ETV Bharat / bharat

ಜುಲೈ 14ರಂದು ಪುರಿ ಜಗನ್ನಾಥ 'ರತ್ನ ಭಂಡಾರ'ದ ಬೀಗ ತೆರೆಯುವ ಸಾಧ್ಯತೆ - JAGANNATH TEMPLE RATNA BHANDAR - JAGANNATH TEMPLE RATNA BHANDAR

ಜುಲೈ 14 ರಂದು ಜಗನ್ನಾಥ ದೇವಾಲಯದ ರತ್ನ ಭಂಡಾರದ ಬೀಗ ತೆರೆಯಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಕೋರಲಾಗುವುದು ಎಂದು ಉನ್ನತ ಮಟ್ಟದ ಸಮಿತಿ ಹೇಳಿದೆ.

ಪುರಿ ಜಗನ್ನಾಥ ದೇವಾಲಯ
ಪುರಿ ಜಗನ್ನಾಥ ದೇವಾಲಯ (IANS)
author img

By IANS

Published : Jul 9, 2024, 6:30 PM IST

ಭುವನೇಶ್ವರ : ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ಬೀಗ ತೆರೆಯುವ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ರಚಿಸಲಾದ ಉನ್ನತ ಮಟ್ಟದ ಸಮಿತಿಯು, ಜುಲೈ 14 ರಂದು ಖಜಾನೆಯ ಒಳ ಕೋಣೆಯ ಬೀಗವನ್ನು ಪುನಃ ತೆರೆಯಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಲು ಮಂಗಳವಾರ ನಿರ್ಧರಿಸಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಬಿಸ್ವನಾಥ್ ರಥ್, "ಈ ತಿಂಗಳ 14 ರಂದು ರತ್ನ ಭಂಡಾರದ ಒಳಾಂಗಣ ಕೊಠಡಿಯನ್ನು ಪುನಃ ತೆರೆಯಲು ರಾಜ್ಯ ಸರ್ಕಾರಕ್ಕೆ ಕೋರಲು ನಾವು (ಸಮಿತಿಯ ಸದಸ್ಯರು) ಸರ್ವಾನುಮತದಿಂದ ನಿರ್ಧರಿಸಿದ್ದೇವೆ. ಎಂಥದೇ ಸಂದರ್ಭ ಎದುರಾದರೂ ರತ್ನ ಭಂಡಾರದ ಬೀಗ ತೆರೆಯಲೇಬೇಕೆಂದು ಸಮಿತಿ ನಿರ್ಧಾರ ಕೈಗೊಂಡಿದೆ" ಎಂದು ಅವರು ಹೇಳಿದರು.

ರತ್ನ ಭಂಡಾರದಲ್ಲಿ ಸಂಗ್ರಹಿಸಿಡಲಾದ ಆಭರಣಗಳ ದಾಸ್ತಾನಿನ ಲೆಕ್ಕ ಪತ್ರ ತಯಾರಿಸಲು ಮತ್ತು ರತ್ನ ಭಂಡಾರವನ್ನು ದುರಸ್ತಿ ಮಾಡಲು ಅಗತ್ಯವಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಒಪಿ) ಬಗ್ಗೆ ವಿವರವಾದ ಚರ್ಚೆ ನಡೆಯಿತು ಎಂದು ರಥ್ ಹೇಳಿದರು.

"ಬೀಗ ತೆರೆಯುವ ಬಗ್ಗೆ ಸ್ವಲ್ಪ ಸಮಯದಲ್ಲಿಯೇ ಒಡಿಶಾ ಸರ್ಕಾರ ಮತ್ತು ನಿರ್ವಹಣಾ ಸಮಿತಿ ನಿರ್ಧರಿಸಬೇಕಿದೆ. ಬೀಗ ತೆರೆಯಲು ಸರ್ಕಾರ ನಮಗೆ ಅನುಮತಿ ನೀಡಲಿದೆ ಎಂದು ಭಾವಿಸಿದ್ದೇವೆ" ಎಂದು ನ್ಯಾಯಮೂರ್ತಿ ರಥ್ ಮಾಹಿತಿ ನೀಡಿದರು.

"ರತ್ನ ಭಂಡಾರದಲ್ಲಿನ ಆಭರಣಗಳ ದಾಸ್ತಾನಿನ ಲೆಕ್ಕ ಪತ್ರ ತಯಾರಿಸುವುದು ಸುದೀರ್ಘ ಪ್ರಕ್ರಿಯೆಯಾಗಿದೆ. ಅಲ್ಲಿನ ಆಭರಣಗಳನ್ನು ಸ್ಥಳಾಂತರಿಸಲು ದೇವಾಲಯದ ಆವರಣದಲ್ಲಿರುವ ಒಂದು ಕೋಣೆಯನ್ನು ಗುರುತಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಸಮಿತಿಗೆ ತಿಳಿಸಿದೆ" ಎಂದು ರಥ್ ಹೇಳಿದರು.

"ಆಭರಣಗಳ ಸ್ವರೂಪ, ಆಭರಣಗಳ ಗುಣಲಕ್ಷಣ (22 ಅಥವಾ 24 ಕ್ಯಾರೆಟ್), ರತ್ನಗಳ ಮಾದರಿಗಳ ಬಗ್ಗೆ ಪರಿಶೀಲನೆ ನಡೆಯಲಿದೆ. ಅವುಗಳಲ್ಲಿ ಹೆಚ್ಚಿನವು ನೂರಾರು ವರ್ಷಗಳಷ್ಟು ಹಳೆಯವು. ಇದಕ್ಕಾಗಿ ಸರ್ಕಾರವು ಆಭರಣ ತಯಾರಕರು ಮತ್ತು ಮಾಪನಶಾಸ್ತ್ರಜ್ಞರ ಸಮರ್ಥ ಮತ್ತು ಅನುಭವಿಕ ತಂಡವನ್ನು ರಚಿಸಬೇಕಿದೆ. ಇದರಲ್ಲಿ ಹಲವಾರು ಅಂಶಗಳು ಅಡಕವಾಗಿರುವುದರಿಂದ ರಾಜ್ಯ ಸರ್ಕಾರವು ನಮಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕಿದೆ. ತಂಡಗಳನ್ನು ರಚಿಸುವಾಗ ಅನುಭವಿಕರು ಮತ್ತು ರಹಸ್ಯಗಳನ್ನು ಕಾಪಾಡಿಕೊಳ್ಳುವಂಥ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಿದೆ" ಎಂದು ರಥ್ ತಿಳಿಸಿದರು.

ತನ್ನ ಬಳಿ ಇರುವ ರತ್ನ ಭಂಡಾರದ ಕೀಲಿಗಳನ್ನು ಜುಲೈ 14 ರಂದು ಉನ್ನತ ಮಟ್ಟದ ಸಮಿತಿಗೆ ನೀಡುವಂತೆ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಸೂಚನೆ ನೀಡಲಾಗಿದೆ. ಮಂಗಳವಾರವೇ ಕೀಲಿಗಳನ್ನು ಹಸ್ತಾಂತರಿಸುವಂತೆ ದೇವಾಲಯದ ಆಡಳಿತ ಮಂಡಳಿಗೆ ತಿಳಿಸಲಾಗಿತ್ತು. ಆದರೆ ರಥಯಾತ್ರೆಯ ಸಿದ್ಧತೆಗಳಿಂದಾಗಿ ಅದು ಸಾಧ್ಯವಾಗಿಲ್ಲ.

ಇದನ್ನೂ ಓದಿ : ಅಮರನಾಥ ಯಾತ್ರೆ: 10 ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಭಕ್ತರಿಂದ ಹಿಮಲಿಂಗದ ದರ್ಶನ - Amaranth Yatra

ETV Bharat Logo

Copyright © 2025 Ushodaya Enterprises Pvt. Ltd., All Rights Reserved.