ಜಮ್ಮು: ಕಣಿವೆ ರಾಜ್ಯದಲ್ಲಿ ಇತ್ತೀಚಿಗೆ ಉಗ್ರರ ಉಪಟಳ ಹೆಚ್ಚುತ್ತಿದ್ದು, ಎನ್ಕೌಂಟರ್ನಂತಹ ಕಾರ್ಯಾಚರಣೆಗಳು ವರದಿಯಾಗುತ್ತಿವೆ. ಈ ಕಾರ್ಯಾಚರಣೆಯಲ್ಲಿ ಕೆಲ ಯೋಧರು ಹುತಾತ್ಮರಾಗಿದ್ದರೆ, ಮತ್ತೆ ಕೆಲವರು ಗಾಯಗೊಂಡಿದ್ದಾರೆ. ಈ ಭಯೋತ್ಪಾದಕರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
''ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಹೆಚ್ಚುತ್ತಿದೆ. ಜಮ್ಮು ಮತ್ತು ಉತ್ತರ ಕಾಶ್ಮೀರದ ಕುಪ್ವಾರಾ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ದಾಳಿಯ ಹಿಂದೆ ಪಾಕಿಸ್ತಾನಿ ಸೇನೆಯ ಎಸ್‌ಎಸ್‌ಜಿ ಕಮಾಂಡೋಗಳ ಕೈವಾಡವಿದೆ'' ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶೇಶ್ ಪಾಲ್ ವೈದ್ ಸೋಮವಾರ ಆರೋಪಿಸಿದ್ದಾರೆ.
1. Allegedly SSG General Officer Commanding (GOC) Maj General Adil Rehmani is conducting the attacks in Jammu region.
— Amjad Ayub Mirza (@AMirza86155555) July 27, 2024
2. one whole SSG battalion is said to have infiltrated that means at least 600 commandos are in Kupwara region and else where.
3. local jihadi sleeper cells… pic.twitter.com/ZI1yz63GdP
"ಕಳೆದ ಕೆಲವು ದಿನಗಳಿಂದ ಜಮ್ಮು ಪ್ರದೇಶದಲ್ಲಿ ಉಗ್ರರ ದಾಳಿಗಳು ಹೆಚ್ಚಾಗಿವೆ. ಮತ್ತು ಕುಪ್ವಾರದಲ್ಲಿ ಇದೇ ರೀತಿಯ ಪರಿಸ್ಥಿತಿ ಇದೆ. ಪಾಕಿಸ್ತಾನದ ಎಸ್‌ಎಸ್‌ಜಿ ಜನರಲ್ ಆಫೀಸರ್ ಕಮಾಂಡಿಂಗ್ ಆದಿಲ್ ರೆಹಮಾನಿ ಈ ದಾಳಿಯ ಹಿಂದೆ ಇದ್ದಾರೆ. ಈ ಕಾರ್ಯಾಚರಣೆಗಳಿಗಾಗಿ 600 SSG ಕಮಾಂಡೋಗಳನ್ನು ಮೀಸಲಿಡಲಾಗಿದೆ. ಮತ್ತು ಅನೇಕರು ಈಗಾಗಲೇ ಭಾರತದ ಭೂಪ್ರದೇಶಕ್ಕೆ ನುಸುಳಿದ್ದಾರೆ" ಎಂದು ವೈದ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ತಿಳಿಸಿದ್ದಾರೆ.
"ಅವರು ಸ್ಥಳೀಯ ಜಿಹಾದಿ ಸೆಲ್‌ಗಳನ್ನು ಸಕ್ರಿಯಗೊಳಿಸಿದ್ದಾರೆ. ಎರಡು ಬೆಟಾಲಿಯನ್ ವಿಶೇಷ ಕಮಾಂಡೋಗಳು ಭಾರತದ ಪ್ರದೇಶವನ್ನು ಪ್ರವೇಶಿಸಲು ಪಾಕಿಸ್ತಾನದ ಗಡಿಯಲ್ಲಿ ಕಾಯುತ್ತಿದ್ದಾರೆ'' ಎಂದು 2016ರಿಂದ 2018 ರ ವರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರನ್ನು ಮುನ್ನಡೆಸಿದ್ದ ಮಾಜಿ ಡಿಜಿಪಿ ವೈದ್ ಹೇಳಿದರು. "ಯುದ್ಧದ ಕೃತ್ಯ ಮತ್ತು ಭಾರತವು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಬೇಕಾಗಿದೆ" ಎಂದು ಸಲಹೆ ನೀಡಿದರು.
Reportedly, Pakistan's top army commanders are behind the recent attacks in Jammu region. It is no surprise the precision with which these attacks are taking place. It is an act of war and India needs to respond accordingly. Ab Nahi Sahega Hindustan. pic.twitter.com/ErxP8S9g32
— Shesh Paul Vaid (@spvaid) July 29, 2024
ಈ ತಿಂಗಳ ಆರಂಭದಲ್ಲಿ ಈಟಿವಿ ಭಾರತ ಜೊತೆಗೆ ಮಾತನಾಡಿದ್ದ ವೈದ್, ಹೆಚ್ಚುತ್ತಿರುವ ಉಗ್ರಗಾಮಿ ದಾಳಿಗಳು, ವಿಶೇಷವಾಗಿ ಜಮ್ಮು ಪ್ರದೇಶದಲ್ಲಿ ಭದ್ರತಾ ಲೋಪದಿಂದ ಸಂಭವಿಸಿವೆ ಎಂಬ ಹೇಳಿಕೆಗಳನ್ನು ನಿರಾಕರಿಸಿದ್ದರು. ಹೆಚ್ಚುತ್ತಿರುವ ಉಗ್ರಗಾಮಿ ದಾಳಿಗಳಿಗೆ ಹಲವಾರು ಕಾರಣಗಳಿವೆ'' ಎಂದಿದ್ದರು.
''ಈ ಪ್ರದೇಶದಲ್ಲಿ ಭದ್ರತಾ ಪಡೆಗಳ ವಿರುದ್ಧ ಆಕ್ರಮಣ ಮಾಡಲು ಆಳವಾದ ಪಾಕಿಸ್ತಾನದ ಬದಲಾವಣೆ ಮತ್ತು ಆರ್ಟಿಕಲ್ 370 ರದ್ದಾದ ವಿಚಾರ ಕಾರಣವಾಗಿದೆ. ಇದು ಜಮ್ಮು ಪ್ರಾಂತ್ಯದಲ್ಲಿ ಉಗ್ರಗಾಮಿಗಳು ಸಕ್ರಿಯವಾಗಿರುವುದಕ್ಕೆ ಭದ್ರತಾ ಲೋಪ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಜಮ್ಮು ಪ್ರದೇಶದಲ್ಲಿ ವಿಶೇಷವಾಗಿ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಮತ್ತು ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳು ಚಿಕ್ಕ ದಾಳಿಗಳನ್ನು ನಡೆಸುತ್ತಿದ್ದಾರೆ'' ಎಂದು ಮಾಜಿ ಡಿಜಿಪಿ ತಿಳಿಸಿದ್ದರು.