ETV Bharat / bharat

ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ವದಂತಿ: ಸುರೇಶ್ ಗೋಪಿ ಸ್ಪಷ್ಟನೆ ಹೀಗಿದೆ - Suresh Gopi

ಭಾನುವಾರವಷ್ಟೇ ಕೇಂದ್ರದ ನೂತನ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಸುರೇಶ್​ ಗೋಪಿ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

ನೂತನ ಕೇಂದ್ರ ಸಚಿವ ಸುರೇಶ್​ ಗೋಪಿ ರಾಜೀನಾಮೆ ವದಂತಿ
ನೂತನ ಕೇಂದ್ರ ಸಚಿವ ಸುರೇಶ್​ ಗೋಪಿ (ANI)
author img

By ANI

Published : Jun 10, 2024, 4:37 PM IST

ತಿರುವನಂತಪುರಂ(ಕೇರಳ): ಕಮ್ಯುನಿಸ್ಟ್​ ಸಿದ್ಧಾಂತದ ಹಿಡಿತದಲ್ಲಿರುವ ಕೇರಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ ಖ್ಯಾತ ನಟ, ರಾಜಕಾರಣಿ ಸುರೇಶ್​ ಗೋಪಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಸಚಿವರಾಗಿ ಭಾನುವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು. ಇದರ ಬೆನ್ನಲ್ಲೇ, ಅವರನ್ನು ಸಚಿವ ಸ್ಥಾನದಿಂದ ಕೈಬಿಡುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, 'ಇದ್ಯಾವುದೂ ಸತ್ಯವಲ್ಲ' ಎಂದು ನೂತನ ಸಚಿವರೇ ಸ್ಪಷ್ಟನೆ ನೀಡಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸುರೇಶ್​ ಗೋಪಿ ಅವರು ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, "ತಾವು ಸಿನಿಮಾ ರಂಗದಲ್ಲಿ ಮುಂದುವರಿಯಬೇಕಿದ್ದು, ಸಚಿವ ಸ್ಥಾನದ ಬಗ್ಗೆ ನಿರೀಕ್ಷೆ ಹೊಂದಿರಲಿಲ್ಲ. ಸಂಸದನಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುವೆ. ತಮ್ಮನ್ನು ಸಚಿವ ಸ್ಥಾನದಿಂದ ಬಿಡುಗಡೆ ಮಾಡಲೂಬಹುದು" ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು.

ಇದರ ಬಳಿಕ, ಸುರೇಶ್​ ಗೋಪಿ ಅವರಿಗೆ ನೀಡಲಾದ ಸಚಿವ ಸ್ಥಾನವನ್ನು ವಾಪಸ್​ ಪಡೆಯುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಪ್ರತಿಜ್ಞಾ ವಿಧಿ ಸ್ವೀಕರಿಸಿದ ಒಂದೇ ದಿನದ ಬಳಿಕ ಈ ಚರ್ಚೆಗಳು ನಡೆದಿದ್ದವು.

'ರಾಜೀನಾಮೆ ವರದಿ ಸುಳ್ಳು': ತಾವು ರಾಜೀನಾಮೆ ನೀಡುವ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸುರೇಶ್​ ಗೋಪಿ, "ನಾನು ಮೋದಿ ಸರ್ಕಾರದ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಕೆಲವು ಮಾಧ್ಯಮಗಳು ತಪ್ಪಾಗಿ ವರದಿ ಮಾಡುತ್ತಿವೆ. ಇದು ಸುಳ್ಳು ಸುದ್ದಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಅಭಿವೃದ್ಧಿ ಮತ್ತು ಕೇರಳದ ಅಸ್ಮಿತೆಗೆ ಕಠಿಬದ್ಧವಾಗಿದ್ದೇವೆ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

65 ವರ್ಷದ ನಟ ಸುರೇಶ್​ ಗೋಪಿ 18ನೇ ಲೋಕಸಭಾ ಚುನಾವಣೆಯಲ್ಲಿ ಕೇರಳದ ತ್ರಿಶ್ಯೂರ್‌ನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಎದುರಾಳಿಯಾಗಿದ್ದ ಸಿಪಿಎಂ ಅಭ್ಯರ್ಥಿ ವಿ.ಎಸ್.ಸುನೀಲ್‌ ಕುಮಾರ್ ಅವರನ್ನು 74,686 ಮತಗಳ ಅಂತರದಿಂದ ಸೋಲಿಸಿ, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಗೆಲ್ಲಿಸಿದ ಕೀರ್ತಿಗೆ ಪಾತ್ರರಾಗಿದ್ದರು.

ನೂತನ ಸಚಿವರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ನಡೆಸಿದ್ದರು. ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ನಡೆದ ಗೋಪಿ ಅವರ ಮಗಳ ಮದುವೆಯಲ್ಲಿ ಕೂಡ ಭಾಗವಹಿಸಿದ್ದರು.

ಇದನ್ನೂ ಓದಿ: ಕೇರಳದಲ್ಲಿ ಮೊದಲ ಖಾತೆ ತೆರೆದ ಬಿಜೆಪಿ: ನಟ ಸುರೇಶ್​ ಗೋಪಿಗೆ ಭರ್ಜರಿ ಗೆಲುವು - Suresh Gopi Victory

ETV Bharat Logo

Copyright © 2024 Ushodaya Enterprises Pvt. Ltd., All Rights Reserved.