ETV Bharat / state

ಮಂಗಳೂರು: ಅಪಘಾತದಿಂದ ಬಿದ್ದ ಆಟೋ ಮೇಲಕ್ಕೆತ್ತಿ ತಾಯಿ ರಕ್ಷಿಸಿದ ಬಾಲಕಿಗೆ ಡಿಸಿ ಸನ್ಮಾನ - DC Honors Brave Girl

ಅನಿರೀಕ್ಷಿತವಾಗಿ ಸಂಭವಿಸುವ ಅಪಘಾತದ ಸಮಯದಲ್ಲಿ ದಿಢೀರ್​ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾಗುತ್ತೆ. ಈ ಅವಧಿಯಲ್ಲಿ ಸಮಯಪ್ರಜ್ಞೆಯಿಂದ ದೊಡ್ಡ ಆಘಾತಗಳನ್ನು ತಪ್ಪಿಸಬಹುದು. ಅಂತೆಯೇ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ತನ್ನ ತಾಯಿಯನ್ನು ರಕ್ಷಣೆ ಮಾಡಿದ ಬಾಲಕಿಯನ್ನು ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದ್ದರು. ಇದೀಗ ದ.ಕ.ಜಿಲ್ಲಾಧಿಕಾರಿಯವರು ಸಹ ಬಾಲಕಿ ವೈಭವಿಯನ್ನು ಸನ್ಮಾನಿಸಿದ್ದಾರೆ.

D K DC Mullai Muhilan honored the girl who saved her mother
ತಾಯಿಯನ್ನು ರಕ್ಷಿಸಿದ ಬಾಲಕಿಯನ್ನು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್​ ಸನ್ಮಾನಿಸಿದರು. (ETV Bharat)
author img

By ETV Bharat Karnataka Team

Published : Sep 11, 2024, 12:11 PM IST

Updated : Sep 11, 2024, 12:20 PM IST

ಮಂಗಳೂರು: ಕಿನ್ನಿಗೋಳಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ರಿಕ್ಷಾ ಡಿಕ್ಕಿಯಾಗಿ ಅದರಡಿಗೆ ಬಿದ್ದ ತಾಯಿಯನ್ನು ತಕ್ಷಣವೇ ಧಾವಿಸಿ ಬಂದು ರಕ್ಷಿಸಿದ ಬಾಲಕಿ ವೈಭವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ‌ ಸನ್ಮಾನಿಸಿದರು.

ತಾಯಿಯನ್ನು ರಕ್ಷಿಸಿದ ಬಾಲಕಿಯನ್ನು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್​ ಸನ್ಮಾನಿಸಿದರು. (ETV Bharat)

ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಂಗಳವಾರ ತಮ್ಮ ಕಚೇರಿಗೆ ಬಾಲಕಿಯನ್ನು ಕರೆಯಿಸಿ ಸನ್ಮಾನಿಸಿದರು. 7ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ವೈಭವಿ ಅವರಿಗೆ ಪೇಟ, ಹೂವಿನ ಹಾರ ಹಾಕಿದ ಡಿಸಿಯವರು ಬಾಲಕಿಯ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿದರು. "ವೈಭವಿಯ ಈ ಸಮಯ ಪ್ರಜ್ಞೆ ಎಲ್ಲರಿಗೂ ಮಾದರಿಯಾಗಿದೆ. ಶಾಲಾ ಹಂತದಲ್ಲಿ ಮಕ್ಕಳಿಗೆ ಇಂತಹ ಸಾಹಸ ಕಾರ್ಯ ಮತ್ತು ಧೈರ್ಯ ಮೂಡಿ ಬರಬೇಕಿದೆ" ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಉಪನಿರ್ದೇಶಕಿ ಹೇಮಲತಾ, ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಮತ್ತು ವೈಭವಿ ಪಾಲಕರು ಉಪಸ್ಥಿತರಿದ್ದರು.

girl lifts auto
ಆಟೋ ಮೇಲಕ್ಕೆತ್ತಿದ ಬಾಲಕಿ (ETV Bharat)

ಘಟನೆ ಹಿನ್ನೆಲೆ: ಕಿನ್ನಿಗೋಳಿ ಉಲ್ಲಂಜೆಯ ರಾಮನಗರ 2ನೇ ಅಡ್ಡರಸ್ತೆ ಬಳಿ ಸೆ.6ರಂದು ರಸ್ತೆ ದಾಟುತ್ತಿದ್ದ ರಾಜರತ್ನಾಪುರ ನಿವಾಸಿ ಚೇತನಾ(35) ಎಂಬವರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಅವರ ಮೇಲೆಯೇ ಉರುಳಿಬಿದ್ದಿತ್ತು. ಇದೇ ವೇಳೆ ಆ ದಾರಿಯಾಗಿ ನಡೆದುಕೊಂಡು ಬರುತ್ತಿದ್ದ ಅವರ ಪುತ್ರಿ ತಕ್ಷಣ ತಾಯಿಯ ನೆರವಿಗೆ ಧಾವಿಸಿದ್ದರು. ಆಟೋದಲ್ಲಿದ್ದವರು ಎದ್ದೇಳುತ್ತಿದ್ದಾಗ ರಿಕ್ಷಾವನ್ನು ಮೇಲೆತ್ತಲು ಬಾಲಕಿ ನೆರವಾಗಿದ್ದಲ್ಲದೆ, ಗಾಯಾಳುವಿಗೂ ನೆರವಾಗಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಚೇತನಾ ಅವರು ಸುರತ್ಕಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ರಸ್ತೆ ದಾಟುತ್ತಿದ್ದ ತಾಯಿಗೆ ರಿಕ್ಷಾ ಡಿಕ್ಕಿ: ಧಾವಿಸಿ ಬಂದು ರಕ್ಷಿಸಿದ ಮಗಳ ಶೌರ್ಯಕ್ಕೆ ಮೆಚ್ಚುಗೆ!- ವಿಡಿಯೋ - Mangaluru Accident

Last Updated : Sep 11, 2024, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.