ಹೈದರಾಬಾದ್: ಬೇಸಿಗೆ ರಜೆಯ ಮೋಜು, ಉತ್ಸಾಹ, ಉಲ್ಲಾಸದ ದಿನಗಳನ್ನು ಒದಗಿಸಲು ರಾಮೋಜಿ ಫಿಲ್ಮ್ ಸಿಟಿ ಸಿದ್ಧವಾಗಿದೆ. ಬೇಸಿಗೆ ಬಂತೆಂದರೆ ಹೊಸ ಸಾಹಸ- ಅನ್ವೇಷಣೆಗಳ ಜೊತೆ ಕುಟುಂಬದೊಂದಿಗೆ ರಜೆ ಕಳೆಯಲು ಸಜ್ಜಾಗುವ ಕುಟುಂಬಗಳನ್ನು ಸ್ವಾಗತಿಸಲು ರಾಮೋಜಿ ಫಿಲ್ಮ್ ಸಿಟಿ ಸಜ್ಜಾಗಿದೆ. ಅದ್ಭುತ ಮನೋರಂಜನೆ ಜೊತೆಗೆ ಮಸ್ತಿಗೆ ಸೂಕ್ತ ತಾಣ ಇದಾಗಿದೆ.
ಸೂರ್ಯೋದಯದಿಂದ ಸುರ್ಯಾಸ್ತದವರೆಗೆ ಕಲರವದ ಸ್ಫೂರ್ತಿಯಿಂದ ಕೂಡಿರುವ ರಾಮೋಜಿ ಫಿಲ್ಮ್ ಸಿಟಿ ಎಲ್ಲಾ ವಯೋಮಾನದವರನ್ನು ಆಕರ್ಷಿಸುತ್ತಿದೆ. ಈ ಬೇಸಿಗೆ ರಜೆಯ ಹಬ್ಬದಲ್ಲಿ ಇದೀಗ ಹಾಲಿಡೇ ಕಾರ್ನಿವಲ್ ಆರಂಭವಾಗಿದೆ.
ಫಿಲ್ಮ್ ಸಿಟಿಯಲ್ಲಿರುವ ಮೋಷನ್ ಕ್ಯಾಪ್ಚರ್ ಮತ್ತು ವರ್ಚುವಲ್ ಶೂಟ್ ಎಲ್ಲರನ್ನು ಆಕರ್ಷಿಸಲಿವೆ. ಜೊತೆಗೆ ಆಧುನಿಕ ತಂತ್ರಜ್ಞಾನದ ಅದ್ಭುತಗಳನ್ನು ಅನ್ವೇಷಿಸಲು ನಿಮಗಿದು ಸೂಕ್ತ ಅವಕಾಶವಾಗಿದೆ. ಜೊತೆಗೆ ಬೇಸಿಗೆಯಲ್ಲಿ ಮಳೆಯ ಅನುಭವ ನೀಡಲು ರೈನ್ ಡ್ಯಾನ್ಸ್ ಇದ್ದು, ಇದು ನಿಮಗೆ ಉಲ್ಲಾಸದ ಅನುಭವ ನೀಡಲಿದೆ.
ಇಷ್ಟಕ್ಕೆ ಈ ಬೇಸಿಗೆ ಹಬ್ಬ ಮುಗಿಯುವುದಿಲ್ಲ. ಇದರ ಜೊತೆಗೆ ಯುರೇಕಾ ಲೈವ್ ಪ್ರದರ್ಶನಗಳಲ್ಲಿ ಪ್ರತಿಭಾವಂತರ ಕಲೆ ಅನಾವರಣವಾಗಲಿದೆ. ಜೊತೆಗೆ ಉದ್ಯಾನದ ಸೌಂದರ್ಯದೊಂದಿಗೆ ಅದ್ಭುತ ಶಿಲ್ಪಕಲೆಗಳಿಗೂ ಸಾಕ್ಷಿಯಾಗಲಿದೆ. ಇಲ್ಲಿನ ಚಿಕ್ಕ ಅನುಭವವು ನಿಮಗೆ ದೊಡ್ಡ ಅನುಭೂತಿ ನೀಡುವುದು ಸುಳ್ಳಲ್ಲ. ಇದಕ್ಕಾಗಿ ರಾಮೋಜಿ ಫಿಲ್ಮ್ ಸಿಟಿ ವಿವಿಧ ದರದಲ್ಲಿ ವಿಶೇಷ ಪ್ಯಾಕೇಜ್ಗಳನ್ನು ಕೂಡ ನೀಡಿದೆ.
ದಿನವೀಡಿ ಈ ಸಂಭ್ರಮ ಅನುಭವಿಸಬೇಕು. ಹೊಸ ಅನ್ವೇಷಣೆ ಮಾಡಲು ಫುಲ್ ಡೇ ಪ್ಯಾಕೇಜ್ ಲಭ್ಯವಿದೆ. ಬೆಳಗ್ಗೆ 9 ರಿಂದ ರಾತ್ರಿ 9ರ ವರೆಗೆ ಎಲ್ಲಾ ಆಕರ್ಷಣೆಗಳ ಸವಿ ಸವಿಯುವ ಜೊತೆಗೆ ನಾನ್ ಎಸಿ ಬಸ್ನಲ್ಲಿ ಸ್ಟುಡಿಯೋ ಟೂರ್ ಕೂಡ ಮಾಡಬಹುದು. ಇನ್ನು, ಈ ಪ್ಯಾಕೇಜ್ ಅನ್ನು ಕೊಂಚ ಲಕ್ಸುರಿಗೆ ಬಯಸುವುದಾದರೆ ಪ್ರೀಮಿಯಂ ಪ್ಯಾಕೇಜ್ ಮೊರೆ ಹೋಗಬಹುದು. ಇದರಲ್ಲಿ ಎಸಿ ಬಸ್ ಸೌಲಭ್ಯದ ಜೊತೆಗೆ ವಿಶೇಷ ಕಾರ್ಯಕ್ರಮ ಮತ್ತು ಬಫೆಟ್ ಲಂಚ್ ಸವಿಯಬಹುದು.
ಇನ್ನು ಕೊಂಚ ತಡವಾಯಿತು ಎನ್ನುವವರು ಮಧ್ಯಾಹ್ನ 2 ರಿಂದ ರಾತ್ರಿ 9 ಗಂಟೆವರೆಗಿನ ಪ್ಯಾಕೇಜ್ ಪಡೆಯಬಹುದು. ಇದರಲ್ಲೂ ಸ್ಟುಡಿಯೋ ಟೂರ್ ಜೊತೆಗೆ ಸೀಮಿತ ಕೋಂಬೊ ಡಿನ್ನರ್ ಸೌಲಭ್ಯವಿದೆ. ಇದರಲ್ಲೂ ಪ್ರೀಮಿಯಂ ಪ್ಯಾಕೇಜ್ ಲಭ್ಯವಿದ್ದು, ಬಫೆಟ್ ಡಿನ್ನರ್ ಮತ್ತು ವಿಶೇಷ ಕಾರ್ಯಕ್ರಮದ ಪ್ರವೇಶ ಪಡೆಯಬಹುದು.
ಮಕ್ಕಳಿಗಾಗಿ ವಿಶೇಷ ಸಮ್ಮರ್ ಪ್ಯಾಕೇಜ್ ಕೂಡ ಲಭ್ಯವಿದೆ. ಈ ಎಲ್ಲಾ ಟಿಕೆಟ್ಗಳನ್ನು ಪಡೆಯಲು ನೀವು www.ramojifilmcity.com ವೆಬ್ಸೈಟ್ಗೆ ಭೇಟಿ ನೀಡಬಹುದು ಅಥವಾ 76598 76598 ಕರೆ ಮಾಡಬಹುದು.
ಇದನ್ನೂ ಓದಿ: ತೆಲಂಗಾಣ, ಒಡಿಶಾ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳದಲ್ಲಿ 5 ದಿನ ತೀವ್ರ ಬಿಸಿಗಾಳಿ