ಕಾಕಿನಾಡ, ಆಂಧ್ರಪ್ರದೇಶ: ಹಾವು ಕಂಡರೆ ಓಡಿಹೋಗುವುದು ಕಾಮನ್. ಆದರೆ ಈ ಮಹಿಳೆ ತನ್ನ ಕೈಯಲ್ಲಿ ಧೈರ್ಯವಾಗಿ ಈ ಹಾವನ್ನು ಹಿಡಿದಿದ್ದಾರೆ ಎಂದು ಆಶ್ಚರ್ಯಪಡುತ್ತಿರುವಿರಾ? ನೀವು ಹಾಗೆ ಭಾವಿಸಿದರೆ, ಅದು ತಪ್ಪು. ಈ ಮಹಿಳೆ ಕೈಯಲ್ಲಿ ಹಿಡಿದಿರುವುದು ಹಾವನ್ನು ಅಲ್ಲ. ಒಂದು ರೀತಿಯ ಮೀನನ್ನು.
ಮೀನು ಯಾವ ರೀತಿಯ ಹಾವು ಎಂದು ನೀವು ಯೋಚಿಸುತ್ತೀದ್ದೀರಿ ಅಲ್ವವೇ?. ಹೌದು ಇದು ನಿಜವಾಗಲೂ ಮೀನು. ಸಮುದ್ರದಲ್ಲಿ ಸಿಗುವ ಈಲ್ ಜಾತಿ ಮೀನುಗಳು ಸಾಮಾನ್ಯವಾಗಿ 3 ರಿಂದ 4 ಅಡಿಗಳವರೆಗೆ ಬೆಳೆಯುತ್ತವೆ. ಇವುಗಳನ್ನು ಮೀನುಗಾರರು ಕಪ್ಪು ಗೊಂಬೆಗಳು ಎಂದೇ ಕರೆಯುತ್ತಾರೆ.
ಶುಕ್ರವಾರ (ಅಕ್ಟೋಬರ್ 25) ಕಾಕಿನಾಡ ಸಮುದ್ರ ತೀರದಲ್ಲಿ ಬೇಟೆಗೆ ತೆರಳಿದ್ದ ಮೀನುಗಾರರಿಗೆ 8 ಅಡಿ ಉದ್ದದ ಕಪ್ಪು ಗೊಂಬೆ ಸಿಕ್ಕಿದೆ. ಈ ಈಲ್ ಜಾತಿಗೆ ಸೇರಿದ ಮೀನುಗಳು ತಿನ್ನಲು ತುಂಬಾ ರುಚಿಯಾಗಿರುತ್ತವೆ. ಆದರೆ, ಹಾವಿನಂತಿರುವುದರಿಂದ ಹಲವರು ಖರೀದಿಗೆ ಆಸಕ್ತಿ ತೋರುತ್ತಿಲ್ಲ ಎಂದು ಮೀನುಗಾರರು ಹೇಳಿದ್ದಾರೆ.
ನೋಡಲು ಹಾವಿನಂತೆ ಕಾಣುವ ಹಿನ್ನೆಲೆಯಲ್ಲಿ ಗ್ರಾಹಕರು ಇವುಗಳನ್ನು ಖರೀದಿಸಲು ಮುಂದೆ ಬರಲ್ಲ. ಅದಕ್ಕಾಗಿಯೇ ಅವುಗಳನ್ನು ಒಣಗಿಸಿ ರಫ್ತು ಮಾಡಲಾಗುತ್ತದೆ. ಕುಂಭಾಭಿಷೇಕದ ಮೀನು ಕಟ್ಟೆಯಲ್ಲಿ 50 ಕೆ.ಜಿ. ಯ ಈ ಮೀನುಗಳು 5000ಕ್ಕೆ ಮಾರಾಟವಾಗಿದೆ.
ಇದನ್ನು ಓದಿ: ನಂಬಿ ಬಂದವರಿಗೆ ಸುಖ, ಸಮೃದ್ಧಿ ಕರುಣಿಸುವ ಹಾಸನಾಂಬೆ; ಇಲ್ಲಿದೆ ದೇವಿಯ ಇತಿಹಾಸ!