ಬರ್ನಾಲಾ(ಪಂಜಾಬ್): ಪಂಜಾಬ್‌ನ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ಅಖಾಡಕ್ಕೆ ಧುಮುಕಿವೆ. ನಾಮಪತ್ರ ಸಲ್ಲಿಸಲು ನಿನ್ನೆ (ಗುರುವಾರ) ಕೊನೆಯ ದಿನವಾಗಿತ್ತು. ಬಿಜೆಪಿ, ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಅಭ್ಯರ್ಥಿಗಳು ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದ ಜೊತೆಗೆ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ.
ಅತ್ಯಂತ ಶ್ರೀಮಂತ ಅಭ್ಯರ್ಥಿ: ಬರ್ನಾಲಾದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಕೇವಲ್ ಸಿಂಗ್ ಧಿಲ್ಲೋನ್ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಮಾಜಿ ಶಾಸಕರೂ ಆಗಿರುವ ಇವರು 57 ಕೋಟಿ 53 ಲಕ್ಷ 81 ಸಾವಿರದ 640 ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿಯ ಒಡೆಯ. ಇವರ ಬಳಿ ಸುಮಾರು 10 ಲಕ್ಷ ರೂ. ಮೌಲ್ಯದ ದುಬಾರಿ ವಾಚ್, 3 ಲಕ್ಷ 82 ಸಾವಿರ ರೂ. ಮೌಲ್ಯದ ವಜ್ರ, 1 ಕೋಟಿ 31 ಲಕ್ಷದ 90 ಸಾವಿರದ 408 ರೂ. ಮೌಲ್ಯದ ಚಿನ್ನ ಹೊಂದಿದ್ದಾರೆ. ಇದಷ್ಟೇ ಅಲ್ಲದೇ ಚಂಡೀಗಢ, ದೆಹಲಿ, ಗುರುಗ್ರಾಮದಲ್ಲಿಯೂ ಆಸ್ತಿ ಹೊಂದಿದ್ದು, ಇದರ ಒಟ್ಟು ಮಾರುಕಟ್ಟೆ ಮೌಲ್ಯ 35 ಕೋಟಿ 77 ಲಕ್ಷ 98 ಸಾವಿರದ 969 ರೂ. ಆಗಿದೆ. 44 ಲಕ್ಷ 1 ಸಾವಿರದ 67 ರೂಪಾಯಿ ಸಾಲ ಹೊಂದಿದ್ದಾರೆ.
ಪತಿಗಿಂತ ಪತ್ನಿ ಶ್ರೀಮಂತೆ: ಕೇವಲ್ ಸಿಂಗ್ ಧಿಲ್ಲೋನ್ ಅವರಿಗಿಂತ ಪತ್ನಿಯೇ ಶ್ರೀಮಂತೆಯಾಗಿದ್ದಾರೆ. 2022ರ ಲೋಕಸಭಾ ಕ್ಷೇತ್ರದ ಸಂಗ್ರೂರ್ ಉಪಚುನಾವಣೆ ಸಂದರ್ಭದಲ್ಲಿ ಇವರು ತಮ್ಮ ಒಟ್ಟು ಆಸ್ತಿ 56 ಕೋಟಿ 28 ಲಕ್ಷ 33 ಸಾವಿರದ 364 ಕೋಟಿ ಎಂದು ಘೋಷಿಸಿದ್ದರು. 2022ಕ್ಕೆ ಹೋಲಿಸಿದರೆ, ಸದ್ಯ ಅವರ ನಿವ್ವಳ ಮೌಲ್ಯ ಸ್ವಲ್ಪ ಹೆಚ್ಚಾಗಿದೆ. 3 ಕೋಟಿ ಮೌಲ್ಯದ ಚಿನ್ನ ಹಾಗೂ ದುಬಾರಿ ವಾಚ್‌ಗಳು ಇವರಲ್ಲಿವೆ. ಒಂದು ಕಿಲೋ ಬೆಳ್ಳಿ ಹೊಂದಿದ್ದಾರೆ. ಒಟ್ಟು ಚರಾಸ್ತಿ 33 ಕೋಟಿ 88 ಲಕ್ಷ 73 ಸಾವಿರದ 131 ರೂ. ಆಗಿದೆ. ಕೃಷಿ ಭೂಮಿಯೂ ಇದೆ. ಸ್ಪೇನ್ ಮತ್ತು ದುಬೈನಲ್ಲಿ ಮನೆಗಳನ್ನು ಹೊಂದಿದ್ದಾರೆ. ಚಂಡೀಗಢ ಮತ್ತು ದೆಹಲಿಯಲ್ಲಿಯೂ ಆಸ್ತಿ ಇದ್ದು, ಇದರ ಒಟ್ಟು ಬೆಲೆ ಒಂದೂವರೆ ಸಾವಿರ ಕೋಟಿಗೂ ಅಧಿಕ. 4 ಕೋಟಿಗೂ ಅಧಿಕ ಸಾಲ ತೋರಿಸಿದ್ದಾರೆ.
ಇದೇ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕಲಾ ಧಿಲ್ಲೋನ್ ಕೂಡ ಕೋಟ್ಯಧಿಪತಿ. ಒಟ್ಟು ಸ್ಥಿರಾಸ್ತಿ 7 ಕೋಟಿ ರೂ. ಉಲ್ಲೇಖಿಸಿದ್ದಾರೆ. ಕೃಷಿ ಭೂಮಿ ಜೊತೆ ಸ್ವಂತ ಮನೆಯೂ ಇದೆ. ಚಿನ್ನ ಸಹ ಹೊಂದಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ 7 ಕೋಟಿ 55 ಲಕ್ಷ 78 ಸಾವಿರದ 972 ರೂ. 17 ಲಕ್ಷದ 99 ಸಾವಿರ ಸಾಲ ಹೊಂದಿದ್ದು, 1 ಲಕ್ಷ ನಗದು ಹಣ ಹೊಂದಿದ್ದಾರೆ. ಅವರ ಪತ್ನಿ ರಣದೀಪ್ ಕೌರ್ ಧಿಲ್ಲೋನ್ ಒಟ್ಟು 1 ಕೋಟಿ 75 ಲಕ್ಷ 88 ಸಾವಿರದ 102 ರೂ. ಆಸ್ತಿ ಹೊಂದಿದ್ದಾರೆ. ಅವರ ಬಳಿ 50 ಸಾವಿರ ನಗದು ಇದೆ. ಯಾವುದೇ ಸಾಲ ಹೊಂದಿಲ್ಲ. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಕಲಾ ಧಿಲ್ಲೋನ್ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಇದನ್ನೂ ಓದಿ: ಕೋಟಿ ಒಡೆಯರಾದರೂ ಸಾಲಗಾರರು, ಅಫಿಡವಿಟ್‌ನಲ್ಲಿ ಬಹಿರಂಗ; ಸಂಡೂರಿನ ಕೈ ಅಭ್ಯರ್ಥಿಗಿಂತ ಕಮಲ ಅಭ್ಯರ್ಥಿ ಅತ್ಯಧಿಕ ಶ್ರೀಮಂತ!