ETV Bharat / bharat

ಬಡವರ ತಿರುಪತಿ ಎಂದೇ ಪ್ರಸಿದ್ಧಿ ಪಡೆದ ದೇವಸ್ಥಾನದಲ್ಲಿ ಕಳಪೆ ಗುಣಮಟ್ಟದ 'ಲಡ್ಡು ಪ್ರಸಾದ' ಆರೋಪ: ಭಕ್ತರ ಆತಂಕ

ಶ್ರೀ ಕುರುಮೂರ್ತಿ ಸ್ವಾಮಿಯ ಪ್ರಸಾದ ಕಳಪೆ ಗುಣಮಟ್ಟದಿಂದ ಕೂಡಿದ ಆರೋಪ, ಆತಂಕಗೊಂಡ ಭಕ್ತರು - ತಾಳೆ ಎಣ್ಣೆ ಬಳಕೆ ಮಾಡಿರುವ ದೂರು

poor-quality-in-laddu-prasadam-at-kurumurthy-swamy-temple-in-mahbubnagar-district-
ಬಡವರ ತಿರುಪತಿಯಲ್ಲಿ ಕಳಪೆ ಗುಣಮಟ್ಟದ 'ಲಡ್ಡು ಪ್ರಸಾದ' ಆರೋಪ: ಆತಂಕಗೊಂಡ ಭಕ್ತರು (ETV Bharat)
author img

By ETV Bharat Karnataka Team

Published : Nov 4, 2024, 3:55 PM IST

ಮೆಹಬೂಬ್​ನಗರ, ತೆಲಂಗಾಣ: ಬಡವರ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಶ್ರೀ ಕುರುಮೂರ್ತಿ ಸ್ವಾಮಿಯ ಪ್ರಸಾದದಲ್ಲಿ ಗುಣಮಟ್ಟ ಇಲ್ಲದಿರುವುದು ಕಂಡು ಬಂದಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ. ಸ್ವಾಮಿಯ ಉತ್ಸವ ಆರಂಭವಾಗುತ್ತಿದ್ದಂತೆಯೇ ಭಕ್ತರ ದಂಡು ದೇವಸ್ಥಾನಕ್ಕೆ ಹರಿದು ಬರಲಾರಂಭಿಸಿತು. ಸ್ವಾಮಿಯ ಪ್ರಸಾದವಾದ ಲಡ್ಡು, ಪುಳಿಯೊಗರೆ ತಯಾರಿಸಿ ಭಕ್ತರಿಗೆ ಮಾರಾಟ ಮಾಡಲು (ದೇವದಯಾ) ಮುಜರಾಯಿ ಇಲಾಖೆ ಟೆಂಡರ್‌ ಕರೆದಿತ್ತು. 45 ಲಕ್ಷ ರೂಪಾಯಿಗೆ ಏಕಸ್ವಾಮ್ಯದಾರರೊಬ್ಬರು ಟೆಂಡರ್ ಪಡೆದಿದ್ದಾರೆ. ಗುತ್ತಿಗೆದಾರರು ಗುಣಮಟ್ಟದ ಮಾನದಂಡಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವ ಬಗ್ಗೆ ಭಕ್ತರು ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ತಾಳೆ ಎಣ್ಣೆ ಬಳಕೆ ಆರೋಪ: ಟೆಂಡರ್ ನಿಯಮಗಳ ಪ್ರಕಾರ ಲಡ್ಡು ತಯಾರಿಕೆಯಲ್ಲಿ ಶೇಂಗಾ, ಇತರ ಪ್ರಥಮ ದರ್ಜೆಯ ಅಡುಗೆ ಎಣ್ಣೆ ಅಥವಾ ಮಾರುಕಟ್ಟೆಯಲ್ಲಿರುವ ತುಪ್ಪವನ್ನು ಬಳಸಬೇಕು. ಆದರೆ, ಗುತ್ತಿಗೆದಾರರು ತಾಳೆ ಎಣ್ಣೆಯನ್ನು ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ, ಅದು ಕೂಡ ತುಂಬಾ ಕಡಿಮೆಯಾಗಿದೆ. ಕಳಪೆ ಗುಣಮಟ್ಟದ ಕಡಲೆ ಹಿಟ್ಟನ್ನು ಸಹ ಬಳಸಲಾಗುತ್ತಿದೆ ಎಂಬ ದೂರಿದೆ. ಒಂದು ಕಿಲೋ ಲಡ್ಡು ತಯಾರಿಸಲು ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿ ಪುಡಿ ಮತ್ತು ಹಸಿರು ಕರ್ಪೂರವನ್ನು ಬಳಕೆ ಮಾಡಬೇಕು. ಆದರೆ ಅಳತೆ ಪ್ರಮಾಣಕ್ಕೆ ತಕ್ಕಂತೆ ಇವುಗಳನ್ನು ಬಳಕೆ ಮಾಡಿಲ್ಲ ಎಂದು ಹೇಳಲಾಗಿದೆ.

ಪುಳಿಯೊಗರೆ ಮಾಡುವಲ್ಲಿ ನಿಯಮ ಪಾಲಿಸುತ್ತಿಲ್ಲ. ಎಣ್ಣೆ, ಹುಣಸೆಹಣ್ಣು, ಕರಿಮೆಣಸು, ಕಡಲೆಬೇಳೆ, ಕಡಲೆಬೇಳೆ, ಜೀರಿಗೆ, ಸಾಸಿವೆ, ಇಂಗು, ಜೀರಿಗೆ ಪುಡಿ, ಮೆಂತ್ಯ ಪುಡಿ ಇತ್ಯಾದಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಮತ್ತು ಗುಣಮಟ್ಟದಲ್ಲಿ ಬಳಸಲಾಗುತ್ತಿಲ್ಲ. ಲಡ್ಡು, ಪುಳಿಯೊಗರೆ ಮಾಡುವ ಮಹಿಳೆಯರು ಕೈಗೆ ಗ್ಲೌಸ್, ತಲೆಗೆ ಟೋಪಿ ಹಾಕಿರಲಿಲ್ಲ ಎಂಬ ದೂರು ಇತ್ತು. ಈ ಸಂಬಂಧ ’ಮಾಧ್ಯಮದವರು’ ಪರಿಶೀಲನೆಗೆ ಹೋದಾಗ, ಟೆಂಡರ್​ ಪಡೆದವರು ತರಾತುರಿಯಲ್ಲಿ ಮಹಿಳೆಯರಿಗೆ ಹೇರ್‌ನೆಟ್‌ಗಳನ್ನು ನೀಡಿದ್ದರು ಎಂಬುದು ತಿಳಿದು ಬಂದಿದೆ.

ನಿಗದಿತ ಪ್ರಮಾಣದಲ್ಲಿಲ್ಲ ಎಂಬ ದೂರು : ಲಡ್ಡು ಪ್ರಸಾದ ಮತ್ತು ಪುಳಿಯೊಗರೆ ಬೆಲೆ 15 ರೂ ನಿಗದಿ ಮಾಡಲಾಗಿದೆ. ಆದರೆ ನಿಯಮಗಳ ಪ್ರಕಾರ, ಲಡ್ಡುಗಳನ್ನು 100 ಗ್ರಾಂ ಗಾತ್ರದಲ್ಲಿ ಮಾರಾಟ ಮಾಡಬೇಕು ಮತ್ತು ತೂಕ 75 ರಿಂದ 80 ಗ್ರಾಂ.ಇರಬೇಕು. ಲಡ್ಡುವಿನ ಗುಣಮಟ್ಟದ ಬಗ್ಗೆ ಮುಜರಾಯಿ ಇಲಾಖೆ ಅಧಿಕಾರಿಗಳು ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಲಭ್ಯವಾಗಲಿಲ್ಲ.

ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದ ಆಡಳಿತ ಮಂಡಳಿ: ದೇವಸ್ಥಾನ ಸಮಿತಿ ಅಧ್ಯಕ್ಷ ಗೋವರ್ಧನರೆಡ್ಡಿ ಅವರನ್ನು ವಿವರಣೆ ಕೇಳಿದಾಗ ತಾಳೆ ಎಣ್ಣೆ ಬಳಸುವಂತಿಲ್ಲ ಎಂದು ಹೇಳಿದ್ದು, ಈ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ. ತಯಾರಿಕಾ ಕೇಂದ್ರವನ್ನು ಪರಿಶೀಲನೆ ನಡೆಸಿ, ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಲಡ್ಡು, ಪುಳಿಹೊರಾ ಪ್ರಸಾದ ತಯಾರಿಕೆಯಲ್ಲಿ ಗುಣಮಟ್ಟ ಹಾಗೂ ಶುಚಿತ್ವ ಕಾಪಾಡಲು ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ: ಕಾರ್ತಿಕ ಮಾಸದಲ್ಲಿ "ದೀಪ ದಾನ"; ಇದರಿಂದ ಸಿಗುವ ಲಾಭಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.