iPhone 16 vs Google Pixel 9 Price: ಟೆಕ್ ದೈತ್ಯ ಗೂಗಲ್ ಇತ್ತೀಚೆಗೆ ಪ್ರಮುಖ ಸ್ಮಾರ್ಟ್‌ಫೋನ್ ಸರಣಿ ಗೂಗಲ್ ಪಿಕ್ಸೆಲ್ 9 ಬಿಡುಗಡೆ ಮಾಡಿರುವುದು ನಿಮಗೆ ಗೊತ್ತಿರುವ ಸಂಗತಿ. ಇದರೊಂದಿಗೆ ಕಂಪನಿಯು ಪಿಕ್ಸೆಲ್ 9, ಪಿಕ್ಸೆಲ್ 9 ಪ್ರೊ, ಪಿಕ್ಸೆಲ್ 9 ಪ್ರೊ ಎಕ್ಸ್‌ಎಲ್ ಮತ್ತು ಪಿಕ್ಸೆಲ್ 9 ಪ್ರೊ ಫೋಲ್ಡ್ ಎಂಬ ನಾಲ್ಕು ಮಾದರಿಗಳನ್ನೂ ಬಿಡುಗಡೆ ಮಾಡಿದೆ.
ಆ್ಯಪಲ್ ತನ್ನ ಐಫೋನ್ 16 ಸರಣಿಯನ್ನು ನಿನ್ನೆಯಷ್ಟೇ ಪ್ರಸ್ತುತಪಡಿಸಿದೆ. Apple iPhone 16 ಸರಣಿಯ ಅಡಿಯಲ್ಲಿ iPhone 16, iPhone 16 Plus, iPhone 16 Pro ಮತ್ತು iPhone 16 Pro Max ಬಿಡುಗಡೆ ಮಾಡಿದೆ. ನಿಮಗೆ iPhone 16 ಅಥವಾ Google Pixel 9 ಕುರಿತು ಗೊಂದಲವಿದ್ದರೆ, ಎರಡು ಫೋನ್‌ಗಳ ನಡುವಿನ ವ್ಯತ್ಯಾಸ ಮತ್ತು ಬೆಲೆಯ ಸಂಪೂರ್ಣ ವಿವರಗಳಲ್ಲಿ ಇಲ್ಲಿ ಸಂಪೂರ್ಣವಾಗಿ ತಿಳಿಯಿರಿ.
ಗೂಗಲ್ ಪಿಕ್ಸೆಲ್ 9 ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು:
- 6.9 ಇಂಚಿನ OLED ಡಿಸ್ಪ್ಲೇ
- ರೆಸಲ್ಯೂಶನ್ 1080 x 2424 ಪಿಕ್ಸೆಲ್ಸ್
- ಬ್ರೈಟ್ನೆಸ್ 2700 ನಿಟ್ಸ್
- HDR ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಸಪೋರ್ಟ್
- Gorilla Glass Victus 2
- ಟೆನ್ಸರ್ ಜಿ4 ಪ್ರೊಸೆಸರ್, ಫೋನ್ ಟೈಟಾನ್ M2 ಕೋ-ಸೆಕ್ಯುರಿಟಿ ಪ್ರೊಸೆಸರ್
- 2GB RAM ಮತ್ತು 256GB ಸ್ಟೋರೇಜ್
- ಭಾರತದಲ್ಲಿ ಗೂಗಲ್ ಪಿಕ್ಸೆಲ್ 9 ಬೆಲೆ 79,999 ರೂ.ನಿಂದ ಪ್ರಾರಂಭ
- Peony, Porcelain, Obsidian and Wintergreen ಎಂಬ ನಾಲ್ಕು ಬಣ್ಣಗಳು ಹೊಂದಿದೆ.
ಗೂಗಲ್ ಪಿಕ್ಸೆಲ್ 9 ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಲಭ್ಯ. ಈ ಫೋನ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ ಬರುತ್ತದೆ. ಫೋನ್ 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಲೆನ್ಸ್ ಜೊತೆ 10.5-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
iPhone 16 ಬೆಲೆ, ವೈಶಿಷ್ಟ್ಯಗಳು:
- Apple iPhone 16 ಸರಣಿಯಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ಹೊಸ ಸರಣಿಯ ಫೋನ್‌ಗಳು ಏರೋಸ್ಪೇಸ್ ದರ್ಜೆಯ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿವೆ. ಇದು ಗ್ಲಾಸ್ ಬ್ಯಾಕ್ ಫೋನ್‌ಗಳಿಗಿಂತ ಎರಡು ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ ಎಂದು ಆ್ಯಪಲ್ ತಿಳಿಸಿದೆ.
- ಐಫೋನ್ 16 ಡಿಸ್ಪ್ಲೇ 6.1 ಇಂಚುಗಳಷ್ಟು ಉದ್ದವಿದೆ. ಇದನ್ನು ವೆನಿಲ್ಲಾ ರೂಪಾಂತರದೊಂದಿಗೆ ವಿನ್ಯಾಸಗೊಳಿಸಲಾಗಿದೆ. iOS 18ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಬ್ರೈಟ್ನೆಸ್ ಅನ್ನು 2000 ನಿಟ್‌ಗಳವರೆಗೆ ಹೆಚ್ಚಿಸಬಹುದು.
- ಐಫೋನ್ 16 ಪ್ಲಸ್ ಡಿಸ್ಪ್ಲೇ 6.7 ಇಂಚು ಉದ್ದವಾಗಿದೆ. ಸೂಪರ್ ರೆಟಿನಾ XDR OLED ಡಿಸ್ಪ್ಲೇ ಹೊಂದಿದೆ. ಹಿಂಭಾಗದಲ್ಲಿ 48 MP ವೈಡ್-ಆ್ಯಂಗಲ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿಗಾಗಿ ಮುಂಭಾಗ 12 MP ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾ ನಿಯಂತ್ರಣ ಬಟನ್‌ನೊಂದಿಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಬಹಳ ಸುಲಭವಾಗಿ ತೆಗೆಯಲು ಸುಧಾರಿತ ವೈಶಿಷ್ಟ್ಯವಿದೆ.
- ಬೆಲೆಗಳ ವಿವರ: 128 ಜಿಬಿ ಸ್ಟೋರೇಜ್ ಹೊಂದಿರುವ iPhone 16 ಮೂಲ ಮಾದರಿಯ ಬೆಲೆ 79,900 ರೂ.ರಿಂದ ಪ್ರಾರಂಭ. ಐಫೋನ್ 16ನಲ್ಲಿ 'AAA ಗೇಮ್ಸ್' ಆಡುವ ಅವಕಾಶ ಒದಗಿಸಲಾಗಿದೆ. ಮೊದಲು ಈ ವೈಶಿಷ್ಟ್ಯ ಪ್ರೊ ಮಾದರಿಗಳಲ್ಲಿ ಮಾತ್ರ ಸಿಗುತ್ತಿತ್ತು.
ಗೂಗಲ್ ಪಿಕ್ಸೆಲ್ 9 ಮತ್ತು iPhone 16 ಫೋನ್‌ಗಳ ವ್ಯತ್ಯಾಸಗಳನ್ನು ನೋಡಿ ಖರೀದಿದಾರರು ತಮಗಿಷ್ಟವಾದ ಫೋನ್ಗಳನ್ನು ಖರೀದಿಸಬಹುದು.
ಇದನ್ನೂ ಓದಿ: ಐಫೋನ್ 16 ಸೀರಿಸ್ ಸ್ಮಾರ್ಟ್‌ಪೋನ್ ಏಕೆ ಖರೀದಿಸಬೇಕು? ಇಲ್ಲಿದೆ 10 ಕಾರಣಗಳು - IPhone 16 Series Highlights