ನವದೆಹಲಿ: ಉದ್ಯೋಗಗಳ ಸ್ವರೂಪಗಳು ಬದಲಾಗುತ್ತಿದ್ದಂತೆ ಹೊಸ ಪೀಳಿಗೆಯ ಮಂದಿಯ ಆಯ್ಕೆ, ಔದ್ಯೋಗಿಕ ದೃಷ್ಟಿಕೋನದಲ್ಲೂ ಬದಲಾವಣೆ ಆಗುತ್ತಿದೆ. ಈ ಕುರಿತು ನಡೆಸಲಾದ ಹೊಸ ಅಧ್ಯಯನದಲ್ಲಿ ಪ್ರತಿಕ್ರಿಯಿಸಿರುವ ಭಾರತೀಯ ಜೆನ್ ಝೆಡ್ (1995- 2010ರ ನಡುವೆ ಜನಿಸಿದವರು), ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯೂರಿಟಿ, ಕಂಟೆಂಟ್ ಕ್ರಿಯೆಷನ್ನಂತಹ ಹೊಸ ಕಾಲಘಟ್ಟದ ಔದ್ಯೋಗಿಕ ಕ್ಷೇತ್ರದಲ್ಲಿ ಒಲವು ಹೊಂದಿರುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ, ಕೆಲಸದ ಯಶಸ್ಸಿಗಾಗಿ ವರ್ಕ್-ಲೈಫ್ ಸಮತೋಲನದ ತ್ಯಾಗಕ್ಕೆ ಶೇ 43ರಷ್ಟು ಮಂದಿ ಸಿದ್ಧ ಎಂದಿದ್ದು, ಶೇ 9ರಷ್ಟು ಮಂದಿ ಉದ್ಯಮದ ಕನಸು ಹೊಂದಿದ್ದಾರೆ. ಇವರು ಉದ್ಯೋಗ ಮತ್ತು ಜೀವನದಲ್ಲಿ ಸ್ಥಿರತೆ, ಭದ್ರತೆ ಅವಶ್ಯಕ ಎಂದು ಹೇಳಿದ್ದಾರೆ.
ನಾಲ್ವರಲ್ಲಿ ಒಬ್ಬ ಭಾರತೀಯ ಹೊಸ ಕಾಲಘಟ್ಟದ ಉದ್ಯೋಗಗಳಾದ ಕಂಟೆಂಟ್ ಕ್ರಿಯೇಷನ್, ಡೇಟಾ ಅನಾಲಿಸಿಸ್, ಎಐ, ಸೈಬರ್ ಸೆಕ್ಯೂರಿಟಿಯಂತಹ ಹೊಸ ಸ್ವರೂಪದ ಉದ್ಯೋಗಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಐಕ್ಯೂಒಒ ಜೊತೆಗೆ ಸೈಬರ್ ಮೀಡಿಯಾ ರಿಸರ್ಚ್ ಈ ಅಧ್ಯಯನ ನಡೆಸಿದೆ. ಐಕ್ಯೂಒಒ ವಿವೋ ಗ್ರೂಪ್‌ನ ಸಬ್ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಿದೆ.
ಜಾಗತಿಕವಾಗಿ ನಡೆದ ಈ ಅಧ್ಯಯನದಲ್ಲಿ ಶೇ 43ರಷ್ಟು ಭಾರತೀಯ ಪೀಳಿಗೆಯ ಜನ ಪ್ರತಿಕ್ರಿಯಿಸಿದರೆ, ಶೇ 46ರಷ್ಟು ಜಗತ್ತಿನ ಇತರೆ ದೇಶಗಳ ಜನರ ಅಭಿಪ್ರಾಯವನ್ನು ಅಧ್ಯಯನ ಹೊಂದಿದೆ. ಇವರೆಲ್ಲಾ ತಮ್ಮ ವೃತ್ತಿಯಲ್ಲಿನ ಯಶಸ್ಸಿಗೆ ವೃತ್ತಿ-ಜೀವನ ಸಮತೋಲನ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೇ, ಶೇ 62ರಷ್ಟು ಭಾರತೀಯ ಯುವಜನತೆ ತಮ್ಮ ಕನಸನ್ನು ಪೂರ್ಣಗೊಳಿಸಲು ಹವ್ಯಾಸ ಮತ್ತು ಇತರೆ ಆಸಕ್ತಿಗಳನ್ನು ತೊರೆಯಲು ಸಿದ್ಧ ಎಂದಿದ್ದಾರೆ.
ಅಮೆರಿಕ, ಬ್ರಿಟನ್, ಮಲೇಷ್ಯಾ, ಬ್ರೆಜಿಲ್ ಮತ್ತು ಭಾರತ ಒಳಗೊಂಡಂತೆ 7 ದೇಶಗಳ 20-24 ವರ್ಷದೊಳಗಿನ 6,700 ಜೆನ್ ಜೆಡ್ ಇಲ್ಲಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಶೇ 19ರಷ್ಟು ಭಾರತೀಯರಿಗೆ ದೊಡ್ಡ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸುವ ಒಲವಿದೆ. ಶೇ 84ರಷ್ಟು ಮಂದಿ ತಮ್ಮ ಗುರಿಯನ್ನು ಉದ್ಯೋಗದ ಮೂಲಕ ಸಾಧಿಸುವ ನಂಬಿಕೆ ಹೊಂದಿದ್ದಾರೆ.
ಪುರುಷರಿಗಿಂತ 2 ಪಟ್ಟು ಲಿಂಗ ತಾರತಮ್ಯ: ಇದೇ ವೇಳೆ ಮಹಿಳೆಯರು, ತಮ್ಮ ಕನಸು ಸಾಕಾರಗೊಳಿಸುವಲ್ಲಿ ಪುರುಷರಿಗಿಂತ ಎರಡು ಪಟ್ಟು ಲಿಂಗ ತಾರತಮ್ಯಕ್ಕೆ ಒಳಗಾಗುತ್ತಿರುವುದಾಗಿ ಅಧ್ಯಯನದಲ್ಲಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಭಾರತದ ಶೇ.77ರಷ್ಟು 'ಜೆನ್ ಝಡ್' ವಿದ್ಯಾರ್ಥಿಗಳಿಗೆ ಟೆಕ್ ಉದ್ಯಮ ಸೇರುವ ಬಯಕೆ