ETV Bharat / bharat

ತಿಹಾರ್​ ಜೈಲಿನಲ್ಲಿ ಗ್ಯಾಂಗ್​ವಾರ್​; ಕೈದಿಗೆ ಚಾಕು ಇರಿತ - Tihar Jail

author img

By ETV Bharat Karnataka Team

Published : Jun 6, 2024, 4:53 PM IST

ತಿಹಾರ್‌ ಜೈಲಿನಲ್ಲಿ ಇಂದು ಗೋಗಿ ಗ್ಯಾಂಗ್​​ ಸದಸ್ಯ ಹಿತೇಶ್​ ಮತ್ತು ಟಿಲ್ಲು ತಾಜ್​ಪುರಿಯಾ ಗ್ಯಾಂಗ್​ ನಡುವೆ ಹೊಡೆದಾಟ ನಡೆದಿದೆ ಎಂದು ತಿಳಿದುಬಂದಿದೆ.

prisoner was stabbed in a fight that broke out inside the Tihar Jail allegedly between rival gangs
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ತಿಹಾರ್​ ಜೈಲಿನಲ್ಲಿ ಬುಧವಾರ ಬೆಳಗ್ಗೆ ಎರಡು ಗ್ಯಾಂಗ್​ಗಳ ನಡುವೆ ನಡೆದ ಗಲಾಟೆಯಲ್ಲಿ ವಿರೋಧಿ ಗುಂಪಿನ ಕೈದಿ ಚಾಕು ಇರಿತಕ್ಕೊಳಗಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿತೇಶ್​ ಗಾಯಗೊಂಡ ಕೈದಿ. ಈತನನ್ನು ದೀನ್​ ದಯಾಳ್​ ಉಪಾಧ್ಯಾಯ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಗಿ ಗ್ಯಾಂಗ್​​ ಸದಸ್ಯ ಹಿತೇಶ್​ ಮತ್ತು ಟಿಲ್ಲು ತಾಜ್​ಪುರಿಯಾ ಗ್ಯಾಂಗ್​ ನಡುವೆ ಬೆಳಗ್ಗೆ 11.30ರ ಸುಮಾರಿಗೆ ಗಲಾಟೆ ನಡೆಯಿತು ಎಂದು ತಿಳಿದುಬಂದಿದೆ.

ವಿರೋಧಿ ಗುಂಪು ಮಾರಕಾಸ್ತ್ರದಿಂದ ಹಿತೇಶ್​​ಗೆ ಇರಿದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಹರಿನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಶ್ಚಿಮ ಪೊಲೀಸ್​ ಉಪ ಆಯುಕ್ತ ವಿಚಿತ್ರ ವೀರ್​ ಮಾಹಿತಿ ನೀಡಿದ್ದಾರೆ.

ಹಿತೇಶ್​ ಮೇಲೆ ಹಲ್ಲೆ ಮಾಡಿದವರನ್ನು ಗೌರವ್​ ಲೊಹ್ರಾ ಮತ್ತು ಗುರಿಂದರ್​ ಎಂದು ಗುರುತಿಸಲಾಗಿದೆ. 2019ರಿಂದ ಹಿತೇಶ್​ ತಿಹಾರ್​ ಜೈಲಿನಲ್ಲಿದ್ದಾನೆ. ಹಲ್ಲೆಗೈದ ಆರೋಪಿಗಳ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳಿವೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಕಳೆದ ವರ್ಷ ಮೇ ತಿಂಗಳಲ್ಲಿ ಇದೇ ಜೈಲಿನಲ್ಲಿ ಗ್ಯಾಂಗ್​ಸ್ಟರ್​​ ತಜಾಪುರಿಯಾ ಎಂಬಾತನನ್ನು ಎದುರಾಳಿ ಗುಂಪಿನ ಸದಸ್ಯರು ಇರಿದು ಕೊಲೆ ಮಾಡಿದ್ದರು. (ಪಿಟಿಐ)

ಇದನ್ನೂ ಓದಿ: ಚೊಚ್ಚಲ ಬಾರಿಗೆ ಸಂಸತ್​ ಪ್ರವೇಶ ಪಡೆದ 280 ಸಂಸದರು: ಕಳೆದ ಬಾರಿಗಿಂತಲೂ ಹೆಚ್ಚು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.