ನವದೆಹಲಿ: ಭಾರತದಲ್ಲಿ ಅನೇಕ ಸಿಂಗಾಪುರ್‌ಗಳನ್ನು ಸೃಷ್ಟಿಸಲು ನಾವು ಬಯಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಬುಧವಾರ ಸಿಂಗಾಪುರ್ ಪ್ರಧಾನಿ ಲಾರೆನ್ಸ್ ವಾಂಗ್ ಜೊತೆಗಿನ ಸರಣಿ ಸಭೆಯ ಬಳಿಕ ಮಾತನಾಡಿದ ಅವರು, ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುವ ಮಾರ್ಗಗಳ ಕುರಿತು ಚರ್ಚಿಸಿದರು. ದ್ವಿಪಕ್ಷೀಯ ಸಂಬಂಧಗಳು ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೆಚ್ಚಿಸಿವೆ ಎಂದು ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.
#WATCH | Prime Minister Narendra Modi along with his Singaporean counterpart Lawrence Wong visits the Semiconductor facility of AEM Holdings Ltd in Singapore.
— ANI (@ANI) September 5, 2024
(Source: DD News/ANI) pic.twitter.com/LA4BOuFGQU
ಉಭಯ ದೇಶಗಳು ಪ್ರತಿನಿಧಿಗಳು ಡಿಜಿಟಲ್ ತಂತ್ರಜ್ಞಾನ, ಆರೋಗ್ಯ ಮತ್ತು ಔಷಧ, ಶೈಕ್ಷಣಿಕ ಸಹಕಾರ ಸೇರಿದಂತೆ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ.
ಸಿಂಗಾಪುರ್ ಕೇವಲ ನಮ್ಮ ಸಹಭಾಗಿ ದೇಶವಲ್ಲ. ಇದು ಜಗತ್ತಿನ ಪ್ರತಿ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಸ್ಪೂರ್ತಿ ನೀಡುತ್ತಿದೆ. ನಾವು ಭಾರತದಲ್ಲಿ ಅನೇಕ ಸಿಂಗಾಪುರ್‌ಗಳನ್ನು ನಿರ್ಮಿಸಬೇಕಿದೆ. ಆ ದಿಕ್ಕಿನಡೆಗೆ ಒ್ಟಟಿಗೆ ಸಾಗೋಣ. ಕೌಶಲ್ಯಾಭಿವೃದ್ಧಿ, ಡಿಜಿಟಲೀಕರಣ, ಚಲನಶೀಲತೆ, ಸುಧಾರಿತ ಉತ್ಪಾದನೆ, ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆ, ಆರೋಗ್ಯ ರಕ್ಷಣೆ, ಸುಸ್ಥಿರತೆ ಮತ್ತು ಸೈಬರ್ ಭದ್ರತೆಯಲ್ಲಿ ಎರಡೂ ದೇಶಗಳ ನಡುವಿನ ಪಾಲುದಾರಿಕೆ ನಮ್ಮ ಕಾರ್ಯವಿಧಾನದ ಗುರುತು ಎಂದು ಮೋದಿ ತಿಳಿಸಿದರು.
ಉಭಯ ದೇಶಗಳ ಸಂಬಂಧದ ಹೊಸ ಅಧ್ಯಾಯದಲ್ಲಿ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಸ್ಥಾಪಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಬೀರ್ ಜೈಸ್ವಾಲ್ 'ಎಕ್ಸ್' ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ವಾಂಗ್ ಸಿಂಗಾಪುರ್ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಪ್ರಧಾನಿ ಮೋದಿ ಜೊತೆ ಇದೇ ಮೊದಲ ಬಾರಿ ಅವರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ವಾಂಗ್ ಅವರಿಗೆ ಅಭಿನಂದನೆ ತಿಳಿಸಿದರು. 4ಜಿ ನಾಯಕತ್ವದಲ್ಲಿ ಸಿಂಗಾಪುರ್ ಮತ್ತಷ್ಟು ವೇಗವಾಗಿ ಪ್ರಗತಿ ಹೊಂದಲಿದೆ ಎಂದು ಮೋದಿ ಭವಿಷ್ಯ ನುಡಿದರು.
#WATCH | Prime Minister Narendra Modi and Singapore PM Lawrence Wong at AEM Semiconductor facility, exploring synergies between the 2 countries in semiconductor manufacturing pic.twitter.com/LdFHeK8Ulb
— ANI (@ANI) September 5, 2024
ವಾಂಗ್ ಆಹ್ವಾನದ ಮೇಲೆ ಪ್ರಧಾನಿ ಮೋದಿ ಎರಡು ದಿನಗಳ ಸಿಂಗಾಪುರ್ ಪ್ರವಾಸ ಕೈಗೊಂಡಿದ್ದಾರೆ. ವಾಂಗ್ ಜೊತೆಗಿನ ಸಭೆಗೆ ಮುನ್ನ ಮೋದಿಗೆ ಸಿಂಗಾಪುರ್ ಪಾರ್ಲಿಮೆಂಟ್ ಹೌಸ್‌ನಲ್ಲಿ ಕೆಂಪು ಹಾಸಿನ ಭವ್ಯ ಸ್ವಾಗತ ನೀಡಲಾಯಿತು.
ಈ ಭೇಟಿಯಲ್ಲಿ ಮೋದಿ ಅವರು ಸಿಂಗಾಪುರ್ ರಾಷ್ಟ್ರಪತಿ ಥರ್ಮನ್ ಷಣ್ಮುಗರತ್ನಂ ಹಾಗೂ ಸಚಿವರಾದ ಲೀ ಸೀನ್ ಲೂಂಗ್, ಗೋ ಚೋಕ್ ಟಾಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ಜೊತೆಗೆ, ಉದ್ಯಮಿಗಳ ಭೇಟಿಗೆ ಕೂಡ ವ್ಯವಸ್ಥೆ ನಡೆಸಲಾಗಿದ್ದು, ಸೆಮಿಕಂಡಕ್ಟರ್ ಇಕೋಸಿಸ್ಟಂ ಕುರಿತು ಚರ್ಚಿಸಲಿದ್ದಾರೆ.
ಇದನ್ನೂ ಓದಿ: ಸಿಂಗಾಪೂರಕ್ಕೆ ಬಂದಿಳಿದ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ