PAN Card Application Status Track: ಆರ್ಥಿಕ, ಹಣಕಾಸು ವಹಿವಾಟು ನಡೆಸುವ ಪ್ರತಿಯೊಬ್ಬರೂ ಪ್ಯಾನ್ ಕಾರ್ಡ್ ಹೊಂದಿರುವುದು ಅವಶ್ಯಕ. ಈಗಾಗಲೇ ನಾವು ಪ್ಯಾನ್ ಕಾರ್ಡ್‌ಗೆ ಆಫ್ಲೈನ್ ಮತ್ತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದರ ಕುರಿತು ವಿವರ ನೀಡಿದ್ದೇವೆ. NSDL, UTIITSL ವೆಬ್‌ಸೈಟ್, ಫೋನ್ ಕರೆ ಮತ್ತು SMS ಮೂಲಕ ನಿಮ್ಮ ಅಪ್ಲಿಕೇಶನ್‌ನ ಸ್ಟೇಟಸ್ ಟ್ರ್ಯಾಕ್ ಮಾಡುವುದು ಹೇಗೆ ಗೊತ್ತೇ?.
- ಪ್ಯಾನ್ ಕಾರ್ಡ್ ಸ್ಟೇಟಸ್ ಪರಿಶೀಲಿಸಲು ಬೇಕಾಗಿರುವ ದಾಖಲೆಗಳು:
NSDL ವೆಬ್‌ಸೈಟ್ ಮೂಲಕ ಸ್ಟೇಟಸ್ ಪರಿಶೀಲಿಸಲು ಸ್ವೀಕೃತಿ ಸಂಖ್ಯೆಯ ಅಗತ್ಯ.
UTITSL ಮೂಲಕ ಸ್ಥಿತಿಯನ್ನು ಪರಿಶೀಲಿಸಲು ಅಪ್ಲಿಕೇಶನ್ ಕೂಪನ್ ಸಂಖ್ಯೆ ಅಗತ್ಯ.
- ದೂರವಾಣಿ ಕರೆ:
ಯಾವುದೇ ದಿನ ಬೆಳಗ್ಗೆ 7ರಿಂದ ರಾತ್ರಿ 11ರವರೆಗೆ ನಿಮ್ಮ ಪ್ಯಾನ್ ಕಾರ್ಡ್ ಸ್ಟೇಟಸ್ ಪರಿಶೀಲಿಸಲು 15-ಅಂಕಿಯ ಸ್ವೀಕೃತಿ ಸಂಖ್ಯೆಯೊಂದಿಗೆ 020-27218080ಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು.
- ವೆಬ್‌ಸೈಟ್:
NSDL ವೆಬ್‌ಸೈಟ್ ಮೂಲಕ ಸ್ಟೇಟಸ್ ಪರಿಶೀಲಿಸುವ ವಿಧಾನ:
ಹಂತ 1 - https://tin.tin.nsdl.com/pantan/StatusTrack.html ಗೆ ಭೇಟಿ ನೀಡಿ
ಹಂತ 2 - ನಿಮ್ಮ 'Application Type' ಆಯ್ಕೆಮಾಡಿ ಮತ್ತು 'PAN- New/Change Request' ಮೇಲೆ ಕ್ಲಿಕ್ ಮಾಡಿ
ಹಂತ 3 - ನಿಮ್ಮ Acknowledge Number ನಮೂದಿಸಿ
ಹಂತ 4 - ಸ್ಟೇಟಸ್ ಪರಿಶೀಲಿಸಲು ಒದಗಿಸಿದ ಕ್ಯಾಪ್ಚಾ ಎಂಟ್ರಿ ಮಾಡಿ
ಹಂತ 5 - 'Submit' ಮೇಲೆ ಕ್ಲಿಕ್ ಮಾಡಿ
ಗಮನಿಸಿ: ಪ್ಯಾನ್ ಕಾರ್ಡ್ ಅಪ್ಲಿಕೇಶನ್‌ನ ಆನ್‌ಲೈನ್ ಟ್ರ್ಯಾಕಿಂಗ್ ಅನ್ನು ಒಬ್ಬ ವ್ಯಕ್ತಿ ಅರ್ಜಿ ಸಲ್ಲಿಸಿದ 24 ಗಂಟೆಗಳ ನಂತರ ಮಾತ್ರ ಪರಿಶೀಲಿಸಬಹುದು.
- UTIITSL (UTI ಇನ್‌ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಮತ್ತು ಸರ್ವಿಸಸ್ ಲಿಮಿಟೆಡ್) ಮೂಲಕ ಪ್ಯಾನ್ ಕಾರ್ಡ್‌ಗೆ ಸಲ್ಲಿಸಿದ ಅರ್ಜಿದಾರರು ಅರ್ಜಿಯ ಸ್ಥಿತಿ ಪರಿಶೀಲಿಸಲು ಅಪ್ಲಿಕೇಶನ್ ಸಂಖ್ಯೆಯನ್ನು ಹೊಂದಿರಬೇಕು.
PAN ಕಾರ್ಡ್ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಲು ಅರ್ಜಿದಾರರು ಕೆಳಗೆ ನೀಡಿರುವ ಸೂಚನೆಗಳನ್ನು ಅನುಸರಿಸಿ.
ಹಂತ 1 - UTIITSLಗೆ ಭೇಟಿ ನೀಡಿ
ಹಂತ 2 - ನಿಮ್ಮ 'PAN ಸಂಖ್ಯೆ' ಅಥವಾ 'ಅಪ್ಲಿಕೇಶನ್ ಕೂಪನ್ ಸಂಖ್ಯೆ' ನಮೂದಿಸಿ
ಹಂತ 3 - ನಿಮ್ಮ 'ಹುಟ್ಟಿದ ದಿನಾಂಕ' ನಮೂದಿಸಿ
ಹಂತ 4 - 'ಕ್ಯಾಪ್ಚಾ ಕೋಡ್' ಎಂಟರ್ ಮಾಡಿ
ಹಂತ 5 - 'ಸಬ್ಮಿಟ್' ಬಟನ್ ಮೇಲೆ ಕ್ಲಿಕ್ ಮಾಡಿ
ಹಂತ 6 - ಕೊನೆಯಲ್ಲಿ ನೀವು ಪ್ಯಾನ್ ಅಪ್ಲಿಕೇಶನ್‌ನ ಸ್ಟೇಟಸ್ ಕುರಿತು ವೆಬ್ಪೇಜ್ನಲ್ಲಿ ತಿಳಿಯಬಹುದು.
- PAN ಕಾರ್ಡ್ ಪೇಮೆಂಟ್ ಸ್ಟೇಟಸ್:
ಪ್ಯಾನ್ ಕಾರ್ಡ್ ಅಪ್ಲಿಕೇಶನ್‌ನ ಸ್ಥಿತಿ ತಿಳಿದುಕೊಳ್ಳುವುದರ ಜೊತೆಗೆ ಅರ್ಜಿದಾರರು ಪ್ಯಾನ್ ವಹಿವಾಟಿನ ಸ್ಥಿತಿಯನ್ನೂ ಸಹ ತಿಳಿದುಕೊಳ್ಳಬಹುದು. ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪ್ಯಾನ್ ಪಡೆಯಲು ಅನ್ವಯವಾಗುವ ಶುಲ್ಕಗಳೊಂದಿಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸುವ ಮೂಲಕ ಪೇಮೆಂಟ್ ಸ್ಟೇಟಸ್ ಟ್ರ್ಯಾಕ್ ಮಾಡಬಹುದು.
ಹಂತ 1 - https://www.tin-nsdl.com/ಗೆ ಭೇಟಿ ನೀಡಿ
ಹಂತ 2 - 'Services' ಟ್ಯಾಬ್ ಅಡಿಯಲ್ಲಿ 'Pan' ಆಯ್ಕೆಮಾಡಿ
ಹಂತ 3 - ಆನ್‌ಲೈನ್ ಅಪ್ಲಿಕೇಶನ್‌ಗಾಗಿ Know Status of Your Credit card/Debit card/Net Banking transaction for online application ಮೇಲೆ ಕ್ಲಿಕ್ ಮಾಡಿ
ಹಂತ 4 - ಮುಂದೆ, 'Payment through Credit card/Debit card/Net banking' ಪೇಜ್‌ನಲ್ಲಿ ಅಥವಾ 15-ಅಂಕಿಯ acknowledgment number ಪ್ರದರ್ಶಿಸುವ ವಹಿವಾಟು ಸಂಖ್ಯೆಯನ್ನು ಒದಗಿಸಿ.
ಹಂತ 5 - ಅರ್ಜಿದಾರರ ಹೆಸರನ್ನು ನಮೂದಿಸಿ
ಹಂತ 6 - ಅರ್ಜಿದಾರರ ಪ್ರಕಾರವನ್ನು ಅವಲಂಬಿಸಿ ಹುಟ್ಟಿದ ದಿನಾಂಕ/Date of Incorporation/ಅಗ್ರಿಮೆಂಟ್ ದಿನಾಂಕ/Partnership or Trust Deed ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಒದಗಿಸಿ.
ಹಂತ 7 - 'ಶೋ ಸ್ಟೇಟಸ್' ಮೇಲೆ ಕ್ಲಿಕ್ ಮಾಡಿ
ಹಂತ 8 - ಮೇಲೆ ತಿಳಿಸಿದ ಹಂತಗಳ ಮೂಲಕ ನೀವು ವಹಿವಾಟಿನ ಸ್ಥಿತಿಯನ್ನು ತಿಳಿಯಬಹುದು.