ETV Bharat / bharat

ಮೇಕೆದಾಟು ಅಣೆಕಟ್ಟಿನಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಲಾಭ; ಡಿಸಿಎಂ ಡಿ ಕೆ ಶಿವಕುಮಾರ್ - D K Shivakumar - D K SHIVAKUMAR

ಡಿಸಿಎಂ ಡಿ. ಕೆ ಶಿವಕುಮಾರ್ ಅವರಿಂದು ಚೆನ್ನೈನ ಚೆಟ್​​ಪೇಟ್​​ನಲ್ಲಿರುವ ಬಯೋ ಸಿಎನ್​​ಜಿ ಪ್ಲಾಂಟ್​ಗೆ ಭೇಟಿ ನೀಡಿದರು. ನಂತರ ಜೈವಿಕ ಸಿಎನ್​​ಜಿ ಕೇಂದ್ರದಲ್ಲಿ ಪರಿಶೀಲನೆ ನಡೆಸಿದರು.

d-k-shivakumar
ಬಯೋ ಸಿಎನ್​​ಜಿ ಪ್ಲಾಂಟ್​ಗೆ ಡಿಸಿಎಂ ಡಿ ಕೆ ಶಿವಕುಮಾರ್ ಭೇಟಿ (ETV Bharat)
author img

By ETV Bharat Karnataka Team

Published : Sep 3, 2024, 4:11 PM IST

ಚೆನ್ನೈ (ತಮಿಳುನಾಡು) : ಮೇಕೆದಾಟು ಅಣೆಕಟ್ಟು ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಲಾಭ ಎಂದು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ಹೇಳಿದರು.

ತಮಿಳುನಾಡಿನಲ್ಲಿ ಘನತ್ಯಾಜ್ಯ ನಿರ್ವಹಣಾ ಕಾರ್ಯಕ್ರಮದ ಅನುಷ್ಠಾನ ಮತ್ತು ಕರ್ನಾಟಕ ರಾಜ್ಯದಲ್ಲಿ ಅದರ ಅನುಷ್ಠಾನಕ್ಕೆ ಸಂಬಂಧಿಸಿದ ಅಧ್ಯಯನಕ್ಕಾಗಿ ಚೆನ್ನೈನ ಚೆಟ್‌ಪೇಟ್‌ನಲ್ಲಿರುವ ಬಯೋ ಸಿಎನ್‌ಜಿ ಪ್ಲಾಂಟ್‌ಗೆ ಅವರಿಂದು ಭೇಟಿ ನೀಡಿದರು.

ಅವರು ಆಲಂದೂರು ವಲಯದ ಅಡಿಯಲ್ಲಿ ಖಾಸಗಿ ತ್ಯಾಜ್ಯ ಸಂಗ್ರಹ ಕಂಪನಿ ಮತ್ತು ಚೆಟ್‌ಪೇಟ್‌ನಲ್ಲಿ ನಗರಸಭೆ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈವಿಕ-ಸಿಎನ್‌ಜಿ (ಸಂಕುಚಿತ ನೈಸರ್ಗಿಕ ಅನಿಲ) ನೈಸರ್ಗಿಕ ಅನಿಲ ಉತ್ಪಾದನಾ ಕೇಂದ್ರದಲ್ಲಿ ಸಂಶೋಧನೆ ನಡೆಸಿದರು. ನಂತರ ಕೊಡುಂಕಯ್ಯೂರು ಮತ್ತು ಮಾಧವರಂನಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳಿಗೂ ಭೇಟಿ ನೀಡಿದರು.

ಈ ಕುರಿತು ಮಾತನಾಡಿರುವ ಅವರು, ಘನತ್ಯಾಜ್ಯ ನಿರ್ವಹಣೆ ಮತ್ತು ಅನಿಲ ಉತ್ಪಾದನೆ ಹಾಗೂ ಸಿಎನ್‌ಜಿ ಹೇಗೆ ಉತ್ಪಾದನೆಯಾಗುತ್ತದೆ ಎಂಬುದನ್ನು ನೋಡಲು 15ಕ್ಕೂ ಹೆಚ್ಚು ಅಧಿಕಾರಿಗಳ ತಂಡದೊಂದಿಗೆ ನಾನು ಚೆನ್ನೈಗೆ ಬಂದಿದ್ದೇನೆ. ಚೆನ್ನೈನಲ್ಲಿ ನಡೆಯುತ್ತಿರುವ ಸ್ವಚ್ಛತಾ ಸೌಲಭ್ಯದಿಂದ ನಾವು ತುಂಬಾ ಪ್ರಭಾವಿತರಾಗಿದ್ದೇವೆ ಎಂದರು.

ಇಲ್ಲಿ ಇವರು ವಿಭಿನ್ನ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಅದು ನಮಗೆಲ್ಲರಿಗೂ ಉತ್ತಮ ಕಲಿಕೆಯಾಗಿದೆ. ಕಲಿಯಲು ಇನ್ನೂ ಬಹಳಷ್ಟಿದೆ. ಇಲ್ಲಿಗೆ ಬರಬೇಕು ಎಂದುಕೊಂಡಿದ್ದೆ. ಹೀಗಾಗಿ ನಾವಿಂದು ಚೆನ್ನೈ ಮಾದರಿಯನ್ನು ಅಧ್ಯಯನ ಮಾಡಲು ಬಂದಿದ್ದೇವೆ ಎಂದು ಡಿಕೆಶಿ ಹೇಳಿದರು.

D K Shivakumar
ನೈಸರ್ಗಿಕ ಅನಿಲ ಉತ್ಪಾದನಾ ಕೇಂದ್ರದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

ಮೇಕೆದಾಟು ಯೋಜನೆ ಕುರಿತು ಮಾತನಾಡಿದ ಅವರು, "ಎರಡೂ ರಾಜ್ಯಗಳಲ್ಲಿ ಮಳೆ ದೇವರುಗಳು ನಮಗೆ ಸಹಾಯ ಮಾಡಿದ್ದಾರೆ. ತಮಿಳುನಾಡು ಜನರಿಗೂ ಸದ್ಬುದ್ಧಿ ಮೂಡಲಿ. ಮೇಕೆದಾಟು ಯೋಜನೆ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ" ಎಂದು ತಿಳಿಸಿದರು.

ಇದನ್ನೂ ಓದಿ : ಸೆ. 6 ಗೌರಿ ಹಬ್ಬದಂದು ಎತ್ತಿನಹೊಳೆ ಯೋಜನೆ ಏತ ಕಾಮಗಾರಿ ಉದ್ಘಾಟನೆ : ಡಿಸಿಎಂ ಡಿ ಕೆ ಶಿವಕುಮಾರ್ - DCM D K Shivakumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.