ETV Bharat / bharat

ಕೇಂದ್ರದ ಎನ್​ಸಿಎಸ್​ ಪೋರ್ಟಲ್​ನಲ್ಲಿ 20ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶ! - National Career Service portal

12ನೇ ತರಗತಿ ಅಥವಾ ದ್ವಿತೀಯ ಪಿಯುಸಿ, ಐಟಿಐ ಮತ್ತು ಡಿಪ್ಲೊಮಾ ಪದವಿ ವಿದ್ಯಾರ್ಹತೆ ಹೊಂದಿರುವವರು ಈ ಪೋರ್ಟಲ್​ನಲ್ಲಿ ಉದ್ಯೋಗ ಪಡೆಯಬಹುದಾಗಿದೆ.

National Career Service portal has surpassed 20 lakh active vacancies.
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Jul 31, 2024, 12:18 PM IST

ನವದೆಹಲಿ: ವಿವಿಧ ವಲಯಗಳಲ್ಲಿ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗಾವಕಾಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಸ್ಥಾಪಿತವಾಗಿರುವ ಕೇಂದ್ರ ಸರ್ಕಾರ ಉದ್ಯೋಗ ವಿನಿಮಯ ತಾಣ ರಾಷ್ಟ್ರೀಯ ವೃತ್ತಿ ಸೇವೆ (ಎನ್​ಸಿಎಸ್​) ಪೋರ್ಟ್​ಲ್​ನಲ್ಲಿ 20 ಲಕ್ಷಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇವೆ.

ಪ್ರಸ್ತುತ ಎನ್​ಸಿಎಸ್​ ಪೋರ್ಟಲ್​ನಲ್ಲಿ ವಿವಿಧ ವಲಯಗಳ ಉದ್ಯೋಗ ಅವಕಾಶಗಳು ಲಭ್ಯವಿದೆ. ಇದರಲ್ಲಿ ಹಣಕಾಸು ಮತ್ತು ವಿಮೆಯಲ್ಲಿ 14.7 ಲಕ್ಷ, ಕಾರ್ಯಾಚರಣೆ ಮತ್ತು ಬೆಂಬಲದಲ್ಲಿ 1.08 ಲಕ್ಷ ಮತ್ತು ಇತರೆ ಸಕ್ರಿಯ ಸೇವೆಯಲ್ಲಿ 0.75 ಲಕ್ಷ ಉದ್ಯೋಗಗಳ ಲಭ್ಯತೆ ಇದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಉತ್ಪಾದನೆಯಲ್ಲಿ 0.71ಲಕ್ಷ, ಸಾರಿಗೆ ಮತ್ತು ಸಂಗ್ರಹಣೆಯಲ್ಲಿ 0.59ಲಕ್ಷ, ಐಟಿ ಮತ್ತು ಕಮ್ಯೂನಿಕೇಷನ್​ನಲ್ಲಿ 0.58 ಲಕ್ಷ, ಶಿಕ್ಷಣದಲ್ಲಿ 0.43 ಲಕ್ಷ, ಸಗಟು ಮತ್ತು ಚಿಲ್ಲರೆಯಲ್ಲಿ 0.25 ಲಕ್ಷ ಮತ್ತು ಆರೋಗ್ಯದಲ್ಲಿ 0.2 ಲಕ್ಷ ಸೇರಿದಂತೆ ಮುಂತಾದ ಉದ್ಯೋಗಗಳ ಲಭ್ಯತೆ ಇದೆ.

ಈ ವಿವಿಧ ವಲಯದ ಉದ್ಯೋಗ ಲಭ್ಯತೆಯು ಉದ್ಯೋಗದ ಅವಶ್ಯಕತೆ ಮತ್ತು ಉದ್ಯಮದ ಬೇಡಿಕೆಯ ವಿಶಾಲ ವ್ಯಾಪ್ತಿಯನ್ನು ನೀಡುತ್ತದೆ ಎಂದು ಸಚಿವಾಲಯ ತಿಳಿಸಿದೆ.

12ನೇ ತರಗತಿ ಅಥವಾ ದ್ವಿತೀಯ ಪಿಯುಸಿ, ಐಟಿಐ ಮತ್ತು ಡಿಪ್ಲೊಮಾ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಈ ಉದ್ಯೋಗಗಳು ಸರಿ ಹೊಂದುತ್ತವೆ. ಉನ್ನತ ಶಿಕ್ಷಣ ಅಥವಾ ಇತರ ಪರಿಣಿತ ಅರ್ಹತೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ವಿಶೇಷ ಸ್ಥಾನಗಳು ಸಹ ಲಭ್ಯ ಇವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಎನ್​ಸಿಎಸ್​ ತಾಣವು ಉದ್ಯೋಗ ಹುಡುಕುವವರಿಗೆ ಉದ್ಯೋಗದ ಮಾಹಿತಿ ನೀಡುವ ಪ್ರಮುಖ ಮೂಲವಾಗಿದೆ. ಇದರಲ್ಲಿ ನೇರವಾಗಿ ನೋಂದಣಿ ಮಾಡಿಕೊಳ್ಳುವ ಮೂಲಕ ಉದ್ಯೋಗದಾತರಿಂದ ನೇರ ಕೆಲಸ, ಉದ್ಯೋಗ ಮೇಳ ಮಾಹಿತಿ ಜೊತೆಗೆ ಹಲವಾರು ಖಾಸಗಿ ಉದ್ಯೋಗ ಪೋರ್ಟಲ್‌ಗಳೊಂದಿಗೆ ಎಪಿಐ ಏಕೀಕರಣ ಸೇರಿದಂತೆ ವಿವಿಧ ವಾಹಿನಿಗಳ ಮೂಲಕ ಖಾಲಿ ಹುದ್ದೆಗಳ ಕುರಿತು ಮಾಹಿತಿ ನೀಡಲಾಗುವುದು.

ಎನ್​ಸಿಎಸ್​ ಪೋರ್ಟಲ್​ಗೆ ಎಐ ಸೇರಿದಂತೆ ಮುಂದುವರೆದ ತಂತ್ರಜ್ಞಾನದ ಮೂಲಕ ಎನ್​ಸಿಎಸ್​2.0ಗೆ ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಪ್ರಯೋಜನ ನೀಡಲಾಗುತ್ತಿದೆ.

ಈ ವಾರ ಸಂಸತ್​ನಲ್ಲಿ ಮಂಡಿಸಿದ ದತ್ತಾಂಶದ ಪ್ರಕಾರ, 15 ರಿಂದ 29 ವರ್ಷದೊಳಗಿನ ಭಾರತದ ಯುವ ಜನತೆಯಲ್ಲಿನ ನಿರುದ್ಯೋಗ ದರವು ಕಳೆದ ಐದು ವರ್ಷದಿಂದ ಇಳಿಕೆ ಕಾಣುತ್ತಿದೆ. 2017-18ರಲ್ಲಿ 17.8ರಷ್ಟಿದ್ದ ನಿರುದ್ಯೋಗ ಪ್ರಮಾಣ 2023-24ರಲ್ಲಿ ಶೇ 10ರಷ್ಟಿದೆ. (ಐಎಎನ್​ಎಸ್​)

ಇದನ್ನೂ ಓದಿ: ಹದಗೆಟ್ಟ ವ್ಯವಸ್ಥೆ ವಿರುದ್ಧ ಹೋರಾಡಲು ಬಯಸಿದ್ದವಳೇ ವ್ಯವಸ್ಥೆಗೆ ಬಲಿಯಾದಳು": IAS ಕೋಚಿಂಗ್​​​​​ ಸೆಂಟರ್​​​​ಗಳ ಕಥೆ- ವ್ಯಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.