ETV Bharat / bharat

ಮೊದಲ ಹಂತದ ಮತದಾನಕ್ಕೆ ಸಜ್ಜಾದ ಜಾರ್ಖಂಡ್​: ದಟ್ಟಾರಣ್ಯದ ಮತ ಕೇಂದ್ರಗಳಿಗೆ ಹೆಲಿಕಾಪ್ಟರ್​ ಮೂಲಕ ತೆರಳಿದ ಸಿಬ್ಬಂದಿ

ಸಂಚಾರ ಮಾರ್ಗ ದುರ್ಗಮ ಆಗಿರುವ ಪ್ರದೇಶಗಳಿಗೆ ಹೆಲಿಕಾಪ್ಟರ್​​ಗಳ ಬಳಕೆ ಮಾಡಿಕೊಳ್ಳುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಬಸ್​ ಮತ್ತು ಟ್ರೈನ್​ಗಳಲ್ಲಿ ಕೂಡ ಸಿಬ್ಬಂದಿ ಕರ್ತವ್ಯಕ್ಕೆ ತೆರಳುತ್ತಿದ್ದಾರೆ.

Polling parties leave for remote areas by helicopter to conduct elections in Jharkhand
ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿರುವ ಸಿಬ್ಬಂದಿ (ಐಎಎನ್​ಎಸ್​)
author img

By ETV Bharat Karnataka Team

Published : Nov 11, 2024, 4:00 PM IST

ರಾಂಚಿ: ಜಾರ್ಖಂಡ್​ ಮೊದಲ ಹಂತದ ಮತದಾನಕ್ಕೆ ಸಜ್ಜಾಗಿದೆ. ನವೆಂಬರ್​ 13 ರಂದು 43 ವಿಧಾನಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣಾ ಕರ್ತವ್ಯಕ್ಕೆ ಅಧಿಕಾರಿಗಳು ಸಜ್ಜಾಗಿದ್ದಾರೆ. ರಾಜ್ಯದ ಸಂಪರ್ಕ ಸಾಧಿಸಲಾಗದ ಕುಗ್ರಾಮದ ಪ್ರದೇಶಗಳಿಗೆ ಅಧಿಕಾರಿಗಳು ಕರ್ತವ್ಯಕ್ಕೆ ಎರಡು ದಿನ ಮೊದಲೇ ಪೂರ್ವಭಾವಿಯಾಗಿ ತೆರಳುತ್ತಿದ್ದು, ಸುಗಮ ಮತದಾನಕ್ಕೆ ಎಲ್ಲ ಕ್ರಮಗಳನ್ನು ಕೇಂದ್ರ ಚುನಾವಣಾ ಆಯೋಗ ತೆಗೆದುಕೊಂಡಿದೆ. ರಾಜ್ಯದ ಐದು ಜಿಲ್ಲೆಗಳಾದ ಪಶ್ಚಿಮ ಸಿಂಗಭೂಮ್​, ಲೇತ್ಹರ್​, ಲೊಹರ್ದಗ್​, ಗುಮ್ಲಾ ಮತ್ತು ಗರ್ವ್ಹದ ಒಟ್ಟು 225 ಮತ ಕೇಂದ್ರಗಳಲ್ಲಿ ಚುನಾವಣಾಧಿಕಾರಿಗಳು ಕರ್ತವ್ಯಕ್ಕೆ ತೆರಳಿದ್ದಾರೆ ಎಂದು ಆಯೋಗ ಮಾಹಿತಿ ನೀಡಿದೆ.

ಇಂದು ಬಹಿರಂಗ ಪ್ರಚಾರ ಅಂತ್ಯ: ಇನ್ನೇನಿದ್ದರೂ ಮನೆ ಮನೆ ಪ್ರಚಾರ: ಮೊದಲ ಹಂತದ ಮತದಾನದ ಚುನಾವಣಾ ಪ್ರಚಾರ ಸೋಮವಾರ ಸಂಜೆ ಅಂದರೆ ಇಂದು ಅಂತ್ಯವಾಗಲಿದೆ. ಸಂಚಾರ ಮಾರ್ಗ ದುರ್ಗಮವಾಗಿರುವ ಪ್ರದೇಶಗಳಿಗೆ ಹೆಲಿಕಾಪ್ಟರ್​​ಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಬಸ್​ ಮತ್ತು ಟ್ರೈನ್​ಗಳಲ್ಲಿ ಕೂಡ ಸಿಬ್ಬಂದಿ ಕರ್ತವ್ಯಕ್ಕೆ ತೆರಳುತ್ತಿದ್ದಾರೆ.

ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಎಲ್ಲ ಕ್ರಮ: ಈ ಕುರಿತು ಮಾತನಾಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕೆ ರವಿಕುಮಾರ್​, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಎಲ್ಲಾ ರೀತಿಯ ಅಗತ್ಯ ಕ್ರಮ ನಡೆಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಈ ಐದು ಜಿಲ್ಲೆಗಳು ದಟ್ಟ ಅರಣ್ಯ ಮತ್ತು ಬೆಟ್ಟಗಳಿಂದ ಕೂಡಿದೆ. ಮಾವೋವಾದಿಗಳ ಪರಿಣಾಮ ಹೊಂದಿರುವ ಈ ಹಿನ್ನಲೆ ಈ ಪ್ರದೇಶಗಳನ್ನು ಅತಿ ಸೂಕ್ಷ್ಮ ಪ್ರದೇಶಗಳು ಎಂದು ವರ್ಗೀಕರಿಸಲಾಗಿದೆ. ಈ ಪ್ರದೇಶಗಳಲ್ಲಿ ಸುರಕ್ಷಿತ ಮತದಾನ ನಡೆಸುವುದು ಕೂಡ ಸವಾಲಿನಿಂದ ಕೂಡಿದೆ. ಅಂತಹ ಅನೇಕ ಮತಕೇಂದ್ರದಲ್ಲಿ ಎರಡು ದಿನದ ಮೊದಲೇ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ.

ಸೋಮವಾರ ಮತ್ತು ಮಂಗಳವಾರ ಮತದಾನ ಸಿಬ್ಬಂದಿಗಳು ಕ್ಲಸ್ಟರ್​ನಲ್ಲಿ ಉಳಿಯಲಿದ್ದು, ಬುಧವಾರ ಮತದಾನದ ದಿನದಂದು ನವಂಬರ್​ 13ರಂದು ಬೆಳಗ್ಗೆ ಮತ ಕೇಂದ್ರಕ್ಕೆ ತೆರಳಲಿದ್ದಾರೆ.

ಮೊದಲ ಹಂತದಲ್ಲಿ ರಾಜ್ಯದ 43 ವಿಧಾನಸಭಾ ಕ್ಷೇತ್ರಗಳಿದ್ದು, 683 ಅಭ್ಯರ್ಥಿಗಳು ಕಣದಲ್ಲಿದ್ದು, 1,37,10,717 ಮತದಾರರ ಹೆಸರು ಮತಚಲಾಯಿಸಲಿದ್ದಾರೆ. ಇದರಲ್ಲಿ 68,73,455 ಪುರುಷ ಮತ್ತು 68,36,959 ಮಹಿಳಾ ಮತದಾರರಿದ್ದು, 303 ತೃತೀಯ ಲಿಂಗಿಗಳಿದ್ದಾರೆ.

ರಾಜ್ಯದಲ್ಲಿ ಎರಡನೇ ಹಂತದ ಮತದಾನ ನವೆಂಬರ್​ 20 ರಂದು ನಡೆಯಲಿದ್ದು, ಮತ ಏಣಿಕೆ ನವೆಂಬರ್​ 23ರಂದು ನಡೆಯಲಿದೆ.

ಇದನ್ನೂ ಓದಿ: ಜಮ್ಮು- ಕಾಶ್ಮೀರದ ಕಿಶ್ತ್ವಾರ್​ ಅರಣ್ಯ ಪ್ರದೇಶದಲ್ಲಿ ಮುಂದುವರೆದ ಉಗ್ರರ ಶೋಧ ಕಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.