ETV Bharat / bharat

ವಿಷಪೂರಿತ ಮದ್ಯ ಸೇವನೆ ಪ್ರಕರಣ: 21ಕ್ಕೇರಿದ ಸಾವಿನ ಸಂಖ್ಯೆ, ವರದಿ ಕೇಳಿದ ಚುನಾವಣಾ ಆಯೋಗ - Sangrur poisoned liquor case - SANGRUR POISONED LIQUOR CASE

Sangrur poisoned liquor case: ಕೆಲ ದಿನಗಳ ಹಿಂದೆ ಪಂಜಾಬ್​ನ ಸಂಗ್ರೂರಿನಲ್ಲಿ ಆರಂಭವಾದ ವಿಷ ಮದ್ಯದ ಸಾವಿನ ಸರಣಿ ಇನ್ನು ನಿಂತಿಲ್ಲ. ವಿಷಕಾರಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಈಗ 21ಕ್ಕೇರಿದೆ.

EC SEEKS REPORT  CHIEF SECRETARY AND DGP  PUNJAB POISONED LIQUOR CASE
ವಿಷಪೂರಿತ ಮದ್ಯ ಸೇವನೆ ಪ್ರಕರಣ
author img

By PTI

Published : Mar 23, 2024, 2:59 PM IST

ಚಂಡೀಗಢ, ಪಂಜಾಬ್​: ವಿಷಪೂರಿತ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಜಿಲ್ಲೆಯ ಗುಜ್ರಾನ್, ಉಪಾಲಿ, ದಾಂಡೋಲಿ ಗ್ರಾಮಗಳಲ್ಲಿ 11 ಜನರ ಸಾವಿನ ನಂತರ, ಮಾರ್ಚ್ 22 ರಂದು ಸುನಮ್‌ನಲ್ಲಿ 5 ಜನರು ಮತ್ತು ಇಂದು 5 ಜನರು ಸಾವನ್ನಪ್ಪಿದ್ದಾರೆ, ಅಂದರೆ ಒಟ್ಟು ಸಾವಿನ ಸಂಖ್ಯೆ 21ಕ್ಕೇರಿದೆ.

40 ಮಂದಿ ಬಾಧಿತ: ಸಂಗ್ರೂರ್ ಸಿವಿಲ್ ಸರ್ಜನ್ ಕಿರ್ಪಾಲ್ ಸಿಂಗ್ ಅವರ ಮಾಹಿತಿ ಪ್ರಕಾರ, ಆಸ್ಪತ್ರೆಯಲ್ಲಿ ಎಥೆನಾಲ್ ರಾಸಾಯನಿಕದಿಂದ ಬಳಲುತ್ತಿರುವ ರೋಗಿಗಳು ನಿರಂತರವಾಗಿ ಸಾಯುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು 40 ಮಂದಿ ವಿಷಪೂರಿತ ಮದ್ಯ ಸೇವಿಸಿ ವಿವಿಧ ಆಸ್ಪತ್ರೆಗಳಿಗೆ ತಲುಪಿದ್ದು, ಈ ಪೈಕಿ 10 ಮಂದಿ ಪಟಿಯಾಲದ ರಾಜೀಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 6 ಮಂದಿ ಸಂಗ್ರೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 21 ಜನರು ವಿಷಪೂರಿತ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ವರದಿ ಕೇಳಿದ ಚುನಾವಣಾ ಆಯೋಗ: ವಿಷಪೂರಿತ ಮದ್ಯ ಸೇವನೆಯ ದುರಂತದ ಕುರಿತು ಪಂಜಾಬ್ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಂದ ಶನಿವಾರದಂದು ಭಾರತೀಯ ಚುನಾವಣಾ ಆಯೋಗವು ತಕ್ಷಣದ ವರದಿ ಕೇಳಿದೆ. ಪಂಜಾಬ್ ಮುಖ್ಯ ಚುನಾವಣಾ ಅಧಿಕಾರಿಯು ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ತಕ್ಷಣದ ಪ್ರಾಥಮಿಕ ವರದಿ ಕಳುಹಿಸಲು ಮತ್ತು ಆಯೋಗಕ್ಕೆ ತಿಳಿಸಲು ಸೂಚಿಸಿದೆ.

ಇನ್ನಷ್ಟು ಬಂಧನ: ಪ್ರಕರಣ ದಾಖಲಿಸಿಕೊಂಡಿರುವ ಸಂಗ್ರೂರು ಪೊಲೀಸರು ಇದುವರೆಗೆ 4 ಮಂದಿಯನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಗುರ್ಲಾಲ್ ಸಿಂಗ್ ಮತ್ತು ಆತನ ಮೂವರು ಸಹಚರರು ಈಗಾಗಲೇ ಸಂಗ್ರೂರ್ ಪೊಲೀಸರ ವಶದಲ್ಲಿದ್ದಾರೆ. ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಸಂಗ್ರೂರ್ ಎಸ್‌ಎಸ್‌ಪಿ ಸರ್ತಾಜ್ ಸಿಂಗ್ ಚಾಹಲ್ ಹೇಳಿದ್ದಾರೆ. ಆರೋಪಿಗಳನ್ನು ಜಖೇಪಾಲ್ ನಿವಾಸಿ ಪ್ರದೀಪ್ ಸಿಂಗ್ ಅಲಿಯಾಸ್ ಬಬ್ಬಿ, ಸೋಮ, ಸಂಜು ಮತ್ತು ರೋಗ್ಲಾ ಗ್ರಾಮದ ಅರ್ಶ್‌ದೀಪ್ ಸಿಂಗ್ ಅಲಿಯಾಸ್ ಅರ್ಶ್ ಎಂದು ಗುರುತಿಸಲಾಗಿದೆ.

ಈ ಇಡೀ ಅವ್ಯವಹಾರದ ಹಿಂದಿನ ನಂಟನ್ನು ಬಹಿರಂಗಪಡಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ ಗುರಿಂದರ್ ಧಿಲ್ಲೋನ್ ಐಪಿಎಸ್ ನೇತೃತ್ವದಲ್ಲಿ ಡಿಐಜಿ ಪಟಿಯಾಲ ರೇಂಜ್ ಹರ್ಚರಣ್ ಭುಲ್ಲರ್ ಐಪಿಎಸ್, ಎಸ್ಎಸ್ಪಿ ಸಂಗ್ರೂರ್ ಸರ್ತಾಜ್ ಚಹಲ್, ಐಪಿಎಸ್ ಮತ್ತು ಹೆಚ್ಚುವರಿ ಕಮಿಷನರ್ (ಅಬಕಾರಿ) ನರೇಶ್ ದುಬೆ ಅವರನ್ನು ಒಳಗೊಂಡ ನಾಲ್ವರು ಸದಸ್ಯರ ಎಸ್ಐಟಿ ತನಿಖೆಯ ಮೇಲ್ವಿಚಾರಣೆ ನಡೆಸಲಿದೆ.

ಪೊಲೀಸರು ಈ ಹಿಂದೆ 200 ಲೀಟರ್ ಎಥೆನಾಲ್, 156 ಮದ್ಯದ ಬಾಟಲಿಗಳು, ಲೇಬಲ್ ಇರುವ ಶಂಕಿತ ನಕಲಿ ಮದ್ಯದ 130 ಬಾಟಲಿಗಳು, ಲೇಬಲ್ ಇಲ್ಲದ ನಕಲಿ ಮದ್ಯ ಹೊಂದಿರುವ 80 ಬಾಟಲಿಗಳು, 4,500 ಖಾಲಿ ಬಾಟಲಿಗಳು ಮತ್ತು ಬಾಟಲಿಂಗ್ ಯಂತ್ರ ಸೇರಿ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದರು. ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಪ್ರದೇಶದಲ್ಲಿ ನಕಲಿ ಮದ್ಯ ಮಾರಾಟ ಆರಂಭಿಸಿದ್ದ ಗ್ಯಾಂಗ್ ಅನ್ನು ಗುರುವಾರದವರೆಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಗ್ಯಾಂಗ್ ಮತದಾರರಿಗೆ ಆಮಿಷ ಒಡ್ಡುವ ಮೂಲಕ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ನು ಯಾರಿಗಾದರೂ ಆರೋಗ್ಯ ಹದಗೆಡುವ ಲಕ್ಷಣಗಳು ಕಂಡು ಬಂದಿವೆಯೇ ಎಂಬುದನ್ನು ತಿಳಿಯಲು ಸಂತ್ರಸ್ತ ಗ್ರಾಮಗಳಲ್ಲಿ ಸಮೀಕ್ಷೆಯನ್ನೂ ನಡೆಸಲಾಗುತ್ತಿದೆ.

ಈ ಹಿಂದೆಯೂ ಸಾವು: ಪಂಜಾಬ್‌ನಲ್ಲಿ ವಿಷ ಮಿಶ್ರಿತ ಮದ್ಯ ಸೇವಿಸಿ ಸಾವನ್ನಪ್ಪಿದ ಪ್ರಕರಣಗಳು ಹಲವು. ಇದರಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ತರ್ನ್ ತರಣ್ ದೊಡ್ಡ ಪ್ರಕರಣವಾಗಿತ್ತು. ಅಲ್ಲಿ ವಿಷಪೂರಿತ ಮದ್ಯ ಸೇವಿಸಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಅದರ ನಂತರ ಪಂಜಾಬ್‌ನ ರಾಜಕೀಯದಲ್ಲಿ ಭೂಕಂಪ ಸಂಭವಿಸಿತು. ಇದಲ್ಲದೇ, ಕೆಲವು ವರ್ಷಗಳ ಹಿಂದೆ ಅಮೃತಸರದ ತಾರ್ಸಿಕ್ಕಾ ಪೊಲೀಸ್ ಠಾಣೆ ವ್ಯಾಪ್ತಿಯ ಮುಚ್ಚಲ್ ಗ್ರಾಮದಲ್ಲಿ ವಿಷಕಾರಿ ಮದ್ಯ ಸೇವಿಸಿ 11 ಜನರು ಸಾವನ್ನಪ್ಪಿದ ಪ್ರಕರಣ ವರದಿಯಾಗಿತ್ತು. ಈ ಪ್ರಕರಣದಲ್ಲಿಯೂ ಪೊಲೀಸರು ಮಹಿಳೆರನ್ನು ಕೂಡ ಬಂಧಿಸಿದ್ದರು.

ಓದಿ: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ: ಚೆನ್ನೈನಲ್ಲಿ ತಂಗಿದ್ದ ಶಂಕಿತರು- ಎನ್‌ಐಎ ತನಿಖೆ - RAMESWARAM CAFE BLAST

ETV Bharat Logo

Copyright © 2025 Ushodaya Enterprises Pvt. Ltd., All Rights Reserved.