ETV Bharat / bharat

'ಮುಖ್ತಾರ್ ಅನ್ಸಾರಿಗೆ ಜೈಲಿನಲ್ಲಿ ಸ್ಲೋ ಪಾಯಿಸನಿಂಗ್': ಪುತ್ರನಿಂದ ಗಂಭೀರ ಆರೋಪ - Mukhtar Ansari - MUKHTAR ANSARI

ಮುಖ್ತಾರ್ ಅನ್ಸಾರಿ ಅವರಿಗೆ ಜೈಲಿನಲ್ಲಿ ಸ್ಲೋ ಪಾಯಿಸನಿಂಗ್ ಮಾಡಲಾಗಿದೆ ಎಂದು ಅವರ ಪುತ್ರ ಉಮರ್ ಅನ್ಸಾರಿ ಆರೋಪಿಸಿದ್ದಾರೆ.

Mukhtar Ansari
Mukhtar Ansari
author img

By ETV Bharat Karnataka Team

Published : Mar 29, 2024, 1:34 PM IST

ಬಂಡಾ (ಉತ್ತರ ಪ್ರದೇಶ): ಮುಖ್ತಾರ್ ಅನ್ಸಾರಿ ಅವರಿಗೆ ಜೈಲಿನಲ್ಲಿ ನಿಧಾನ ವಿಷಪ್ರಾಶನ ಮಾಡಿಸಲಾಗಿತ್ತು (ಸ್ಲೋ ಪಾಯಿಸನಿಂಗ್) ಎಂದು ಮೃತ ರಾಜಕಾರಣಿಯ ಪುತ್ರ ಉಮರ್ ಅನ್ಸಾರಿ ಶುಕ್ರವಾರ ಮುಂಜಾನೆ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಭೂಗತ ಪಾತಕಿ ಮುಖ್ತಾರ್ ಅನ್ಸಾರಿ ಗುರುವಾರ ಸಂಜೆ ಬಂಡಾ ಜೈಲಿನಲ್ಲಿ ಕುಸಿದು ಬಿದ್ದಿದ್ದರು. ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದಾಗ ಗುರುವಾರ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.

ಜೈಲಿನಲ್ಲಿ ತಮ್ಮ ಸಹೋದರನಿಗೆ 'ಸ್ಲೋ ಪಾಯಿಸನ್' ನೀಡಲಾಗಿದೆ ಎಂದು ಘಾಜಿಪುರ ಸಂಸದರೂ ಆಗಿರುವ ಮುಖ್ತಾರ್ ಅವರ ಸಹೋದರ ಅಫ್ಜಲ್ ಅನ್ಸಾರಿ ಕೂಡ ಆರೋಪಿಸಿದ್ದಾರೆ.

"ಜೈಲಿನಲ್ಲಿ ಆಹಾರದಲ್ಲಿ ವಿಷಕಾರಿ ವಸ್ತುವನ್ನು ಬೆರೆಸಿ ತಮಗೆ ನೀಡಲಾಗಿದೆ ಎಂದು ಮುಖ್ತಾರ್ ಹೇಳಿದ್ದರು. ಇಂಥ ಘಟನೆ ಎರಡನೇ ಬಾರಿಗೆ ಸಂಭವಿಸಿದೆ. ಸುಮಾರು 40 ದಿನಗಳ ಹಿಂದೆಯೂ ಅವರಿಗೆ ವಿಷ ನೀಡಲಾಗಿತ್ತು. ಇತ್ತೀಚೆಗೆ ಮಾರ್ಚ್ 19 ರಂದು ಮತ್ತು ಮಾರ್ಚ್ 22 ರಂದು ಅವರಿಗೆ ಮತ್ತೆ ಈ ವಿಷ ನೀಡಲಾಯಿತು. ಇದರಿಂದಾಗಿಯೇ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು" ಎಂದು ಅಫ್ಜಲ್ ಅನ್ಸಾರಿ ಹೇಳಿದರು.

ಮಾರ್ಚ್ 21 ರಂದು ಬಾರಾಬಂಕಿ ನ್ಯಾಯಾಲಯದಲ್ಲಿ ಪ್ರಕರಣದ ವರ್ಚುವಲ್ ವಿಚಾರಣೆಯ ಸಮಯದಲ್ಲಿ, ಮುಖ್ತಾರ್ ಅವರ ವಕೀಲರು ತಮ್ಮ ಕಕ್ಷಿದಾರರಿಗೆ ಜೈಲಿನಲ್ಲಿ ನಿಧಾನ ವಿಷ ನೀಡಲಾಗಿದೆ. ಇದರಿಂದಾಗಿ ಅವರ ಸ್ಥಿತಿ ಹದಗೆಡುತ್ತಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ಅಫ್ಜಲ್ ಅನ್ಸಾರಿ ಹೇಳಿದರು.

ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಕೂಡ ಈ ಆರೋಪಗಳಿಗೆ ಧ್ವನಿಗೂಡಿಸಿದ್ದಾರೆ. "ಮಾಜಿ ಶಾಸಕನಿಗೆ ವಿಷಪ್ರಾಶನ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳ ಹೊರತಾಗಿಯೂ ರಾಜ್ಯ ಸರ್ಕಾರವು ಅವರಿಗೆ ಚಿಕಿತ್ಸೆ ನೀಡುವ ಬಗ್ಗೆ ಗಮನ ಹರಿಸಲಿಲ್ಲ. ಇದು ಖಂಡನೀಯ ಮತ್ತು ವಿಷಾದನೀಯ" ಎಂದು ಓವೈಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭೂಗತ ಪಾತಕಿ ಮುಖ್ತಾರ್ ಅನ್ಸಾರಿ ಸಾವಿನ ನಂತರ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ 144ನೇ ಕಲಂ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಮೂಲಕ ದೊಡ್ಡ ಮಟ್ಟದ ಸಭೆ - ಸಮಾರಂಭ ಆಯೋಜಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ರಾಜ್ಯದ ಬಂಡಾ, ಮೌ, ಗಾಜಿಪುರ ಮತ್ತು ವಾರಣಾಸಿ ಜಿಲ್ಲೆಗಳಲ್ಲಿ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದೆ. ಅನ್ಸಾರಿ ಹಲವಾರು ಬಾರಿ ಮೌ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಅನ್ಸಾರಿ ಅವರ ನಿಧನಕ್ಕೆ ಸಮಾಜವಾದಿ ಪಕ್ಷ ಸಂತಾಪ ಸೂಚಿಸಿದೆ. "ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಅವರು ನಿಧನರಾಗಿರುವುದು ದುಃಖದ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದುಃಖಿತ ಕುಟುಂಬ ಸದಸ್ಯರಿಗೆ ಈ ಅಪಾರ ನೋವನ್ನು ಭರಿಸುವ ಶಕ್ತಿ ಸಿಗಲಿ. ವಿನಮ್ರ ಶ್ರದ್ಧಾಂಜಲಿ" ಎಂದು ಪಕ್ಷವು ಎಕ್ಸ್ ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದೆ.

"ಕೆಲವು ದಿನಗಳ ಹಿಂದೆ ತಮಗೆ ಜೈಲಿನಲ್ಲಿ ವಿಷಪ್ರಾಶನ ಮಾಡಲಾಗಿದೆ ಎಂದು ಅವರು ದೂರು ನೀಡಿದ್ದರು. ಆದರೂ ಅದನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ. ಮೇಲ್ನೋಟಕ್ಕೆ ಇದು ಸಮರ್ಥನೀಯವಾಗಿಲ್ಲ ಮತ್ತು ಮಾನವೀಯ ಎಂದು ತೋರುವುದಿಲ್ಲ. ಇಂತಹ ಗಂಭೀರ ಪ್ರಕರಣಗಳು ಮತ್ತು ಘಟನೆಗಳನ್ನು ಸಾಂವಿಧಾನಿಕ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಗಮನಿಸಬೇಕು" ಎಂದು ಬಿಹಾರದ ಮಾಜಿ ಸಿಎಂ ತೇಜಸ್ವಿ ಯಾದವ್ ಎಕ್ಸ್​ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ವಾರಣಾಸಿಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯವು 34 ವರ್ಷಗಳ ಹಳೆಯ ನಕಲಿ ಶಸ್ತ್ರಾಸ್ತ್ರ ಪರವಾನಗಿ ಪ್ರಕರಣದಲ್ಲಿ ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸರ್ಕಾರಿ ವಕೀಲರ ಪ್ರಕಾರ, ಅನ್ಸಾರಿ ಬಂಡಾ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗಿದ್ದರು. ಪೊಲೀಸ್ ಅಧಿಕಾರಿಗಳ ಪ್ರಕಾರ, ಅನ್ಸಾರಿ ವಿರುದ್ಧ ಉತ್ತರ ಪ್ರದೇಶ, ಪಂಜಾಬ್, ನವದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಸುಮಾರು 60 ಪ್ರಕರಣಗಳು ಬಾಕಿ ಉಳಿದಿವೆ.

ಇದನ್ನೂ ಓದಿ : ಹೃದಯಾಘಾತದಿಂದ ಮಾಫಿಯಾ ಡಾನ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.