ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬೆಂಗಾವಲು ವಾಹನವನ್ನು ಘಾಜಿಪುರ ಗಡಿಯಲ್ಲಿ ತಡೆಹಿಡಿಯಲಾಗಿದೆ. ಇಬ್ಬರೂ ನವದೆಹಲಿಯಿಂದ ಉತ್ತರ ಪ್ರದೇಶದ ಸಂಭಾಲ್ಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರನ್ನು ಘಾಜಿಪುರ ಗಡಿಯ ಬಳಿ ನಿಲ್ಲಿಸಲಾಯಿತು.
ಬೆಂಗಾವಲು ಪಡೆಯನ್ನು ತಡೆಯಲು ಪೊಲೀಸರು ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿದರು. ಬೆಂಗಾವಲು ಪಡೆಯನ್ನು ತಡೆಹಿಡಿದ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆಯಿತು. ಸಂಭಾಲ್ಗೆ ರಾಹುಲ್ ಗಾಂಧಿ ಅವರ ಉದ್ದೇಶಿತ ಭೇಟಿ ಇರುವುದರಿಂದ ಈಗಾಗಲೇ ಉತ್ತರಪ್ರದೇಶದ ಗೇಟ್ನಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ, ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.
#WATCH | Lok Sabha LoP & Congress MPs Rahul Gandhi, Priyanka Gandhi Vadra and other Congress leaders have been stopped by Police at the Ghazipur border on the way to violence-hit Sambhal. pic.twitter.com/EcPEOFahIV
— ANI (@ANI) December 4, 2024
ಗಡಿಯಲ್ಲಿ ತಪಾಸಣೆ ನಂತರ ವಾಹನಗಳನ್ನು ಮುಂದೆ ಹೋಗಲು ಬಿಡಲಾಗುತ್ತಿದೆ. ಪ್ರಸ್ತುತ, ದೆಹಲಿಯಿಂದ ಗಾಜಿಯಾಬಾದ್‌ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 9ರ ಎಲ್ಲಾ ಲೇನ್‌ಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿ ಮೀರತ್ ಎಕ್ಸ್ ಪ್ರೆಸ್ ವೇ ತಲುಪಿದ್ದಾರೆ.
#WATCH | Visuals from Ghazipur border where Lok Sabha LoP & Congress MPs Rahul Gandhi, Priyanka Gandhi Vadra and other Congress leaders have been stopped by Police on the way to violence-hit Sambhal. pic.twitter.com/eqad86lxr0
— ANI (@ANI) December 4, 2024
ಈ ಎಲ್ಲಾ ಹಿನ್ನೆಲೆ ಗಂಟೆಗಟ್ಟಲೆ ಟ್ರಾಫಿಕ್ ಜಂಜಾಟದಲ್ಲಿ ಪ್ರಯಾಣಿಕರು ಸಿಲುಕಿದ್ದು ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಕುರಿತು ಇಂದಿರಾಪುರಂ ಎಸಿಪಿ ಸ್ವತಂತ್ರಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿದಾಗ ಸಾರ್ವಜನಿಕರ ಅನುಕೂಲಕ್ಕಾಗಿ ಸಾಕಷ್ಟು ಬಂದೋಬಸ್ತ್ ಮಾಡಲಾಗಿದೆ. ಸಂಚಾರ ಸುಗಮವಾಗಿಸಲು ಪೊಲೀಸ್ ಸಿಬ್ಬಂದಿ ನಿರಂತರ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡು ಹಾರಿಸಲು ಯತ್ನಿಸಿದವನ ಮಾಹಿತಿ ಪತ್ತೆ: ಯಾರು ಈ ನರೇನ್ ಸಿಂಗ್ ಚೌರಾ?