ETV Bharat / bharat

ಮಹಿಳೆಯರಿಗೆ ತಿಂಗಳಿಗೆ ಒಂದು ದಿನ ಮುಟ್ಟಿನ ರಜೆ ಘೋಷಣೆ - Menstrual Leave Policy

author img

By ETV Bharat Karnataka Team

Published : Jul 25, 2024, 4:13 PM IST

Updated : Jul 25, 2024, 4:36 PM IST

ಚತ್ತೀಸ್​ಗಡದಲ್ಲಿ ಉದ್ಯೋಗಸ್ಥ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಕಾನೂನು ವಿವಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಮಾಸಿಕ ಋತುಚಕ್ರದ ಒಂದು ದಿನ ವಿದ್ಯಾರ್ಥಿನಿಯರು ಈ ರಜೆಯನ್ನು ಪಡೆಯಬಹುದು ಎಂದು ಘೋಷಿಸಿದೆ.

MENSTRUAL LEAVE POLICY
ಮುಟ್ಟಿನ ರಜೆ ಘೋಷಣೆ (ETV Bharat)

ರಾಯ್​ಪುರ: ಉದ್ಯೋಗಸ್ಥ ಮಹಿಳೆಯರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಚತ್ತೀಸ್​​ಗಢದಲ್ಲಿ ಈ ರಜೆ ನೀತಿಯನ್ನು ಜಾರಿಗೆ ತರಲಾಗಿದೆ. ಚತ್ತೀಸ್​ಗಢದ ಹಿದಾಯುತ್ತುಲ್ಲಾ ಕಾನೂನು ವಿಶ್ವವಿದ್ಯಾಲಯ ಈ ಮುಟ್ಟಿನ ರಜೆ ನೀತಿಯನ್ನು ಈಗಾಗಲೇ ಆರಂಭಿಸಿರುವುದಾಗಿ ಘೋಷಿಸಿದೆ. ಮಾಸಿಕ ಋತುಚಕ್ರದ ಕಠಿಣವಾದ ಒಂದು ದಿನದಲ್ಲಿ ವಿದ್ಯಾರ್ಥಿನಿಯರು ಈ ರಜೆಯನ್ನು ಪಡೆಯಬಹುದು ಎಂದು ಘೋಷಿಸಿದೆ. ಈ ನೀತಿಯನ್ನು ಜುಲೈ 1ರಿಂದಲೇ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ.

ಚತ್ತೀಸ್​ಗಢದಲ್ಲಿ ಮುಟ್ಟಿನ ರಜೆ: ಈ ರಜೆ ನೀತಿ ಕುರಿತು ಮಾತನಾಡಿರುವ ಕಾನೂನು ವಿಶ್ವವಿದ್ಯಾಯಲದ ವಕ್ತಾರರು, ವಿದ್ಯಾರ್ಥಿನಿಯರು ಮಾಸಿಕವಾಗಿ ತಮ್ಮ ಋತುಚಕ್ರದ ದಿನಗಳಲ್ಲಿ ಒಂದು ದಿನ ರಜೆಯನ್ನು ಪಡೆಯಬಹುದಾಗಿದೆ. ಈ ದಿನ ಅವರು ತಮ್ಮ ಹಾಜರಾತಿ ಪಡೆಯಲಿದ್ದಾರೆ. ಸಾಮಾನ್ಯ ಕಾಲೇಜು ದಿನಗಳಲ್ಲಿ ಈ ರೀತಿಯ ಹಾಜರಾತಿ ಪ್ರಯೋಜನವನ್ನು ಅವರು ಹೊಂದಬಹುದಾಗಿದೆ. ಮುಂದಿನ ದಿನದಲ್ಲಿ ಪರೀಕ್ಷೆಗಳಂತಹ ಸಂದರ್ಭದಲ್ಲಿ ವಿಶೇಷ ಅಗತ್ಯತೆ ಮೇಲೆ ರಜೆಗಳನ್ನು ನೀಡುವ ಕುರಿತು ಚಿಂತಿಸಲಾಗುವುದು. ವಿದ್ಯಾರ್ಥಿನಿಯರು ಅನಿಯಮಿತ ಋತುಚಕ್ರ ಸಿಂಡ್ರೋಮ್​ ಅಥವಾ ಪಿಸಿಒಎಸ್​ ಸಮಸ್ಯೆಗಳಿಗೆ ರಜೆ ಪಡೆಯಬಹುದಾಗಿದೆ. ಪ್ರತಿ ಸೆಮಿಸ್ಟರ್‌ಗೆ ಪ್ರತಿ ವಿಷಯಕ್ಕೆ ಆರು ತರಗತಿಗಳಲ್ಲಿ ಈ ನೀತಿ ಮೂಲಕ ಹಾಜರಾತಿ ಪಡೆಯಬಹುದಾಗಿದೆ ಎಂದರು.

ಹೆಚ್​ಎನ್​ಎಲ್​ಯು ನಡೆ: ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಿದ್ದಕ್ಕೆ ಶೈಕ್ಷಣಿಕ ಮಂಡಳಿಗೆ ಹೆಚ್​ಎನ್​ಎಲ್​​ಯುನ ಉಪ ಕುಲಪತ ಪ್ರೊ ವಿ. ವಿವೇಕನಂದನ್​ ಧನ್ಯವಾದ ತಿಳಿಸಿದ್ದಾರೆ. ಯುವ ಮಹಿಳಾ ವಿದ್ಯಾರ್ಥಿಗಳ ವಿಶೇಷ ಅಗತ್ಯತೆಗೆ ಸೌಲಭ್ಯಗಳನ್ನು ಅರ್ಥ ಮಾಡಿಕೊಂಡು ಈ ರಜೆ ನೀತಿಯನ್ನು ಅಳವಡಿಸಲಾಗಿದೆ. ಇಂತಹ ರಜೆಗೆ ಬೆಂಬಲಿಸಿದ ಶೈಕ್ಷಣಿಕ ಮಂಡಳಿಗೆ ಧನ್ಯವಾದಗಳು ಎಂದಿದ್ದಾರೆ.

ಏನಿದು ಮುಟ್ಟಿನ ರಜೆ: ಋತುಚಕ್ರ ಎಂಬುದು ಎಲ್ಲ ಮಹಿಳೆಯರಲ್ಲಿ ಒಂದೇ ರೀತಿಯ ಅನುಭವ ನೀಡುವುದಿಲ್ಲ. ಕೆಲವರಲ್ಲಿ ಇದು ಅಸಾಧ್ಯ ಪರಿಸ್ಥಿತಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಉದ್ಯೋಗಸ್ಥ ಮಹಿಳೆಯರು ಅಥವಾ ವಿದ್ಯಾರ್ಥಿನಿಯರಿಗೆ ತಮ್ಮ ಮಾಸಿಕ ಋತುಚಕ್ರದ ನೋವುದಾಯಕ ದಿನಗಳಲ್ಲಿ ರಜೆ ಪಡೆಯುವ ಸೌಲಭ್ಯವನ್ನು ಈ ನೀತಿ ಒಳಗೊಂಡಿದೆ. ಈ ರೀತಿ ನೀತಿ ಅಳವಡಿಕೆ ಕುರಿತು ಸಂಸತ್ತಿನಲ್ಲೀ ಪ್ರಸ್ತಾಪವಾಗಿದೆ. ಅಲ್ಲದೆ ಮುಟ್ಟಿನ ರಜೆ ಕುರಿತು ಮಾದರಿ ನೀತಿ ರೂಪಿಸುವಂತೆ ಇತ್ತೀಚೆಗೆ ಸುಪ್ರೀಂಕೋರ್ಟ್​ ಕೂಡ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಇದನ್ನೂ ಓದಿ: ಮಹಿಳೆಯರ ಮುಟ್ಟಿನ ರಜೆ ಕುರಿತು ನೀತಿ ರೂಪಿಸುವಂತೆ ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ

Last Updated : Jul 25, 2024, 4:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.