ETV Bharat / bharat

ಮಹಿಳೆಯರಿಗೆ ರಾಜಕೀಯ ತರಬೇತಿ... ಹೀಗಿದೆ ತಮಿಳು ನಾಡು ಸರ್ಕಾರದ ರಾಜ್ಯ ಮಹಿಳಾ ಪಾಲಿಸಿ

ತಮಿಳುನಾಡು ಸರ್ಕಾರವು ತನ್ನ ಸಚಿವ ಸಂಪುಟದಲ್ಲಿ ರಾಜ್ಯ ಮಹಿಳಾ ನೀತಿಗೆ ಅನುಮೋದನೆ ನೀಡಿದೆ.

ಮಹಿಳೆಯರಿಗೆ ರಾಜಕೀಯ ಪ್ರಮಾಣಪತ್ರ ಕೋರ್ಸ್
ಮಹಿಳೆಯರಿಗೆ ರಾಜಕೀಯ ಪ್ರಮಾಣಪತ್ರ ಕೋರ್ಸ್
author img

By ETV Bharat Karnataka Team

Published : Jan 24, 2024, 7:13 PM IST

ಚೆನ್ನೈ (ತಮಿಳುನಾಡು) : ನಿನ್ನೆ (ಜನವರಿ 24) ನಡೆದ ತಮಿಳುನಾಡು ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಮಹಿಳಾ ನೀತಿಗೆ ಅನುಮೋದನೆ ನೀಡಿದೆ. ರಾಜ್ಯ ಮಹಿಳಾ ನೀತಿಯಲ್ಲಿ ತಮಿಳುನಾಡು ಸರ್ಕಾರದಿಂದ ಮಹಿಳೆಯರಿಗೆ ವಿವಿಧ ಯೋಜನೆಗಳನ್ನು ರೂಪಿಸಿ ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

ರಾಜ್ಯ ಮಹಿಳಾ ನೀತಿಯಲ್ಲಿ ವಿಶೇಷತೆಗಳು:-

  1. ಎಲ್ಲ ಸರ್ಕಾರಿ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿ. ಗ್ರಾಮೀಣ ಪ್ರದೇಶಗಳಲ್ಲಿ ಈಗಿರುವ 100 ದಿನದ ಕೆಲಸದ ಯೋಜನೆಯನ್ನು ಹೆಚ್ಚುವರಿ 50 ದಿನಗಳವರೆಗೆ ವಿಸ್ತರಿಸುವುದು. (ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಒಳಪಟ್ಟಿರುತ್ತದೆ)
  2. 19 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡುವುದು ಮತ್ತು ಶಾಲೆ ಬಿಟ್ಟವರಿಗೆ ಶಿಕ್ಷಣ ಪುನಾರಂಭಿಸುವ ಅವಕಾಶ.
  3. ಸಾರ್ವಜನಿಕ ಖಾಸಗಿ ಉದ್ಯಮಗಳಲ್ಲಿ ನಾಯಕತ್ವ ಸ್ಥಾನದಲ್ಲಿರುವ ಮಹಿಳೆಯರಿಗೆ ಸಮಾನ ಹಕ್ಕುಗಳು.
  4. ರಾಜಕೀಯಕ್ಕೆ ಸೇರಲು ಬಯಸುವ ಮಹಿಳೆಯರಿಗೆ ಆರು ತಿಂಗಳ ವಿಶೇಷ ತರಬೇತಿ ಒದಗಿಸುವುದು ಹೊಸ ಮಹಿಳಾ ನೀತಿಯಲ್ಲಿ ಸೇರಿದೆ.

ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್‌ : ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಮಹಿಳೆಯರಿಗೆ 6 ತಿಂಗಳ ವಿಶೇಷ ಪ್ರಮಾಣಪತ್ರ ಕೋರ್ಸ್‌ ನೀಡಲಾಗುತ್ತದೆ. ಇದರಲ್ಲಿ ಸ್ಥಳೀಯ ಸರ್ಕಾರದಿಂದ ಎಂಎಲ್ಎ, ಎಂಪಿ ಹುದ್ದೆಗಳವರೆಗೆ ಕಾರ್ಯವೇನು? ಕಚೇರಿಯಲ್ಲಿದ್ದಾಗ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ಹುದ್ದೆಯ ನಿರೀಕ್ಷೆಗಳೇನು? ಎಂಬುದನ್ನು ತರಬೇತಿ ವೇಳೆ ಕಲಿಸಲಾಗುತ್ತದೆ.

ಅಲ್ಲದೇ, ಕಚೇರಿಯಲ್ಲಿ ಸವಾಲುಗಳನ್ನು ಎದುರಿಸಲು ತರಬೇತಿ, ಮಹಿಳೆಯರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಶಿಕ್ಷಣ ಮತ್ತು ರಾಜಕೀಯದಲ್ಲಿ ಸ್ಪರ್ಧಿಸುವ ಪ್ರಬುದ್ಧತೆಯನ್ನು ಸಹ ಈ ಕೋರ್ಸ್​ ಅವಧಿಯಲ್ಲಿ ಕಲಿಸಲಾಗುತ್ತದೆ. ಈ ತರಬೇತಿಯು ಮಹಿಳೆಯರಿಗೆ ಕಚೇರಿ ವ್ಯವಹಾರಗಳನ್ನು ಸ್ವತಃ ನಿಭಾಯಿಸಲು ಈ ಕೋರ್ಸ್​ ಸಹಾಯ ಮಾಡುತ್ತದೆ.

ತರಬೇತಿ ಕಾರ್ಯಕ್ರಮದಿಂದ ರಾಜಕೀಯ ಜಾಗೃತಿ: ಸ್ಥಳೀಯ ಸಂಸ್ಥೆಗಳಲ್ಲಿ ಕೌನ್ಸಿಲರ್‌ಗಳಿಂದ ಹಿಡಿದು ಮೇಯರ್‌ಗಳವರೆಗಿನ ಸ್ಥಾನಗಳಿಗೆ ಮಹಿಳಾ ಅಭ್ಯರ್ಥಿಗಳು ತಮ್ಮ ಸಂಬಂಧಿಕರ ಕೈಯಲ್ಲಿ ಕೈಗೊಂಬೆ ಆಗುವುದನ್ನು ಈ ಉಪಕ್ರಮವು ತಡೆಯುತ್ತದೆ. ಮೇಲ್ನೋಟಕ್ಕೆ ಕೆಲವು ಚುನಾಯಿತ ಮಹಿಳಾ ಸದಸ್ಯರನ್ನು ಸ್ಥಳೀಯ ಸರ್ಕಾರಿ ಸ್ಥಾನಗಳಲ್ಲಿ ಅವರ ಗಂಡಂದಿರು ಬದಲಾಯಿಸಬಹುದು. ಈ ಪ್ರಮಾಣಪತ್ರ ತರಬೇತಿ ಕಾರ್ಯಕ್ರಮವು ಮಹಿಳೆಯರಿಗೆ ರಾಜಕೀಯ ಜಾಗೃತಿ ಒದಗಿಸಲು ಮತ್ತು ಅವರು ಸ್ವತಂತ್ರವಾಗಿ ಕಾರ್ಯನಿರ್ವಹಣೆ ಮಾಡಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.

2021ರಲ್ಲಿ ಪ್ರಕಟವಾದ ರಾಜ್ಯ ಮಹಿಳಾ ನೀತಿಯಲ್ಲಿ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿದ ನಂತರ ವಿವಿಧ ತಿದ್ದುಪಡಿಗಳನ್ನು ಮಾಡಲಾಗಿದೆ. ಆ ಬಳಿಕವೇ ಸಚಿವ ಸಂಪುಟದ ಮುಂದಿಟ್ಟು ಅನುಮೋದನೆ ಪಡೆಯಲಾಗಿದೆ. ರಾಜ್ಯ ಮಹಿಳಾ ನೀತಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸಚಿವೆ ಗೀತಾ ಜೀವನ್ ಈಟಿವಿ ಭಾರತ್‌ದೊಂದಿಗೆ ಮಾತನಾಡಿ, ವಿಧವೆಯರು, ಪ್ರತ್ಯೇಕಗೊಂಡ ಮಹಿಳೆಯರು, ಸ್ವಯಂ ಉದ್ಯೋಗಿಗಳು, ಉತ್ಪಾದನಾ ಕೆಲಸಗಳಲ್ಲಿ ತೊಡಗಿರುವ ಮಹಿಳೆಯರಿಗೆ ಈ ನೀತಿಯಲ್ಲಿ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ.

ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸಮಾನ ಹಕ್ಕು: ಅಲ್ಲದೇ ಯಾವುದೇ ಸಹಾಯ ಬೇಕಾದರೆ ಅಗತ್ಯ ಸಹಾಯ ಒದಗಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ. ವಿಕಲಚೇತನ ಮಹಿಳೆಯರಿಗೆ, ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರಿಗೆ ಪ್ರಾಮುಖ್ಯತೆ ನೀಡುವುದು ಸೇರಿದಂತೆ ಹೇಗೆ ನಿರ್ವಹಣೆ ಮಾಡಬೇಕು ಎಂಬುದನ್ನು ಕೋರ್ಸ್​ ಅವಧಿಯಲ್ಲಿ ಕಲಿಸಿಕೊಡಲಾಗುತ್ತದೆ.

ಇದನ್ನೂ ಓದಿ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ಮಹಿಳಾ ಸಾಮರ್ಥ್ಯ ಶ್ಲಾಘಿಸಿದ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.