಮ ಮನೆಯಲ್ಲಿಯೇ ಸ್ಟುಡಿಯೋ ನಿರ್ಮಾಣ ಮಾಡಲು ನಿರ್ಧರಿಸಿದರು. ಆದರೆ, ಬಜೆಟ್​ ಸಾಲಲಿಲ್ಲ. ಇದಕ್ಕಾಗಿ ಕಾರ್ಮಿಕರಾಗಿ ಹಗಲಿರುಳು ದುಡಿದು ಹಣ ಕೂಡಿಸಿದರು. ಈ ಕೂಡಿಟ್ಟ ಹಣದಲ್ಲಿ ಒಂದೊಂದೇ ಸಂಗೀತ ಸಾಧನ ಕೊಳ್ಳಲು ಮುಂದಾದರು. ಭಜನೆಗಳನ್ನು ಹಾಡುತ್ತಿದ್ದ ದೀಪಕ್​ ಭಜನಾ ಕಾರ್ಯಕ್ರಮದಿಂದ ಬಂದ ಹಣವನ್ನು ಸ್ಟುಡಿಯೋ ನಿರ್ಮಾಣಕ್ಕೆ ಹಾಕಿದರು. ಪರಿಣಾಮವಾಗಿ ಆರು ವರ್ಷದಲ್ಲಿ ಸಂಪೂರ್ಣ ಸ್ಟುಡಿಯೋ ನಿರ್ಮಾಣವಾಯಿತು.

ಗಳಿಕೆಯತ್ತ ಸ್ಟುಡಿಯೋ: ಇದೀಗ ದೀಪಕ್​ ಅವರ ಅವಿರಹಿತ ಶ್ರಮಕ್ಕೆ ಫಲ ಸಿಕ್ಕಿದೆ. ಅಲ್ಲದೇ ಅವರ ಕೆಲಸವನ್ನು ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಪ್ರಹ್ಲಾ ತಿಪನಿಯಾ ಕೂಡ ಮೆಚ್ಚಿದ್ದಾರೆ. ಇದೀಗ ತಮ್ಮ ಸ್ಟುಡಿಯೋದಲ್ಲೇ ಅನೇಕ ಜಾನಪದ ಕಲಾವಿದರ ಹಾಡು ಮುದ್ರಿಸಲಾಗುತ್ತಿದೆ. ಸ್ಥಳೀಯ ಪ್ರತಿಭೆ ಪ್ರೋತ್ಸಾಹಿಸುವ ಉದ್ದೇಶದ ದೀಪಕ್​ ಅನೇಕ ಉಚಿತ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಅನೇಕರು ರೆಕಾರ್ಡ್​ ಆದ ಕೂಡಲೇ ಕೇಳದೇ ಹಣ ನೀಡುತ್ತಿದ್ದಾರೆ. ಇದರಿಂದ ನಿಧಾನವಾಗಿ ದೀಪಕ್​ ಆದಾಯ ಕೂಡ ಹೆಚ್ಚುತ್ತಿದೆ. ಯೂಟ್ಯೂಬ್​ನಲ್ಲಿ ಕೂಡ ಚಾನಲ್​ ಹೊಂದಿರುವ ದೀಪಕ್​ ಅದರಿಂದಲೂ ಹಣಗಳಿಸುತ್ತಿದ್ದಾರೆ.

ಇದನ್ನೂ ಓದಿ: ಹಣದ ಮಾಲೆಯನ್ನೇ ಕದ್ದೊಯ್ದ ಕಳ್ಳ: ಚಲಿಸುತ್ತಿದ್ದ ವಾಹನದೊಳಗೆ ನುಗ್ಗಿ ಹಿಡಿದ ಮದುಮಗ- ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.