ETV Bharat / bharat

25 ಕೋಟಿಯ ಕೇರಳ ಬಂಪರ್​ ಲಾಟರಿ; ಕರ್ನಾಟಕದ ವ್ಯಕ್ತಿಗೆ ಒಲಿದ ಅದೃಷ್ಟ

ಲಾಟರಿ ವಿಜೇತರು ಲಾಟರಿ ಇಲಾಖೆಗೆ ತಮ್ಮ ಟಿಕೆಟ್​ ಸಂದಾಯ ಮಾಡಿ ಬಹುಮಾನದ ಮೊತ್ತವನ್ನು ತೆಗೆದುಕೊಂಡು ಹೋಗಬೇಕಿದೆ ಎಂದು ಲಾಟರಿ ಇಲಾಖೆ ಹೇಳಿದೆ.

author img

By ETV Bharat Karnataka Team

Published : 2 hours ago

Updated : 31 minutes ago

much awaited Kerala Thiruvonam Bumper Lottery  winners is Wayanad Resident
ತಿರುವೋಣಂ ಬಂಪರ್ ಲಾಟರಿ (ಈಟಿವಿ ಭಾರತ್​​)

ತಿರುವನಂತಪುರಂ: ಕೇರಳದ ಬಹು ನಿರೀಕ್ಷಿತ ತಿರುವೋಣಂ ಬಂಪರ್ ಲಾಟರಿ ಡ್ರಾ ಬುಧವಾರ ಮಧ್ಯಾಹ್ನ ನಡೆದಿದೆ. ಒಟ್ಟಾರೆ 500 ಮೌಲ್ಯದ ಟಿಕೆಟ್​ಗಳಲ್ಲಿ ಅತ್ಯಧಿಕ ಮೊತ್ತದ ಬಹುಮಾನ 25 ಕೋಟಿ ರೂ. ಆಗಿದೆ. ಇನ್ನು ಎರಡನೇ ಬಹುಮಾನದ ರೂಪವಾಗಿ ತಲಾ 20 ಮಂದಿಗೆ 2 ಕೋಟಿ ಬಹುಮಾನ ನೀಡಲಾಗುತ್ತಿದೆ. ಮೂರನೇ ಬಹುಮಾನ ತಲಾ 20 ಮಂದಿಗೆ 50 ಲಕ್ಷ ನಗದು ಬಹುಮಾನವನ್ನು ಹೊಂದಿದೆ.

ಬುಧವಾರ ಮಧ್ಯಾಹ್ನ ನಡೆದ ಲಕ್ಕಿ ಡ್ರಾ: ರಾಜ್ಯದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಬುಧವಾರ ಮಧ್ಯಾಹ್ನ 2 ಗಂಟೆಗೆ ಈ ಡ್ರಾ ನಡೆಸಿ, ಪ್ರಥಮ ಬಹುಮಾನ ವಿಜೇತರನ್ನು ಘೋಷಣೆ ಮಾಡಿದರು. ಎರಡನೇ ಬಹುಮಾನ ವಿಜೇತರನ್ನು ಶಾಸಕ ವಿಕೆ ಪ್ರಶಾಂತ್​ ಆಯ್ಕೆ ಮಾಡಿದರು. ಒಟ್ಟಾರೆ ಬಹುಮಾನದ ಮೊತ್ತ 125.54 ಕೋಟಿಯಾಗಿದೆ. ತಿರುವೋಣಂ ಬಂಪರ್​ ಲಾಟರಿಯಲ್ಲಿ ಒಟ್ಟು 8 ಮಿಲಿಯನ್​ ಟಿಕೆಟ್​ ಗಳನ್ನು ಮುದ್ರಣ ಮಾಡಲಾಗಿತ್ತು. ಮಂಗಳವಾರ ಸಂಜೆವರೆಗೆ 7,135,938 ಟಿಕೆಟ್‌ಗಳು ಮಾರಾಟವಾಗಿದ್ದವು.

ಪಾಲಕ್ಕಾಡ್​ನಲ್ಲಿ ಅತಿ ಹೆಚ್ಚು ಟಿಕೆಟ್​ಗಳ ಮಾರಾಟ: ರಾಜ್ಯದಲ್ಲಿ ಅತಿ ಹೆಚ್ಚು ಟಿಕೆಟ್​ ಪಾಲಕ್ಕಾಡ್​ ಜಿಲ್ಲೆಯಲ್ಲಿ ಮಾರಾಟವಾಗಿತ್ತು. ಇಲ್ಲಿ 13,02,680 ಟಿಕೆಟ್​ ಮಾರಾಟ ಮಾಡಲಾಗಿತ್ತು. ತಿರುವನಂತಪುರಂನಲ್ಲಿ 9,46,260 ಟಿಕೆಟ್​ ಮತ್ತು ತ್ರಿಸ್ಸೂರ್​ನಲ್ಲಿ 8,61,000 ಟಿಕೆಟ್​ ಮಾರಾಟವಾಗಿದ್ದವು. ಟಿಕೆಟ್​ ಡ್ರಾ ಆಗುವ ಕೆಲವು ನಿಮಿಷಗಳ ವರೆಗೂ ಈ ಟಿಕೆಟ್​ಗಳ​ ಮಾರಾಟ ನಡೆದಿತ್ತು.

ಕರ್ನಾಟಕದ ವ್ಯಕ್ತಿಗೆ ಬಂಪರ್​ ಲಾಟರಿ: ಇನ್ನು ಈ ಟಿಕೆಟ್​ನ ಬಂಪರ್​ ಮೊತ್ತದ ಬಹುಮಾನವೂ ವಯನಾಡಿನ ಬತ್ತೇರಿಯಲ್ಲಿರುವ ಎನ್‌ಜಿಆರ್ ಲಾಟರಿ ಮಾರಾಟ ಮಾಡಿದ ಟಿಕೆಟ್‌ಗೆ ಬಹುಮಾನ ಬಂದಿದೆ. ಈ ಲಾಟರಿಯು ಕರ್ನಾಟಕದ ಮಂಡ್ಯ ಜಿಲ್ಲೆಯ ವ್ಯಕ್ತಿಗೆ ಒಲಿದು ಬಂದಿದೆ ಎಂದು ವರದಿಯಾಗಿದೆ. ಲಾಟರಿ ವಿಜೇತರು, ಡ್ರಾಗೊಂಡಿರುವ ಟಿಕೆಟ್​ ನಂಬರ್ ನೊಂದಿಗೆ ದಾಖಲೆ ಒದಗಿಸಿ ಬಹುಮಾನ ಪಡೆದುಕೊಳ್ಳಬಹುದು ಎಂದುರಾಜ್ಯ ಲಾಟರಿ ಇಲಾಖೆ ತಿಳಿಸಿದೆ. ಬಹುಮಾನ ಪಡೆದ ಅದೃಷ್ಟವಂತರು, ಲಾಟರಿ ಮೊತ್ತದ ಶೇ 10ರಷ್ಟನ್ನು ಸರ್ಕಾರಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ.

ಈ ಕಾರ್ಯಕ್ರಮದಲ್ಲಿ ರಾಜ್ಯ ಲಾಟರಿ ಇಲಾಖೆ ನಿರ್ದೇಶಕ ಅಬ್ರಹಾಂ ರೆನ್, ಜಂಟಿ ನಿರ್ದೇಶಕಿ (ಆಡಳಿತ) ಮಾಯಾ ಎನ್.ಪಿಳ್ಳೈ, ಜಂಟಿ ನಿರ್ದೇಶಕ (ಕಾರ್ಯಾಚರಣೆ), ಎಂ.ರಾಜ್ ಕಪೂರ್ ಹಾಗೂ ಲಾಟರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಪಿಎಂ ಗರೀಬ್​​ ಕಲ್ಯಾಣ್​​ ಯೋಜನೆಯಡಿ 2028ರವರೆಗೆ ಉಚಿತ ಅಕ್ಕಿ ವಿತರಣೆಗೆ ಕೇಂದ್ರ ಒಪ್ಪಿಗೆ

Last Updated : 31 minutes ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.