ETV Bharat / bharat

ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ರೈಲು ಸಾರಿಗೆ ಸುಧಾರಣೆಗೆ ಭಾರಿ ಒತ್ತು: 12 ಲಕ್ಷ ಕೋಟಿ ಹೂಡಿಕೆಗೆ ಯೋಜನೆ - Indian Railways - INDIAN RAILWAYS

ಲೋಕಸಭಾ ಚುನಾವಣೆಯ ನಂತರದ 100 ದಿನಗಳಲ್ಲಿ ಜಾರಿಗೊಳಿಸಬೇಕಾದ ಯೋಜನೆಗಳ ಪಟ್ಟಿಯನ್ನು ಭಾರತೀಯ ರೈಲ್ವೆ ಈಗಾಗಲೇ ತಯಾರಿಸಿದೆ.

Modi 3.0 mega plan for Railways, plans investment of Rs 10-12 lakh crore

author img

By ETV Bharat Karnataka Team

Published : Apr 17, 2024, 2:04 PM IST

ನವದೆಹಲಿ : 2024ರ ಲೋಕಸಭಾ ಚುನಾವಣೆಯ ಬಳಿಕ 100 ದಿನಗಳ ಕಾಲ ಜಾರಿಗೊಳಿಸಬೇಕಾದ ಯೋಜನೆಗಳೊಂದಿಗೆ ಭಾರತೀಯ ರೈಲ್ವೆ ಸಜ್ಜಾಗಿದೆ. 24 ಗಂಟೆಗಳ ಟಿಕೆಟ್ ಮರುಪಾವತಿ ಯೋಜನೆ, ವಿವಿಧ ರೈಲ್ವೆ ಸೌಲಭ್ಯಗಳಿಗಾಗಿ ಸಮಗ್ರ ಅಪ್ಲಿಕೇಶನ್, ಮೂರು ಆರ್ಥಿಕ ಕಾರಿಡಾರ್​ಗಳು ಮತ್ತು ಸ್ಲೀಪರ್ ವಂದೇ ಭಾರತ್ ರೈಲುಗಳಂತಹ ವಿವಿಧ ಪ್ರಯಾಣಿಕ ಸ್ನೇಹಿ ಕ್ರಮಗಳ ಮೇಲೆ ಗಮನ ಹರಿಸುವುದನ್ನು ಈ ಯೋಜನೆಗಳು ಒಳಗೊಂಡಿವೆ ಎಂದು ಸರ್ಕಾರಿ ಅಧಿಕಾರಿಗಳು ಎಎನ್ಐಗೆ ತಿಳಿಸಿದ್ದಾರೆ. ಹೊಸ ಟಿಕೆಟ್ ಮರುಪಾವತಿ ಯೋಜನೆಯಡಿ 24 ಗಂಟೆಗಳಲ್ಲಿ ಮರುಪಾವತಿ ಪಡೆಯಬಹುದಾಗಿದೆ. ಈಗ ಮರುಪಾವತಿಯು ಮೂರು ದಿನಗಳಿಂದ ಒಂದು ವಾರದವರೆಗೆ ಸಮಯ ತೆಗೆದುಕೊಳ್ಳುತ್ತಿದೆ.

ರೈಲ್ವೆ ಸಮಗ್ರವಾದ 'ಸೂಪರ್ ಆ್ಯಪ್' ಒಂದನ್ನು ಪ್ರಾರಂಭಿಸಲಿದ್ದು, ಇದು ಟಿಕೆಟ್ ಕಾಯ್ದಿರಿಸುವಿಕೆ ಮತ್ತು ರದ್ದುಗೊಳಿಸುವುದರಿಂದ ಹಿಡಿದು ರೈಲುಗಳ ಲೈವ್ ಟ್ರ್ಯಾಕಿಂಗ್ ಮತ್ತು ರೈಲುಗಳಲ್ಲಿ ಆಹಾರ ಬುಕಿಂಗ್ ಮಾಡುವವರೆಗೆ ರೈಲ್ವೆಗೆ ಸಂಬಂಧಿಸಿದ ಎಲ್ಲ ಸೌಲಭ್ಯಗಳನ್ನು ಹೊಂದಿರುತ್ತದೆ. ರೈಲ್ವೆಗಾಗಿ ಹೊಸ ಸರ್ಕಾರದ 100 ದಿನಗಳ ಕಾರ್ಯಸೂಚಿಯಲ್ಲಿ ಎಲ್ಲ ರೈಲು ಪ್ರಯಾಣಿಕರಿಗೆ "ಪಿಎಂ ರೈಲ್ ಯಾತ್ರಿ ಬಿಮಾ ಯೋಜನೆ" ಎಂಬ ವಿಮಾ ಯೋಜನೆಯೂ ಸೇರಿದೆ.

ರೈಲ್ವೆಯ ಆಧುನೀಕರಣ ಯೋಜನೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ರೈಲ್ವೆಯನ್ನು ಆಧುನಿಕ ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಪರಿವರ್ತಿಸಲು 10 ರಿಂದ 12 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು. ಭಾರತದಾದ್ಯಂತ ಮೂರು ವಿಭಾಗಗಳಲ್ಲಿ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು. 100 ಕಿ.ಮೀ.ಗಿಂತ ಕಡಿಮೆ ಮಾರ್ಗಗಳಲ್ಲಿ ವಂದೇ ಮೆಟ್ರೋ, 100 ರಿಂದ 550 ಕಿ.ಮೀ ಮಾರ್ಗಗಳಲ್ಲಿ ವಂದೇ ಚೇರ್ ಕಾರ್ ಮತ್ತು 550 ಕಿ.ಮೀ. ಗಿಂತ ಹೆಚ್ಚಿನ ಮಾರ್ಗಗಳಲ್ಲಿ ವಂದೇ ಸ್ಲೀಪರ್ ರೈಲುಗಳನ್ನು ಪರಿಚಯಿಸಲಾಗುವುದು. ಪ್ರಸ್ತುತ, ವಂದೇ ಭಾರತ್ ರೈಲುಗಳು ಭಾರತದಾದ್ಯಂತ ಸುಮಾರು 50 ಮಾರ್ಗಗಳಲ್ಲಿ ಚಲಿಸುತ್ತಿವೆ.

ಅಹಮದಾಬಾದ್ - ಮುಂಬೈ ಬುಲೆಟ್ ರೈಲು 2029 ರ ಏಪ್ರಿಲ್ ವೇಳೆಗೆ ಕಾರ್ಯರೂಪಕ್ಕೆ ಬರಲಿದೆ ಮತ್ತು ಉತ್ತರ, ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಇನ್ನೂ ಮೂರು ಬುಲೆಟ್ ರೈಲು ಯೋಜನೆಗಳಿಗೆ ಕಾರ್ಯಸಾಧ್ಯತಾ ಅಧ್ಯಯನ ಮಾಡಲಾಗುವುದು. ರೈಲ್ವೆ 10 ಲಕ್ಷ ಕೋಟಿ ರೂ.ಗಳ ಹೂಡಿಕೆಯೊಂದಿಗೆ 40,000 ಕಿ.ಮೀ.ಗಿಂತ ಹೆಚ್ಚು ಉದ್ದದ ಮೂರು ಆರ್ಥಿಕ ಕಾರಿಡಾರ್​ಗಳನ್ನು ನಿರ್ಮಾಣ ಮಾಡಲಿದೆ.

ಖಾಸಗಿ ಸಹಭಾಗಿತ್ವದಲ್ಲಿ 1,300 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಆಧುನೀಕರಿಸಲಾಗುವುದು. ರೂಪಾಂತರಗೊಂಡ ನಿಲ್ದಾಣಗಳು ಶಾಪಿಂಗ್ ಮಾಲ್ ಗಳು ಮತ್ತು ವಿಮಾನ ನಿಲ್ದಾಣದಂತಹ ಕಾಯುವ ಲಾಂಜ್ ಗಳಂತಹ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುತ್ತವೆ. ಮತ್ತಷ್ಟು ನಗರಗಳಲ್ಲಿ ಮೆಟ್ರೋ ಜಾಲಗಳನ್ನು ವಿಸ್ತರಿಸಲಾಗುವುದು. ಪ್ರಸ್ತುತ, 20 ನಗರಗಳಲ್ಲಿ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ ಅಥವಾ ಈ ನಗರಗಳಲ್ಲಿ ಮೆಟ್ರೋ ನಿರ್ಮಾಣದ ಕೆಲಸವನ್ನು ಪ್ರಾರಂಭಿಸಲಾಗಿದೆ.

ರಾಪಿಡ್ ರೈಲಿನಂತಹ ಹೆಚ್ಚಿನ ಆವರ್ತನದ ರೈಲುಗಳನ್ನು ಯೋಜಿಸಲಾಗಿದೆ ಮತ್ತು ದೆಹಲಿ ಮತ್ತು ಮೀರತ್ ನಡುವಿನ ರೈಲನ್ನು ಭಾಗಶಃ ಪ್ರಾರಂಭಿಸಲಾಗಿದೆ. ಕ್ಯಾಬಿನೆಟ್ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ, ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಹೊಸ ಸರ್ಕಾರ ರಚನೆಯ ನಂತರ ತಮ್ಮ 100 ದಿನಗಳ ಕಾರ್ಯಸೂಚಿಯನ್ನು ಪ್ರಸ್ತುತಪಡಿಸಿದವು.

ಇದನ್ನೂ ಓದಿ : ಹೈಯರ್ Smart QLED ಸರಣಿಯ ಹೊಸ ಟಿವಿ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - HAIER TV

ETV Bharat Logo

Copyright © 2024 Ushodaya Enterprises Pvt. Ltd., All Rights Reserved.