ETV Bharat / bharat

ಫೋನಲ್ಲಿ ಮಾತನಾಡುತ್ತಾ ನೀರಿನ ಬದಲು ಕಂಕುಳಡಿ ಹೀಟರ್​ ಇಟ್ಟುಕೊಂಡ ವ್ಯಕ್ತಿ: ಮುಂದಾಗಿದ್ದೇ ದುರಂತ - Man dies due to electrocution - MAN DIES DUE TO ELECTROCUTION

ವಾಟರ್​ ಹೀಟರ್​ ಅನ್ನು ನೀರಿಗಿಡುವ ಬದಲು ಕಂಕುಳಡಿ ಇಟ್ಟುಕೊಂಡು ಸ್ವಿಚ್​ ಹಾಕಿದ ಪರಿಣಾಮ ವ್ಯಕ್ತಿಯೊಬ್ಬ ವಿದ್ಯುತ್​ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಖಮ್ಮಂನಲ್ಲಿ ಜರುಗಿದೆ.

deceased Donnepudi Mahesh Babu
ಮೃತ ದೊಣೆಪುಡಿ ಮಹೇಶ್​ ಬಾಬು (ETV Bharat)
author img

By ETV Bharat Karnataka Team

Published : Aug 12, 2024, 12:31 PM IST

ಖಮ್ಮಂ (ತೆಲಂಗಾಣ): ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ತನ್ನ ಕಂಕುಳಡಿ ವಿದ್ಯುತ್​ ಹೀಟರ್​ ಇಟ್ಟುಕೊಂಡ ಪರಿಣಾಮ ಶಾಕ್​ ತಗುಲಿ ಸಾವನ್ನಪ್ಪಿರುವ ಘಟನೆ ಖಮ್ಮಂನಲ್ಲಿ ಜರುಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಖಮ್ಮಂ ತ್ರಿ-ಟೌನ್​ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​ ರಮೇಶ್​ ಮಾಹಿತಿ ನೀಡಿದ್ದು, "ಮೃತ ದೊಣೆಪುಡಿ ಮಹೇಶ್​ ಬಾಬು(40) ಸ್ಥಳೀಯ ರಾಜಕಾಲುವೆಯ ಹನುಮಾನ ದೇವಸ್ಥಾನದ ಬಳಿ ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದರು. ಭಾನುವಾರ ರಾತ್ರಿ ಸುಮಾರು 8.30ಕ್ಕೆ ತಮ್ಮ ಮನೆಯ ನಾಯಿಗೆ ಸ್ನಾನ ಮಾಡಿಸಲು ಬಿಸಿ ನೀರಿಗಾಗಿ ಹೀಟರ್​ ಆನ್​ ಮಾಡಲು ಹೋಗುತ್ತಿದ್ದರು. ಅಷ್ಟರಲ್ಲಿ ಫೋನ್​ ಬಂದಿದೆ. ಆಗ ಹೀಟರ್​ ನೀರಿಗೆ ಇಡುವ ಬದಲು, ಕಂಕುಳಲ್ಲಿ ಇಟ್ಟುಕೊಂಡು ಸ್ವಿಚ್​ ಆನ್​ ಮಾಡಿದ್ದಾರೆ. ಇದರಿಂದ ವಿದ್ಯುತ್​ ಸ್ಪರ್ಶಿಸಿ ಕೆಳಗೆ ಬಿದ್ದಿದ್ದಾರೆ.

ಸಮೀಪದಲ್ಲೇ ಇದ್ದ ಅವರ ಒಂಬತ್ತು ವರ್ಷದ ಮಗಳು ಶಬನ್ಯಾ ಭಯದಿಂದ ಕಿರುಚುತ್ತಾ ಓಡಿ ಬಂದಿದ್ದಾಳೆ. ಗಾಬರಿಗೊಂಡ ಪತ್ನಿ ದುರ್ಗಾದೇವಿ ಹಾಗೂ ಸ್ಥಳೀಯರು ಮಹೇಶ್​ ಬಾಬು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದಾಗಲೇ ಮಹೇಶ್​ ಬಾಬು ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮಹೇಶ್​ ಬಾಬು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ" ಎಂದು ತಿಳಿಸಿದರು.

ಇದನ್ನೂ ಓದಿ: ರೈಲಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಮೂವರು: ಪತ್ನಿಯ ಕಣ್ಣೆದುರೇ ಪತಿ, ಇಬ್ಬರು ಪುತ್ರಿಯರ ಸಾವು! - Husband and two daughters died

ETV Bharat Logo

Copyright © 2024 Ushodaya Enterprises Pvt. Ltd., All Rights Reserved.