ETV Bharat / bharat

NEET UG ಪರೀಕ್ಷೆಯ OMR ಶೀಟ್ ದುರ್ಬಳಕೆ ಆರೋಪದ ಮನವಿ ಪರಿಶೀಲಿಸಲು ಸುಪ್ರೀಂ ಕೋರ್ಟ್​ ಒಪ್ಪಿಗೆ - NEET UG 2024 case to Supreme Court

author img

By ETV Bharat Karnataka Team

Published : Jul 1, 2024, 10:54 PM IST

NEET UG ಪರೀಕ್ಷೆಯ OMR ಶೀಟ್ ದುರ್ಬಳಕೆ ಆರೋಪದ ಮನವಿಯನ್ನು ಪರಿಶೀಲಿಸಲು ನ್ಯಾಯಮೂರ್ತಿಗಳಾದ ಸಿಟಿ ರವಿಕುಮಾರ್ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಒಪ್ಪಿಕೊಂಡಿದೆ. NEET UG 2024 ಮೇ 5 ರಂದು ನಡೆಯಿತು ಮತ್ತು ಪರೀಕ್ಷೆಯಲ್ಲಿ ಅಕ್ರಮಗಳ ಆರೋಪದ ನಂತರ ಕೇಂದ್ರವು ಸಿಬಿಐ ತನಿಖೆಗೆ ಆದೇಶ ಮಾಡಿತ್ತು.

NEET  SC  RETEST  OMR SHEET NEET  SC  RETEST  OMR SHEET
ಸಾಂದರ್ಭಿಕ ಚಿತ್ರ (ETV Bharat)

ನವದೆಹಲಿ: 2024ರ NEET-UG ಪರೀಕ್ಷೆಯ OMR ಶೀಟ್ ದುರ್ಬಳಕೆಯಾಗಿದೆ ಎಂದು ಆರೋಪಿಸಿರುವ ಮನವಿಯನ್ನು ಎರಡು ವಾರಗಳ ನಂತರ ಪರಿಶೀಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ.

ನ್ಯಾಯಮೂರ್ತಿಗಳಾದ ಸಿಟಿ ರವಿಕುಮಾರ್ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಜೂನ್ 23ರಂದು ಪರೀಕ್ಷೆ (ಮರು ಪರೀಕ್ಷೆ) ಮುಗಿದಿದೆ ಎಂದು ಅರ್ಜಿದಾರರ ವಕೀಲರಿಗೆ ತಿಳಿಸಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಂಡಿದ್ದ ತನ್ನ ಕಕ್ಷಿದಾರನ OMR ಶೀಟ್ ಅನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ವಕೀಲರು ಹೇಳಿದ್ದಾರೆ.

ಜೂನ್ 23 ರಂದು ನಡೆದ ಮರು ಪರೀಕ್ಷೆಗೆ ಹಾಜರಾಗಲು ತಮ್ಮ ಕಕ್ಷಿದಾರರು ಅನುಮತಿ ಕೋರುತ್ತಿದ್ದಾರೆ ಎಂದು ಪೀಠವು ವಕೀಲರಿಗೆ ತಿಳಿಸಿದೆ. ಎರಡು ವಾರಗಳ ನಂತರ ಈ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ವಕೀಲರು ನ್ಯಾಯಾಲಯವನ್ನು ಕೋರಿದರು. ಅಕ್ರಮಗಳ ಆರೋಪ ಮತ್ತು NEET-UG ರದ್ದು ಕೋರಿ ಸಲ್ಲಿಸಲಾದ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ ಎಂದು ನ್ಯಾಯಾಲಯದ ಮುಂದೆ ವಾದ ಮಂಡಿಸಿದರು.

ಮುಂದಿನ ವಾರ ವಿಚಾರಣೆಗೆ ಅರ್ಜಿಯನ್ನು ಪಟ್ಟಿ ಮಾಡುವುದಾಗಿ ಪೀಠ ತಿಳಿಸಿದೆ. ಸುಪ್ರೀಂ ಕೋರ್ಟ್ ಎರಡು ವಾರಗಳ ನಂತರ ವಿಚಾರಣೆಗೆ ಒಪ್ಪಿಗೆ ನೀಡಿದೆ. ಕಳೆದ ವಾರ, ಸುಪ್ರೀಂ ಕೋರ್ಟ್, ಪ್ರತ್ಯೇಕ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, 2024ರ NEET-UG ಪರೀಕ್ಷೆಯಲ್ಲಿ ಹಾಜರಾದ ಅಭ್ಯರ್ಥಿಗಳಿಗೆ ಒದಗಿಸಲಾದ OMR ಶೀಟ್‌ಗಳ ಬಗ್ಗೆ ಕುಂದು ಕೊರತೆಗಳನ್ನು ಎತ್ತಲು ಯಾವುದೇ ಸಮಯದ ಮಿತಿ ಇದೆಯೇ ಎಂದು ತಿಳಿಸಲು NTAಗೆ ಕೇಳಿತ್ತು.

ಪರೀಕ್ಷೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಇತರ ಅರ್ಜಿಗಳು ಜುಲೈ 8 ರಂದು ವಿಚಾರಣೆಗೆ ಬರಲಿವೆ. ಮೇ 5 ರಂದು ನಡೆದ 2024ರ NEET UG ಪರೀಕ್ಷೆಯ ಪೇಪರ್ ಸೋರಿಕೆ ಸೇರಿದಂತೆ ಅಕ್ರಮಗಳ ಆರೋಪಗಳು ಕೇಳಿ ಬಂದಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದ್ದು, ಈಗಾಗಲೇ ಎನ್‌ಟಿಎ ಮಹಾನಿರ್ದೇಶಕರನ್ನು ವಜಾಗೊಳಿಸಿದೆ.

ಇದನ್ನೂ ಓದಿ: 'ಆಪ್ ಹಿಂದೂ ಹೋ ಹಿ ನಹೀ' ಹೇಳಿಕೆ ವಿಚಾರ: ಕ್ಷಮೆಯಾಚನೆಗೆ ಬಿಜೆಪಿ ಪಟ್ಟು: ನೀಟ್ ಪರೀಕ್ಷೆ ಶ್ರೀಮಂತ ವಿದ್ಯಾರ್ಥಿಗಳಿಗೆ, ಪ್ರತಿಭಾವಂತರಿಗೆ ಅಲ್ಲ: ರಾಗಾ - Rahul Gandhi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.