ನವದೆಹಲಿ: ಕಳೆದೆರಡು ತಿಂಗಳಿನಿಂದ ಬಿಸಿಲ ಪ್ರಕೋಪಕ್ಕೆ ನಲುಗಿದ ರಾಷ್ಟ್ರ ರಾಜಧಾನಿ ದೆಹಲಿಯ ಜನ ಇದೀಗ ಮಳೆಯ ರುದ್ರನರ್ತನದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಗುರುವಾರ ಸುರಿದ ಭಾರೀ ಮಳೆಯಿಂದಾಗಿ ದೆಹಲಿ-ಎನ್ಸಿಆರ್ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡವು. ವಾಹನ ಸವಾರರು ಉಸಿರುಗಟ್ಟಿಸುವ ಟ್ರಾಫಿಕ್ ಸಮಸ್ಯೆ ಅನುಭವಿಸಿದರು.
#WATCH | Roads flooded after heavy rain lashed parts of Delhi overnight.
— ANI (@ANI) June 28, 2024
(Visuals from ITO) pic.twitter.com/pjUsaCHWsh
ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಗುರುವಾರ ಬೆಳಗ್ಗೆ 8.30ರಿಂದ ಶುಕ್ರವಾರ ಬೆಳಗ್ಗೆ 8.30ರವರೆಗೆ 228 ಮಿ.ಮೀ ಮಳೆಯಾಗಿದೆ. 1936ರಲ್ಲಿ ಅಂದರೆ, 88 ವರ್ಷದ ಹಿಂದೆ ದೆಹಲಿಯಲ್ಲಿ 24 ಗಂಟೆಗಳ ಅವಧಿಯಲ್ಲಿ 235.5 ಮಿ.ಮೀ ಮಳೆ ದಾಖಲಾಗಿತ್ತು.
#WATCH | Delhi: Roads inundated as heavy rain continues in parts of National Capital
— ANI (@ANI) June 28, 2024
(Visuals from Govindpuri) pic.twitter.com/9idnGwx0nb
ಸಾಮಾನ್ಯವಾಗಿ, ದೆಹಲಿ ಜೂನ್ನಲ್ಲಿ ದೆಹಲಿ 80.6 ಮಿ.ಮೀ ಮಳೆ ಕಾಣುತ್ತದೆ. ಆದರೆ, ಹವಾಮಾನ ಬದಲಾವಣೆ ವೈಪರೀತ್ಯದಿಂದಾಗಿ ಒಂದೇ ದಿನದಲ್ಲಿ ದಾಖಲೆಯ ಮಳೆ ಸುರಿದಿದ್ದು, ಜನತೆ ನಲುಗಿದ್ದಾರೆ. ಹಲವು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರ ದೈನಂದಿನ ಜೀವನಕ್ಕೆ ತೊಂದರೆಯಾಗಿದೆ.
#WATCH | Waterlogging witnessed at several parts of Delhi following heavy rain
— ANI (@ANI) June 28, 2024
(Visuals from Moti Bagh) pic.twitter.com/XLV1xs7YyW
ಕಳೆದೆರಡು ತಿಂಗಳಿನಿಂದ ವಿಪರೀತ ಬಿಸಿಲಿಗೆ ಗುರಿಯಾಗಿದ್ದ ನಗರದಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಸಮೀಪಿಸಿತ್ತು. ಶುಕ್ರವಾರ ಸಾಮಾನ್ಯ ತಾಪಮಾನಕ್ಕಿಂತ 3.2 ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗಿದ್ದು, ಇಂದು 24.7 ಡಿಗ್ರಿ ಸೆಲ್ಸಿಯಸ್ ಇದೆ.
ಜಡಿ ಮಳೆಯಿಂದ ಅನೇಕ ಕಡೆ ವಿದ್ಯುತ್ ವ್ಯತ್ಯಯವಾಗಿದೆ. ಚರಂಡಿ ನೀರು ಮಳೆ ನೀರಿನೊಂದಿಗೆ ಸೇರಿ ರಸ್ತೆಯಲ್ಲಿ ಮೊಣಕಾಲುಮಟ್ಟ ನಿಂತಿದೆ. ಅನೇಕ ಕಡೆಗಳಲ್ಲಿ ಮನೆಗಳಿ ನೀರು ನುಗ್ಗಿದರೆ, ಅಂಡರ್ಪಾಸ್ ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿವೆ.
#WATCH | Waterlogging witnessed at several parts of Delhi following heavy rain
— ANI (@ANI) June 28, 2024
(Visuals from Dhaula Kuan) pic.twitter.com/XkkKIec3YJ
ಮುಂದಿನ ಏಳು ದಿನ ದೆಹಲಿಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಭಾರೀ ಗಾಳಿಯೊಂದಿಗೆ ಸಾಧಾರಣದಿಂದ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. (ಐಎಎನ್ಎಸ್/ಎಎನ್ಐ)
ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ ಕುಸಿತ ಪ್ರಕರಣ: ಮೃತರ ಕುಟುಂಬಕ್ಕೆ ₹20 ಲಕ್ಷ, ಗಾಯಗೊಂಡವರಿಗೆ ₹3 ಲಕ್ಷ ಪರಿಹಾರ ಘೋಷಣೆ