ETV Bharat / bharat

ಹಾಸನ ಸಂಸದರ ವಿರುದ್ಧ ಎನ್​ಸಿಡಬ್ಲ್ಯೂಗೆ ಯಾವುದೇ ಮಹಿಳೆ ದೂರು ಕೊಟ್ಟಿಲ್ಲ: ಕೇಂದ್ರ ಮಹಿಳಾ ಆಯೋಗದ ಸ್ಪಷ್ಟನೆ - Hassan Sex Scandal - HASSAN SEX SCANDAL

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪದಲ್ಲಿ ಯಾವುದೇ ಮಹಿಳೆಯರು ದೂರು ನೀಡಿಲ್ಲ ರಾಷ್ಟ್ರೀಯ ಮಹಿಳಾ ಆಯೋಗ ಸ್ಪಷ್ಟನೆ ನೀಡಿದೆ.

ರಾಷ್ಟ್ರೀಯ ಮಹಿಳಾ ಆಯೋಗ
ರಾಷ್ಟ್ರೀಯ ಮಹಿಳಾ ಆಯೋಗ (Source: File Photo (ETV Bharat))
author img

By ETV Bharat Karnataka Team

Published : May 9, 2024, 8:11 PM IST

ನವದೆಹಲಿ: ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಹಾಸನ ಸಂಸದರ ವಿರುದ್ಧ ಯಾವುದೇ ಸಂತ್ರಸ್ತ ಮಹಿಳೆಯರು ಆಯೋಗಕ್ಕೆ ದೂರು ನೀಡಿಲ್ಲ. ಒಬ್ಬ ಮಹಿಳೆ ತನ್ನ ಮೇಲೆ ಒತ್ತಡ ಹಾಕಿ ಕೇಸ್​ ದಾಖಲಿಸುವಂತೆ ಮಾಡಿದ್ದಾಗಿ ಆರೋಪಿಸಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಗುರುವಾರ ತಿಳಿಸಿದೆ.

ಸಂಸದ ಪ್ರಜ್ವಲ್​ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ದಳ (ಎಸ್​ಐಟಿ) ರಚನೆ ಮಾಡಿ ತನಿಖೆಗೆ ಆದೇಶಿಸಿದೆ. ಈ ಮಧ್ಯೆ ಮಹಿಳಾ ಆಯೋಗವು ಯಾವುದೇ ಸಂತ್ರಸ್ತರು ಆಯೋಗಕ್ಕೆ ಬಂದು ದೂರು ದಾಖಲಿಸಿಲ್ಲ ಎಂದು ತಿಳಿಸಿರುವುದು ಭಾರಿ ಮಹತ್ವ ಪಡೆದುಕೊಂಡಿದೆ.

ಸಂಸದರ ವಿರುದ್ಧದ ತನಿಖೆಯಲ್ಲಿ ಮಹಿಳಾ ಪೊಲೀಸರ ಇರುವಿಕೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ಆಯೋಗ, ಪ್ರಕರಣದ ಸೂಕ್ಷ್ಮತೆ ಮತ್ತು ಕಾಳಜಿ ಬಗ್ಗೆ ಧ್ವನಿ ಎತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡ ವರದಿಯ ಮಹತ್ವದ ವಿಚಾರಗಳನ್ನೂ ರಾಷ್ಟ್ರೀಯ ಮಹಿಳಾ ಆಯೋಗ ಹಂಚಿಕೊಂಡಿದೆ.

ಎನ್‌ಸಿಡಬ್ಲ್ಯೂ ಪ್ರಕಾರ, ಲೈಂಗಿಕ ದೌರ್ಜನ್ಯದ ದೂರುಗಳ ಆಧಾರದ ಮೇಲೆ ಎರಡು ಪ್ರಕರಣಗಳು ದಾಖಲಾಗಿವೆ. ಇನ್ನೊಂದು ಅಪಹರಣ ಕೇಸ್​ ಕೂಡ ದಾಖಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಸಂತ್ರಸ್ತರು ಆಯೋಗಕ್ಕೆ ದೂರು ದಾಖಲಿಸಲು ಮುಂದೆ ಬಂದಿಲ್ಲ ಎಂದು ಅದು ಹೇಳಿದೆ.

ಒಬ್ಬ ಮಹಿಳಾ ದೂರುದಾರರು ಪೊಲೀಸ್​ ಸಮವಸ್ತ್ರದಲ್ಲಿದ್ದ ಮೂವರು ವ್ಯಕ್ತಿಗಳ ಜೊತೆಗೆ ಆಯೋಗದ ಕಚೇರಿಗೆ ಬಂದಿದ್ದರು. ಸಂಸದರ ವಿರುದ್ಧ ದೂರು ದಾಖಲಿಸಲು ತಮ್ಮ ಮೇಲೆ ಒತ್ತಡ ಹೇರುತ್ತಿರುವುದಾಗಿ ಆಪಾದಿಸಿದ್ದಾರೆ. ಸಿವಿಲ್​ ವಸ್ತ್ರದಲ್ಲಿದ್ದವರು ತಮ್ಮನ್ನು ಕರ್ನಾಟಕ ಪೊಲೀಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾಗಿ ತಿಳಿಸಿದ್ದಾರೆ ಎಂದು ಎನ್‌ಸಿಡಬ್ಲ್ಯೂ ಹೇಳಿದೆ.

ತನಗೆ ಹಲವರು ದೂರವಾಣಿ ಕರೆ ಮಾಡಿ ದೂರು ನೀಡಲು ಬೆದರಿಕೆ ಹಾಕುತ್ತಿದ್ದಾರೆ. ಆಕೆಯ ಕುಟುಂಬದ ಯೋಗಕ್ಷೇಮಕ್ಕಾಗಿ ರಕ್ಷಣೆ ಕೋರಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನೂ ಅವರು ತಿಳಿಸಿದ್ದಾಗಿ ಹೇಳಿದೆ.

ಮಾಧ್ಯಮಗಳಲ್ಲಿ 700 ಮಹಿಳೆಯರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಗಿ ವರದಿಗಳು ಪ್ರಕಟವಾಗಿವೆ. ಕೆಲವು ಮಾಧ್ಯಮಗಳು ಇದನ್ನು ತಪ್ಪಾಗಿ ವರದಿ ಮಾಡುತ್ತಿವೆ ಎಂದು ಆಯೋಗವು ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಶಿವಕಾಶಿ ಬಳಿಯ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: ಎಂಟು ಜನರು ಸಾವು, ಸಿಎಂ ಸ್ಟಾಲಿನ್ ಸಂತಾಪ - Firecracker Explosion

ಪೆನ್ ಡ್ರೈವ್ ಹಂಚಿಕೆ ಆರೋಪ: ಸಂಪುಟದಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಕೈಬಿಡಲು ರಾಜ್ಯಪಾಲರಿಗೆ ಜೆಡಿಎಸ್ ದೂರು - JDS complains to Governor

ETV Bharat Logo

Copyright © 2024 Ushodaya Enterprises Pvt. Ltd., All Rights Reserved.