ETV Bharat / bharat

ಕೆಂಪುಕೋಟೆಯ ಮೇಲೆ ನಿಂತು 98 ನಿಮಿಷ ಸುದೀರ್ಘ ಭಾಷಣ ಮಾಡಿದ ಮೊದಲ ಪ್ರಧಾನಿ ಮೋದಿ - Modi Delivers Longest Speech

author img

By PTI

Published : Aug 15, 2024, 4:15 PM IST

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸತತ 11ನೇ ಬಾರಿಗೆ ಕೆಂಪುಕೋಟೆಯ ಮೇಲೆ ನಿಂತು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮಾಡಿದರು. ಜೊತೆಗೆ, ಅತಿ ದೀರ್ಘ ಕಾಲ ಭಾಷಣ ಮಾಡಿದ ದಾಖಲೆ ಬರೆದರು.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ (ANI)

ನವದೆಹಲಿ: 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಇದು ಸ್ವಾತಂತ್ರ್ಯೋತ್ಸವದ ಇತಿಹಾಸದಲ್ಲೇ ಅತಿ ದೀರ್ಘ ಭಾಷಣ ಎಂದು ದಾಖಲಾಯಿತು.

ಇಂದು ಅವರು 98 ನಿಮಿಷಗಳ ಕಾಲ ಸತತವಾಗಿ ಮಾತನಾಡಿದರು. ಇದು ಯಾವುದೇ ಪ್ರಧಾನಿಗಳು ಮಾಡಿದ ಸ್ವಾತಂತ್ರ್ಯ ಭಾಷಣಗಳಿಗಿಂತ ಸುದೀರ್ಘವಾಗಿದೆ. ಪ್ರಧಾನಿ ಮೋದಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕದ ಮೊದಲ ಸ್ವಾತಂತ್ರ್ಯೋತ್ಸವ ಭಾಷಣ ಇದಾಗಿದೆ.

ಸ್ವಾತಂತ್ರೋತ್ಸವದ ವೇಳೆ ಮೋದಿ ಮಾಡಿದ ಸರಾಸರಿ ಭಾಷಣದ ಅವಧಿ 82 ನಿಮಿಷ. ಇದೂ ಕೂಡ ಯಾವುದೇ ಪ್ರಧಾನಿಗಿಂತ ದೊಡ್ಡ ಭಾಷಣವಾಗಿದೆ. ಇದಕ್ಕೂ ಮೊದಲು 2016ರ ಸ್ವಾತಂತ್ರ್ಯೋತ್ಸವದಲ್ಲಿ 96 ನಿಮಿಷಗಳ ಕಾಲ ಭಾಷಣ ಮಾಡಿದ್ದು ಈವರೆಗಿನ ದಾಖಲೆಯಾಗಿತ್ತು. ಈ ದಾಖಲೆಯನ್ನು ಅವರೇ ಮುರಿದಿದ್ದಾರೆ. ಮೋದಿ ಅವರು ಮಾಡಿದ ಅತಿ ಕಡಿಮೆ ಅವಧಿಯ ಭಾಷಣವೆಂದರೆ, 2017ರಲ್ಲಿ 56 ನಿಮಿಷ ಮಾತನಾಡಿರುವುದು.

ಯಾವ ವರ್ಷ, ಎಷ್ಟು ನಿಮಿಷ ಮಾತು: ಪ್ರಧಾನಿ ಮೋದಿ 2014ರಲ್ಲಿ ತಮ್ಮ ಮೊದಲ ಸ್ವಾತಂತ್ರ್ಯ ದಿನದ ಭಾಷಣ ಮಾಡಿದರು. ಅಂದು 65 ನಿಮಿಷಗಳ ಕಾಲ ಮಾತನಾಡಿದ್ದರು. 2015ರಲ್ಲಿ 88 ನಿಮಿಷ, 2016ರಲ್ಲಿ 96, 2017ರಲ್ಲಿ 56 ನಿಮಿಷ, 2018ರಲ್ಲಿ 83 ನಿಮಿಷ, 2019ರಲ್ಲಿ 92, 2020ರಲ್ಲಿ 90 ನಿಮಿಷ, 2021ರಲ್ಲಿ 88 ನಿಮಿಷ, 2022ರಲ್ಲಿ 74 ನಿಮಿಷ, 2023ರಲ್ಲಿ 90 ನಿಮಿಷಗಳ ಕಾಲ ಮಾತನಾಡಿದ್ದರು.

ಇತರ ಪ್ರಧಾನಿಗಳ ಭಾಷಣದ ಅವಧಿ: 1947ರ ಪ್ರಥಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಜವಾಹರಲಾಲ್ ನೆಹರು 72 ನಿಮಿಷ ಮಾತನಾಡಿದ್ದರು. 1997ರಲ್ಲಿ ಐ.ಕೆ.ಗುಜ್ರಾಲ್ 71 ನಿಮಿಷಗಳ ಸುದೀರ್ಘ ಭಾಷಣ ಮಾಡಿದ್ದರು. 1954ರಲ್ಲಿ ನೆಹರು ಮತ್ತು 1966ರಲ್ಲಿ ಇಂದಿರಾ ಗಾಂಧಿ 14 ನಿಮಿಷಗಳು ಮಾತ್ರ ಮಾತನಾಡಿದ್ದರು. ಇದು ಯಾವುದೇ ಪ್ರಧಾನಿಗಳ ಅತಿ ಕಡಿಮೆ ಅವಧಿಯ ಭಾಷಣವೆಂದು ದಾಖಲಾಗಿದೆ.

ಮಾಜಿ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಕೆಂಪು ಕೋಟೆಯಿಂದ ಕಡಿಮೆ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡಿದ್ದಾರೆ. ಸಿಂಗ್​ 2012ರಲ್ಲಿ 32 ನಿಮಿಷ, 2013ರಲ್ಲಿ 35 ನಿಮಿಷ ಮಾತನಾಡಿದ್ದರೆ, ವಾಜಪೇಯಿ 2002ರಲ್ಲಿ 25 ನಿಮಿಷ, 2003ರಲ್ಲಿ 30 ನಿಮಿಷಗಳಷ್ಟು ಮಾತನಾಡಿದ್ದಾರೆ.

ಸತತ 11ನೇ ಸಲ ಮೋದಿ ಧ್ವಜಾರೋಹಣ: ಪ್ರಧಾನಿ ಮೋದಿ ಸತತ 11ನೇ ಸಲ ಸ್ವಾತಂತ್ರ್ಯ ದಿನದ ಧ್ವಜಾರೋಹಣ ಮಾಡಿದ ಮೂರನೇ ಪ್ರಧಾನಿ ಎಂಬ ಗೌರವಕ್ಕೆ ಪಾತ್ರರಾದರು. ಈ ಹಿಂದೆ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಸತತ 10 ಬಾರಿ ಧ್ವಜಾರೋಹಣ ಮಾಡಿದ್ದರು. ದೇಶದ ಮೊದಲ ಪ್ರಧಾನಿಯಾದ ಜವಾಹರ್​ಲಾಲ್​ ನೆಹರು ಅವರು ಅತಿ ಹೆಚ್ಚು ಅಂದರೆ 17 ಬಾರಿ, ಇಂದಿರಾ ಗಾಂಧಿ 16 ಬಾರಿ ರಾಷ್ಟ್ರಧ್ವಜ ಹಾರಿಸಿದ್ದಾರೆ.

ಇದನ್ನೂ ಓದಿ: 2036ರ ಒಲಿಂಪಿಕ್​ಗೆ ಭಾರತ ಆತಿಥ್ಯ ವಹಿಸಲಿದೆ, ಅದಕ್ಕಾಗಿ ಈಗಿನಿಂದಲೇ ತಯಾರಿ: ಪ್ರಧಾನಿ ಮೋದಿ - PM Modi Speech In Red Fort

ETV Bharat Logo

Copyright © 2024 Ushodaya Enterprises Pvt. Ltd., All Rights Reserved.