ETV Bharat / bharat

ಆಸ್ಪತ್ರೆಯಲ್ಲಿ ಗಾಯಾಳು ಪತಿ ಸಾವು; 5 ತಿಂಗಳ ಗರ್ಭಿಣಿ ಪತ್ನಿಯ ಕೈಯಲ್ಲೇ ಹಾಸಿಗೆ ಮೇಲಿದ್ದ ರಕ್ತದ ಕಲೆ ಸ್ವಚ್ಚಗೊಳಿಸಿದ ಸಿಬ್ಬಂದಿ - PREGNANT WOMAN CLEANED HOSPITAL BED

ಮಧ್ಯ ಪ್ರದೇಶದಲ್ಲಿ ಅಮಾನವೀಯ ಘಟನೆ ನಡೆದಿದೆ. ಪತಿ ಸಾವನ್ನಪ್ಪಿದ ಹಾಸಿಗೆಯನ್ನು ಆತನ ಗರ್ಭಿಣಿ ಪತ್ನಿಯ ಕೈಯಿಂದಲೇ ಆಸ್ಪತ್ರೆ ಸಿಬ್ಬಂದಿ ಸ್ವಚ್ಚಗೊಳಿಸಿದ್ದಾರೆ.

ಮೃತನ ಹಾಸಿಗೆಯನ್ನು ಆತನ ಗರ್ಭಿಣಿ ಪತ್ನಿಯಿಂದ ಸ್ವಚ್ಛಗೊಳಿಸಿದ ಆಸ್ಪತ್ರೆ ಸಿಬ್ಬಂದಿಗಳು ಅಮಾನತು!
ಪತಿ ಸಾವನ್ನಪ್ಪಿದ ಆಸ್ಪತ್ರೆಯ ಹಾಸಿಗೆಯನ್ನು ಗರ್ಭಿಣಿ ಪತ್ನಿ ಸ್ವಚ್ಚಗೊಳಿಸುತ್ತಿರುವುದು. (PTI)
author img

By PTI

Published : Nov 3, 2024, 8:25 AM IST

ಮಧ್ಯ ಪ್ರದೇಶ: ಬುಡಕಟ್ಟು ಸಮುದಾಯದ 5 ತಿಂಗಳ ಗರ್ಭಿಣಿಯ ಕೈಯಲ್ಲೇ ಆಸ್ಪತ್ರೆ ಸಿಬ್ಬಂದಿ ಆಕೆಯ ಪತಿ ಸಾವನ್ನಪ್ಪಿದ ಬೆಡ್‌ ಸ್ವಚ್ಚಗೊಳಿಸಿದ ಘಟನೆ ಶನಿವಾರ ಮಧ್ಯ ಪ್ರದೇಶದ ಡಿಂಡೋರಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಆಸ್ಪತ್ರೆಯ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ದಿಂಡೋರಿ ಜಿಲ್ಲೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಶಿಸ್ತು ಕ್ರಮ ಕೈಗೊಂಡಿದ್ದಾರೆ.

ನಡೆದಿದ್ದೇನು?: "ಗುರುವಾರ ರಾತ್ರಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಂಬಂಧಿಕರಿಂದ ಹಲ್ಲೆಗೊಳಗಾದ ರಘುರಾಜ್ ಮಾರವಿ (28) ಎಂಬವರು ಡಿಂಡೋರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಿಸದೆ ಶನಿವಾರ ಸಾವನ್ನಪ್ಪಿದರು. ಹಾಸಿಗೆಯಲ್ಲಿದ್ದ ರಕ್ತದ ಕಲೆಗಳನ್ನು ಅಲ್ಲಿದ್ದ ನರ್ಸಿಂಗ್ ಸಿಬ್ಬಂದಿ ಮೃತ ವ್ಯಕ್ತಿಯ 5 ತಿಂಗಳ ಗರ್ಭಿಣಿ ಪತ್ನಿ ರೋಶನಿ ಭಾಯಿ ಅವರಿಂದ ಸ್ವಚ್ಚಗೊಳಿಸಿದ್ದಾರೆ. ನರ್ಸಿಂಗ್ ಅಧಿಕಾರಿ ರಾಕುಮಾರಿ ಮಾರ್ಕಮ್ ಮತ್ತು ಸಹಾಯಕ ಚೋಟ್ಟಿ ಬಾಯಿ ಠಾಕೂರ್​ ಎಂಬವನ್ನು ಅಮಾನತು ಮಾಡಿದ್ದೇವೆ. ಸಿಬ್ಬಂದಿಗೆ ಸಹಾಯ ಮಾಡಿದ ಮೆಡಿಕಲ್​ ಅಧಿಕಾರಿ ಡಾ.ಚಂದ್ರಶೇಖರ್ ಸಿಂಗ್ ಅವರನ್ನು ವರ್ಗಾಯಿಸಿದ್ದೇವೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಘುರಾಜ್ ಮಾರವಿ ಸಹೋದರ ಶಿವರಾಜ್ ಮರಾವಿ (40) ಮತ್ತು ಇವರ ತಂದೆ ಧರಂ ಸಿಂಗ್ ಮರಾವಿ (65) ತಮ್ಮ ಸಂಬಂಧಿಕರು ನಡೆಸಿದ ದಾಳಿಯಿಂದ ಸಾವನ್ನಪ್ಪಿದ್ದು, ಮತ್ತೊಬ್ಬ ಸಹೋದರ ರಾಮರಾಜ್ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರು ತಿಳಿಸಿದರು.

ಪೊಲೀಸ್ ಅಧಿಕಾರಿಯ ಹೇಳಿಕೆ: "ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿರುವ ಲಾಲ್‌ಪುರ ಗ್ರಾಮದಲ್ಲಿ ಬೆಳೆ ಕಟಾವು ಮಾಡುವ ವಿಚಾರಕ್ಕೆ ಗಲಾಟೆ ನಡೆದು ಇವರ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದೇವೆ. ಉಳಿದ ಮೂವರ ಬಂಧನಕ್ಕೆ ಶೋಧ ನಡೆಯುತ್ತಿದೆ" ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ಸಿಂಗ್ ಮಾರ್ಕಮ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಭೀಕರ ರೈಲು ಅಪಘಾತ: ನಾಲ್ವರು ಪೌರ ಕಾರ್ಮಿಕರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.