ಹೈದರಾಬಾದ್: ಐಷಾರಾಮಿ ಜೀವನ, ಕೈ ತುಂಬಾ ಹಣ, ರೇವ್ ಪಾರ್ಟಿ, ಬೆಂಗಳೂರು ಮತ್ತು ಗೋವಾ ಪಬ್ನಲ್ಲಿ ಮೋಜು ಇಂತಹ ಆಮಿಷಗಳಿಗೆ ಬಲಿಯಾಗಿ ಯುವತಿಯರು ಡ್ರಗ್ ಜಾಲದಲ್ಲಿ ಸಿಲುಕುತ್ತಿದ್ದಾರೆ. ಐಷಾರಾಮಿ ಜೀವನಕ್ಕಾಗಿ ಡ್ರಗ್ ಪೆಡ್ಲರ್ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಗೋವಾ, ಬೆಂಗಳೂರು ಮತ್ತು ಮುಂಬೈ ಮೂಲದ ಕೆಲವು ನೈಜೀರಿಯನ್ಗಳಿಂದ ನಗರಕ್ಕೆ ಡ್ರಗ್ಸ್ ತರುತ್ತಿದ್ದು, ರಾಷ್ಟ್ರವ್ಯಾಪಿ ಜಾಲವನ್ನು ಹೊಂದಿರುವ ಗ್ಯಾಂಗ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಈ ಸಂಬಂಧ ಗಚ್ಚಿಬೌಲಿಯಲ್ಲಿ ಡ್ರಗ್ಸ್ ತಂಡವನ್ನು ಟಿಎಸ್ ಎನ್‌ಎಬಿ ಇಬ್ಬರು ಯುವತಿಯರನ್ನು ಬಂಧಿಸಿದ್ದಾರೆ. ಇವರು ನರ್ಸಂಗಿಯಲ್ಲಿ ಸಂಗೀತ ಶಿಕ್ಷಕಿಯಾರಾಗಿದ್ದು, ಡ್ರಗ್ಸ್ ಮಾರಾಟ ಮಾಡುವಾಗ ಸೆರೆ ಸಿಕ್ಕಿದ್ದಾರೆ.
ಪೊಲೀಸರ ಪ್ರಕಾರ, ಶೇ 20 - 30ರಷ್ಟು ಮಂದಿ ಗಾಂಜಾ ಮತ್ತು ಡ್ರಗ್ಸ್ ಚಟಕ್ಕೆ ಒಳಗಾಗಿರುವವರು 18 ರಿಂದ 35ರ ವಯೋಮಾನದ ಯುವತಿಯರಾಗಿದ್ದಾರೆ. ಹತ್ತಿರದ ಶಿಕ್ಷಣ ಸಂಸ್ಥೆಗಳಿಂದ ಅವರನ್ನು ಟ್ರಾಪ್ ಮಾಡಲಾಗುತ್ತಿದೆ. ಯುವತಿಯರು ಮತ್ತು ವಿದ್ಯಾರ್ಥಿಗಳನ್ನು ವಿಶೇಷ ಕಾರ್ಯಕ್ರಮ, ಪಾರ್ಟಿ ಮತ್ತು ಪಬ್ಗಳುಗೆ ಉಚಿತವಾಗಿ ಆಹ್ವಾನ ನೀಡಲಾಗುತ್ತಿದೆ. ಇವರು ವಾರಾಂತ್ಯದಲ್ಲಿ ಪಬ್ನಲ್ಲಿ ಡ್ರಗ್ಸ್ ಪಡೆಯುತ್ತಿದ್ದಾರೆ. ವರ್ಷಗಳ ಕಾಲ ಉಚಿತವಾಗಿ ಹಣ ನೀಡಿದ ಹಿನ್ನೆಲೆ ಅವರು ಪೆಡ್ಲರ್ಗಳಾಗಿ ಕೆಲಸ ಮಾಡುತ್ತಿದ್ದಾರೆ. ಸೂಚಿಸಿದ ವ್ಯಕ್ತಿ ಅಥವಾ ಗೋವಾ ಮತ್ತು ಬೆಂಗಳೂರಿಗೆ ತೆರಳಿಗೆ ಹೇಳಿದವರಿಗೆ ಡ್ರಗ್ಸ್ ನೀಡಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಅಪರಾಧ ಪ್ರಕರಣದಲ್ಲೂ ಇದೇ ರೀತಿ ಆಗಿತ್ತು. ಈಕೆಯನ್ನು ರಾಜೇಂದ್ರನಗರ್ ಸ್ವಾಟ್ ಪೊಲೀಸರು ಬಂಧಿಸಿದ್ದರು.
ಪಾರ್ಟಿ ಸಂಸ್ಕೃತಿ: ಮೆಟ್ರೊ ನಗರದಲ್ಲಿ ಪಾರ್ಟಿ ಸಂಸ್ಕೃತಿ ಹೆಚ್ಚಿದೆ. ಅಲ್ಲಿ ವಾರಾಂತ್ಯದಲ್ಲಿ ಸ್ನೇಹಿತರೊಂದಿಗೆ ಪಬ್, ಕ್ಲಬ್, ರೆಸಾರ್ಟ್ಗೆ ಹೋಗುವ ಸಂಸ್ಕೃತಿ ಹೆಚ್ಚಿದೆ. ಒಂದು ಬಾರಿ ತೆಗೆದುಕೊಂಡರೆ ಏನಾಗುತ್ತದೆ ಎಂದು ಆಲ್ಕೋಹಾಲ್, ಗಾಂಜಾ, ಡ್ರಗ್ಸ್ ಸೇವನೆಗೆ ಮುಂದಾಗುತ್ತಿದ್ದಾರೆ. ಕಳೆದ ವರ್ಷವೂ ಹೈದರಾಬಾದ್ ಪೊಲೀಸರು ಮುಂಬೈನ ಜತಿನ್ ಮತ್ತು ಜಾವೇದ್ ಎಂಬಿಬ್ಬರನ್ನು ಬಂಧಿಸಿದ್ದರು. ಈ ವೇಳೆ ಆರೋಪಿಗಳು ಲೈಂಗಿಕ ಅಗತ್ಯವನ್ನು ಪೂರೈಸುವುದಾಗಿ ಹೇಳಿ ಯುವತಿಯರು ಮಾದಕ ವ್ಯಸನಕ್ಕೆ ಒಳಪಡಿಸಿದ್ದರು ಎಂದು ತಿಳಿಸಿದ್ದರು. ಇತ್ತೀಚಿಗೆ ಟಿಎಸ್ ಎನ್‌ಎಬಿ ಪೊಲೀಸರು ಗಚಿಬೌಲಿಯಲ್ಲಿ ಮೂವರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ ಜೈಲಿಗಟ್ಟಿದ್ದರು.
ಇವುಗಳು ಪ್ರಮುಖ ಉದಾಹರಣೆ: ಗಂಡಿಪೇಟ್ನ ಸಂಗೀತ ಶಿಕ್ಷಕಿ ಲಾವಣ್ಯ, ಉನೀತ್ ಡ್ರಗ್ ಪೆಡ್ಲರ್ನಿಂದ ಡ್ರಗ್ಸ್ ಪಡೆಯಲು ಶುರು ಮಾಡಿದ್ದರು. ಬಳಿಕ ಇಬ್ಬರು ಒಟ್ಟುಗೂಡಿ ಬೆಂಗಳೂರಿನಿಂದ ನಗರಕ್ಕೆ ಡ್ರಗ್ಸ್ ತಂದಿದ್ದಾರೆ. ಇದೀಗ ನರ್ಸಂಗಿ ಮತ್ತು ಮೊಕಿಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಸಾಫ್ಟ್ ವೇರ್ ಉದ್ಯೋಗಿಯೊಬ್ಬರ ಮನೆಯಲ್ಲಿ ಹೊಸ ವರ್ಷದ ಮುನ್ನಾ ದಿನದಂದು ಮಾರಾಟಕ್ಕೆ ಸಿದ್ಧಪಡಿಸಿದ್ದ ಡ್ರಗ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಕಳೆದ ಸೆಪ್ಟೆಂಬರ್ನಲ್ಲಿ ರಾಜೇಂದ್ರನಗರ ಸ್ವಾಟ್ ಪೊಲೀಸರು ಡ್ರಗ್ಸ್ ಮಾರುತ್ತಿದ್ದ ಮಹಿಳೆಯನ್ನು ಬಂಧಿಸಿದ್ದರು. ಎಂಬಿಎ ಮುಗಿದ ಬಳಿಕ ಈಕೆ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ಪ್ರಭಾಕರ್ ಎಂಬಾತನ ಸಂಪರ್ಕಕ್ಕೆ ಬಂದಿದ್ದಾಳೆ. ಈತ ಗೋವಾದಲ್ಲಿನ ನೈಜೀರಿಯಾ ಪ್ರಜೆ ಜೊತೆ ಸಂಪರ್ಕದಲ್ಲಿದ್ದು, ಅಲ್ಲಿಂದ ಡ್ರಗ್ಸ್ ತರಿಸಿ, ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಇವರು ದಕ್ಷಿಣ ಭಾರತದ ಮೊದಲ ತೃತೀಯಲಿಂಗಿ ರೈಲ್ವೆ ಟಿಕೆಟ್ ಇನ್ಸ್ಪೆಕ್ಟರ್